ಚನ್ನರಾಯಪಟ್ಟಣ: ತಾಲೂಕಿನ ಡಿ. ಚಿಕ್ಕಗೊಂಡನಹಳ್ಳಿ ಗ್ರಾಮದ ರೈತ ಸಾಲಬಾಧೆ ತಾಳಲಾರದೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡಿ.ಚಿಕ್ಕಗೊಂಡನಹಳ್ಳಿಯಲ್ಲಿ ೧.೧೦ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು ಕಳೆದ ೪೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು. ಈ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ನಾಲ್ಕು ದಶಕದಲ್ಲಿ ೧೦ಕ್ಕೂ ಹೆಚ್ಚು ಸಲ ಸಾಗುವಳಿ ಮಂಜೂರು ಅರ್ಜಿ ಸಲ್ಲಿಸಿದ್ದರೂ ೧೯೮೨ರಿಂದ ಮಂಜೂರಾತಿ ಮಾಡದೆ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈತ ಕಾಳೇಗೌಡ ನ. ೨೪ರಂದು ಮನೆಯಿಂದ ಹೊರ ಹೋಗಿದ್ದಾರೆ. ರಾತ್ರಿಯಾದರೂ ಮನೆಗೆ ಹಿಂದುರುಗದೆ ಇದುದ್ದರಿಂದ ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಿದ್ದಾರೆ ಸ್ನೇಹಿತರನ್ನು ವಿಚಾರಿಸಿದಾಗ ಹೇಮಾವತಿ ಎಡದಂಡೆ ನಾಲೆ ಸಮೀಪದಲ್ಲಿ ಪಾದರಕ್ಷೆಗಳು, ಟವಲ್ ಹಾಗೂ ಜರ್ಕಿನ್ ಇರುವುದು ಪತ್ತೆಯಾಗಿದೆ, ನಾಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಿ ನಾಲೆ ನೀರಿನಲ್ಲಿ ಹುಡುಕಿದರೂ ಮೃತ ದೇಹ ಪತ್ತೆಯಾಗಿಲ್ಲ. ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಗ್ರಾಮ ಬಳಿ ಹೇಮಾವತಿ ನಾಲೆಯಲ್ಲಿ ೧೮ ದಿವಸದ ನಂತರ ಮೃತ ದೇಹ ಪತ್ತೆಯಾಗಿದೆ, ಶ್ರವಣಬೆಳಗೊಳ ಠಾಣೆಯ ಪೊಲೀಸರು ಮೃತದೇಹವನ್ನು ಮರಣೊತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಸ್ಥಳಾಂತರಿಸಿದ್ದಾರೆ.