)
-ಅಂಬಿಗರ ಚೌಡಯ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದೌವಲಪ್ಪ ಆರೋಪ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕು ಕೋಲಿ ಅಧ್ಯಕ್ಷ ಸ್ಥಾನದ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಯಪ್ಪ ಚಾಪೆಲ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ಕೈಗೊಂಬೆಯಾಗಿ ಕಾರ್ಯನಿರ್ವಹಸುತ್ತಿದ್ದಾರೆಂದು ಅಂಬಿಗರ ಚೌಡಯ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದೌವಲಪ್ಪ ಆರೋಪಿಸಿದ್ದಾರೆ.ಕೋಲಿ ಸಮಾಜಕ್ಕೆ ವಂಚನೆ ಮಾಡಿದ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸುಣಗಾರ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಅಧ್ಯಕ್ಷ ಅನೀಲಕುಮಾರ ಜಮಾದಾರ ಹೂಡದಳ್ಳಿ ತಾವೇ ಅಧ್ಯಕ್ಷರೆಂದು ಬಿಂಬಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಆದರೆ, ಚುನಾವಣಾಧಿಕಾರಿ ಜಯಪ್ಪ ಚಾಪೆಲ ಅವರು ಸಮರ್ಥವಾಗಿರದ ಸದಸ್ಯರೊಂದಿಗೆ ಭಾಗಿಯಾಗಿದ್ದಾರೆ. ಕಾಂಗ್ರೆಸ ಪಕ್ಷದ ಮುಖಂಡರ ಹೆಸರು ಬಹಿರಂಗಪಡಿಸದೆ ಗಂಭೀರವಾಗಿ ಆರೋಪಿಸಿದ ಅವರು ಚುನಾವಣಾಧಿಕಾರಿ ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡಿಸುತ್ತಿದ್ದಾರೆ.
ಸಮಾಜಕ್ಕೆ ನಂಬಿಕೆ ದ್ರೋಹ ಮಾಡಿದವರ ಕಡೆಗೆ ಹೆಚ್ಚು ಕೆಲಸವನ್ನು ಮಾಡುತ್ತಿರುವ ಚುನಾವಣಾಕಾರಿ ಕಾರ್ಯವನ್ನು ನಾವು ವಿರೋಧಿಸುತ್ತೇನೆ ಎಂದರು.
ನಮ್ಮ ಮಾತಿಗೆ ಬೆಲೆ ಮಾನ್ಯತೆ ಸಿಗದಿದ್ದರೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗುವುದು ಎಂದು ನಿಜ ಶರಣ ಅಂಬಿಗರ ಚೌಡಯ್ಯ ಸೇವ ಸಮಿತಿ ಪ್ರಧಾನ ಕಾರ್ಯದರ್ಶಿ ದೌವಲಪ್ಪ ಸುಣಗಾರ ಹೇಳಿದರು.
ಫೋಟೊ
ಚಿಂಚೋಳಿ ಪಟ್ಟಣದಲ್ಲಿ ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಲಕ್ಷ್ಮಣ ತುಮಕುಂಟಾ, ಮಹೇಶ್ ರಾಣಾಪೂರ ಇದ್ದರು.