ಪಾಂಡವಪುರದಲ್ಲಿ ಚನ್ನಮ್ಮರ 11ನೇ ದಿನ ಕಾರ್ಯ: ಜನರಿಗೆ ಅನ್ನಸಂತರ್ಪಣೆ

KannadaprabhaNewsNetwork |  
Published : Jul 31, 2026, 01:45 AM IST
30ಕೆಎಂಎನ್ ಡಿ20 | Kannada Prabha

ಸಾರಾಂಶ

ಸಾಮಾನ್ಯ ಪ್ರಜೆ ರೀತಿ ಎಲೆಮರೆ ಕಾಯಿಯಂತೆ ಕೆಲಸ ಮಾಡುವ ಮೂಲಕ ಚನ್ನಮ್ಮ ಇತರರಿಗೆ ಮಾದರಿಯಾಗಿದ್ದಾರೆ. ದೇವೇಗೌಡರು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಕಾರ್ಯಗಳು ಹಾಗೂ ಇತರೆ ಅಭಿವೃದ್ಧಿ ಕೆಲಸ ಮಾಡಲು ಚನ್ನಮ್ಮ ಅವರು ಪ್ರೇರೆಣೆಯಾಗಿದ್ದಾರೆ.

ಪಾಂಡವಪುರ:

ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮರ 11ನೇ ದಿನ ಕಾರ್ಯವನ್ನು ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಆಚರಣೆ ಮಾಡಿದರು.

ಗ್ರಾಮದಲ್ಲಿ ಚನ್ನಮ್ಮ ದೇವೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚ‌ನೆ ಹಾಗೂ ವಿಶೇಷ ಪೂಜೆ‌ ಸಲ್ಲಿಸುವ ಮೂಲಕ ಉತ್ತರ ಕ್ರಿಯಾಧಿ ಕಾರ್ಯಕ್ರಮ ಆಚರಿಸುವ ಮೂಲಕ ಚನ್ನಮ್ಮ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಚನ್ನಮ್ಮ ದೇವೇಗೌಡ ಅವರು ತಾವೊಬ್ಬ ಪ್ರಧಾನಿ ಪತ್ನಿ ಹಾಗೂ ಮುಖ್ಯಮಂತ್ರಿಗಳ ತಾಯಿಯಾಗಿದ್ದರೂ ಯಾವುದೇ ಹಮ್ಮು, ಬಿಮ್ಮು ಹಾಗೂ ಆಹಂ ತೋರಿದವರಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಮಾನ್ಯ ಪ್ರಜೆ ರೀತಿ ಎಲೆಮರೆ ಕಾಯಿಯಂತೆ ಕೆಲಸ ಮಾಡುವ ಮೂಲಕ ಚನ್ನಮ್ಮ ಇತರರಿಗೆ ಮಾದರಿಯಾಗಿದ್ದಾರೆ. ದೇವೇಗೌಡರು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಕಾರ್ಯಗಳು ಹಾಗೂ ಇತರೆ ಅಭಿವೃದ್ಧಿ ಕೆಲಸ ಮಾಡಲು ಚನ್ನಮ್ಮ ಅವರು ಪ್ರೇರೆಣೆಯಾಗಿದ್ದಾರೆ. ಪುನೀತ್ ರಾಜಕುಮಾರ್ ಅವರಂತೆಯೇ ಚನ್ನಮ್ಮ ಅವರು ಕೂಡ ಅವರ ಕಾಲ ನಂತರ ಇಡೀ ದೇಶ ವ್ಯಾಪಿ ತಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಹ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವರೊಬ್ಬ ನಿಜವಾದ ಅನ್ನಪೂರ್ಣೆ ಎಂದು ಬಣ್ಣಿಸಿದರು. ಚನ್ನಮ್ಮರ ಉತ್ತರಾದಿಕ್ರಿಯೆಗೆ ಹೊರಟ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳುಹಲಗೂರು:ಗೊಲ್ಲರಹಳ್ಳಿ ಗ್ರಾಮದಿಂದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮದಲ್ಲಿ ನಡೆಯುತ್ತಿರುವ ಚನ್ನಮ್ಮರ ಉತ್ತರಾದಿಕ್ರಿಯೆಗೆ ಗುರುವಾರ ಬೆಳಗ್ಗೆ ವಾಹನದಲ್ಲಿ ತೆರಳಿದರು.

ಗ್ರಾಮದ ಮಾಜಿ ಪ್ರಧಾನಿ ದೇವೇಗೌಡರ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿಗಳು ಬ್ಯಾಡರಹಳ್ಳಿ ಗ್ರಾಪಂಗೆ ಸೇರಿದ ಎಲ್ಲಾ ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ಮಂದಿ ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ತೆರಳಿದರು.ಈ ವೇಳೆ ಗ್ರಾಪಂ ಸದಸ್ಯ ರಾಜೇಶ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಧರ್ಮಪತ್ನಿ ಚನ್ನಮ್ಮರ ಅಗಲಿಕೆಯಿಂದ ಸಾಕಷ್ಟು ಬಳಲಿದ್ದಾರೆ. ಅವರಿಗೆ ದೇವರು ದುಃಖ ಬರಿಸುವ ಶಕ್ತಿ ಕರುಣಿಸ. ನಾವು ಹೊಳೆನರಸೀಪುರಕ್ಕೆ ತಲುಪಿ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ 11ನೇ ದಿನದ ಕಾರ್ಯದಲ್ಲಿ ಪಾಲ್ಗೊಂಡು ಚನ್ನಮ್ಮರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಸಮಾಧಿಗೆ ನಮನ ಸಲ್ಲಿಸುತ್ತೇವೆ ಎಂದರು.

ಈ ವೇಳೆ ಶಿವಲಿಂಗೇಗೌಡ, ಸಿದ್ದೇಗೌಡ, ಶಿವಣ್ಣೇಗೌಡ (ನಾಡಗೌಡರು), ಎಲುವೇಗೌಡನ ಪುತ್ರ ಶಿವಲಿಂಗೇಗೌಡ, ಸಿದ್ದರಾಜು, ಕಾಳಮಾದು, ರಾಜು, ರವಿ, ಕಿರಣ, ಸ್ವಾಮಿ ಸೇರಿದಂತೆ ಬ್ಯಾಡರಹಳ್ಳಿ ಹಾಗೂ ಗೊಲ್ಲರಹಳ್ಳಿ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಬರಗಾಲ, ಸಿಎಂರಿಂದ ದೆಹಲಿ ಕ್ಯಾಂಪೇನ್: ಛಲವಾದಿ ನಾರಾಯಣಸ್ವಾಮಿ ಕಿಡಿ
ಅಧಿಕಾರಿಗಳ ಗೈರು ಹಾಜರಿ ಖಂಡಿಸಿ ಗ್ರಾಮಸಭೆ ಬಹಿಷ್ಕಾರ