ಗಾಯಿತ್ರಿ ಮಂತ್ರ ಪಠಣದಿಂದ ಆರೋಗ್ಯ ವೃದ್ಧಿ

KannadaprabhaNewsNetwork |  
Published : May 01, 2024, 01:17 AM IST
ಮಧುಗಿರಿಯಶ್ರೀಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಶ್ರೀಶಂಕರ ಸೇವಾ ಸಮಿತಿಯಂದೆ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂತನ ವಟುಗಳು ಮತ್ತು ಪದಾಧಿಕಾರಿಗಳು ಇದ್ದಾರೆ.  | Kannada Prabha

ಸಾರಾಂಶ

ಗಾಯಿತ್ರಿ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಏಕಾಗ್ರತೆ ಸುಧಾರಿಸಲಿದೆ ಎಂದು ವೇದ ಬ್ರಹ್ಮಂ ವಿನಯ್‌ ಶರ್ಮ ಹೇಳಿದರು.

ಮಧುಗಿರಿ: ಗಾಯಿತ್ರಿ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಏಕಾಗ್ರತೆ ಸುಧಾರಿಸಲಿದೆ ಎಂದು ವೇದ ಬ್ರಹ್ಮಂ ವಿನಯ್‌ ಶರ್ಮ ಹೇಳಿದರು.

ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಶಂಕರ ಸೇವಾ ಸಮಿತಿಯಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಯಿತ್ರಿ ಮಂತ್ರ ಪಠಣದ ವೇಳೆ ಉತ್ಪತ್ತಿಯಾಗುವ ಧನಾತ್ಮಕ ಕಂಪನಗಳು ನಮ್ಮನ್ನು ಶಾಂತಗೊಳಿಸಿ, ನಕಾರತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೆ ಮನುಷ್ಯನಿಗೆ ಯಶಸ್ಸು ಲಭಿಸುವುದರೊಂದಿಗೆ ಆರೋಗ್ಯ ವೃದ್ಧಿಸುತ್ತದೆ. ನೂತನ ವಟುಗಳು ಪ್ರತಿ ದಿನ ಸಂದ್ಯಾವಂದನೆ ಮಾಡುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು ಎಂದರು.

ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎನ್‌.ಕುಮಾರ್‌, ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಎಂ.ಎಸ್‌.ಬಾಲಕೃಷ್ಣ, ಸುದರ್ಶನಂ, ರಘುನಾಥ್‌, ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್‌.ಸತ್ಯನಾರಾಯಣ್, ಕಾರ್ಯದರ್ಶಿ ಶಕುಂತಲಾ, ಖಜಾಂಚಿ ಕೆ.ಲಕ್ಷ್ಮೀಪ್ರಸಾದ್‌, ಪದಾಧಿಕಾರಿಗಳಾದ ಕೆ.ನರಾಯಣ್‌, ಬಡಕನಹಳ್ಳಿ ರಾಘವೇಂದ್ರ, ಎಚ್‌.ವಿ.ಮಂಜುನಾಥ್‌, ಶ್ರೀನಿವಾಸ್‌, ಸಂಜೀವಮೂರ್ತಿ, ಶ್ರೀನಿವಾಸ್‌ ಮೂರ್ತಿ, ಮನು, ಸಂತೋಷ್‌, ಬದ್ರಿನಾಥ್‌, ಎಂ.ಎನ್‌.ನಾಗಭೂಷಣ್‌, ಶ್ರೀನಿವಾಸ ಶಾಸ್ತ್ರಿ, ಶಾರದಾ ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ರಮ್ಯಾ, ಸತ್ಯವತಿ, ರಾಜೇಶ್ವರಿ, ಹರಿತ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?