ಕನ್ನಡಪ್ರಭ ವಾರ್ತೆ ಉಡುಪಿಉಪಚುನಾವಣೆಯ ದಿನಾಂಕಗಳು ಘೋಷಣೆಯಾಗಿದೆ, 23ರೊಳಗೆ ನಾಮಪತ್ರಸಲ್ಲಿಸಬೇಕಾಗಿದೆ, ಸಮಯ ತುಂಬಾ ಕಡಿಮೆ ಇದೆ, ಆದ್ದರಿಂದ ಎನ್‌ಡಿಎಯಲ್ಲಿ ನಮ್ಮ ಪಾರ್ಟ್ನರ್ಸ್ ಪಕ್ಷಗಳ ಜೊತೆ ಚರ್ಚಿಸಿ 2-3 ದಿನಗಳಲ್ಲಿ ಮೂರೂ ಕ್ಷೇತ್ರದ ಅಭ್ಯರ್ಥಿಗಳನ್ನು ಪ್ರಕಟಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಅವರ ಬಂಡಾಯಯ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡುತ್ತೇವೆ, ನಾವು ಈಗಾಗಲೇ ಕುಮಾರಸ್ವಾಮಿ ಹಾಗೂ ದೆಹಲಿಯ ವರಿಷ್ಠರ ಹತ್ರನೂ ಯೋಗೇಶ್ವರ ಅಭ್ಯರ್ಥಿ ಆದರೆ ಒಳ್ಳೆಯದು ಎಂದಿದ್ದೇವೆ. ಆದರೆ ಕುಮಾರಸ್ವಾಮಿಯವರಿಗೆ ಈ ವಿಚಾರದಲ್ಲಿ ಅಧಿಕಾರ ಇದೆ, ಅವರು ಹೇಳಿದ ತೀರ್ಮಾನದಂತೆ ಮಾಡುತ್ತೇವೆ. ನಾನು ಯೋಗೇಶ್ವರ್ ಜೊತೆ ಮಾತನಾಡುತ್ತೇನೆ. ಸರ್ವಸಮ್ಮತ ಅಭ್ಯರ್ಥಿಯಾಗುವಂತೆ ಪ್ರಯತ್ನಿಸಲಾಗುತ್ತಿದೆ ಎಂದರು.* ಡಿಕೆಶಿ ಅಭ್ಯರ್ಥಿಯಾಗಲ್ಲ
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಅವರು ಎಲ್ಲ ಕಡೆನೂ ಹಾಗೇ ಹೇಳ್ತಾರೆ. ಆದರೆ ನೂರಕ್ಕೆ ನೂರು ಡಿ.ಕೆ. ಶಿವಕುಮಾರ್ ಸ್ಪರ್ಧಿಸುವುದಿಲ್ಲ. ಮಾರ್ಕ್ ಮಾಡಿಟ್ಟುಕೊಳ್ಳಿ ನಾನು ಹೇಳ್ತಾ ಇದ್ದೇನೆ, ಅಲ್ಲಿ ಬೇರೆ ಅಭ್ಯರ್ಥಿ ನಿಲ್ತಾರೆ. ಇದು ಕಾಂಗ್ರೆಸ್ ಪಕ್ಷದ ನಿರ್ಧಾರವಾಗಿದೆ. ಆದರೆ ಚುನಾವಣೆಗೊಂದು ಸ್ಟಂಟ್ ಬೇಕಲ್ಲ ಅದಕ್ಕೆ ಹೇಳಿದ್ದಾರೆ ಎಂದರು.* ಖರ್ಗೆಗೆ ಸಿಎಂ ಆಗಲು ಆಸೆ
ಖರ್ಗೆ ಕುಟುಂಬದ ಸೈಟ್ ವಾಪಸ್ ಬಗ್ಗೆ ಮಾತನಾಡಿದ ಅಶೋಕ್, ಬಿಜೆಪಿಯ ಹೋರಾಟದಿಂದ ಇವತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬಂದಿದೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗುವ ಆಸೆ ತುಂಬಾ ಇದೆ. 30-40 ವರ್ಷ ಪ್ರಯತ್ನಿಸಿದರೂ ಸಿಎಂ ಆಗಲಿಕ್ಕಾಗಿಲ್ಲ, ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಿಂದ ಖರ್ಗೆ ಅವರಿಗೆ ಈಗ ಬಂದು ಅವಕಾಶ ಬಂದಿದೆ. ಸಿಎಂ ಆಗಲು ಸೈಟ್ ಕಂಟಕ ಇದ್ರೆ, ಅದು ಕಳೆದೋಗ್ಲಿ ಎಂದು ವಾಪಸ್ ಕೊಟ್ಟಿದ್ದಾರೆ ಅಷ್ಟೇ ಎಂದರು.* ಹೋರಾಟ ಸದ್ಯ ಮುಂದಕ್ಕೆಯಾವುದೇ ಕಾರಣಕ್ಕೂ ಮುಡಾ ಹಗರಣ, ವಾಲ್ಮೀಕಿ ಹಗರಣ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಆದರೆ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಇದೆ. ಸಮಯ ಕೂಡ ಕಡಿಮೆ ಇದೆ. ನಾವು ಹುಬ್ಬಳ್ಳಿ ವಿಚಾರವಾಗಿ ಹೋರಾಟ ನಿರ್ಧರಿಸಿದ್ದೆವು, ಎಲ್ಲ ಶಾಸಕರು ದೆಹಲಿ ಚಲೋ ಮಾಡಬೇಕಿಂದಿದ್ದೆವು, ಸದ್ಯ ಚುನಾವಣೆ ಇರುವುದರಿಂದ ಹುಬ್ಬಳ್ಳಿ ಹೋರಾಟವನ್ನು ಮುಂದೆ ಹಾಕಿದ್ದೇವೆ, ದೆಹಲಿ ಚಲೋ ಮುಂದೂಡಿದ್ದೇವೆ ಎಂದು ತಿಳಿಸಿದರು.