ಕನ್ನಡಪ್ರಭ ವಾರ್ತೆ ಶಹಾಪುರ
ದಿಗ್ಗಿ ಬೇಸ್ ಹತ್ತಿರವಿರುವ ಪಂಚಕಂತಿ ಮಠದಿಂದ ಪ್ರತಿವರ್ಷ ರಥೋತ್ಸವ ನಡೆಸಲಾಗುತ್ತದೆ. ಚರಬಸವ ತಾತನವರ ಗುರುಗಳಾದ ಬಾಡಿಯಾಲ ಮೂಲ ಮಠದ ಚೆನ್ನವೀರ ಶಿವಾಚಾರ್ಯರಿಂದ ರಥೋತ್ಸವಕ್ಕೆ ಚಾಲನೆ ದೊರೆಯಿತು.
ಪಂಚಕಂತಿ ಮಠದಿಂದ ದಿಗ್ಗಿ ಬೇಸ್ ರಸ್ತೆ ಮಾರ್ಗವಾಗಿ ಗಾಂಧಿ ಚೌಕ ಹತ್ತಿರದ ಗುಗ್ಗಳ ಬಸವೇಶ್ವರ ದೇವಸ್ಥಾನ ದವರೆಗೆ ರಥೋತ್ಸವ ಜರುಗಿತು.ರಥೋತ್ಸವ ಹಿನ್ನೆಲೆ ಭಕ್ತಾಧಿಗಳು ಶ್ರೀಮಠಕ್ಕೆ ಬೆಳಗ್ಗೆಯಿಂದಲೇ ನೈವೇದ್ಯ ಅರ್ಪಿಸಿ ಕಾಯಿ ಕರ್ಪೂರ ಸಲ್ಲಿಸಿ ದರ್ಶನ ಪಡೆದು ಕೃತಾರ್ಥರಾದರು.
ನಗರದ ಗದ್ದುಗೆಯ ಚರಬಸವೇಶ್ವರರು ಸ್ಥಾಪಿಸಿದ ಪಂಚಕಂತಿ ಮಠ ಇದಾಗಿದ್ದು, ಚರಬಸವೇಶ್ವರರು ದಾಸೋಹ ಮುರ್ತಿಗಳಾಗಿದ್ದು, ಸಮಾಜದಲ್ಲಿ ಅಪಾರ ಭಕ್ತರನ್ನು ಹೊಂದಿದ್ದಾರೆ.
ಕಲಬುರಗಿ ದಾಸೋಹಿ ಶರಣಬಸವೇಶ್ವರರು ಪಂಚಕಂತಿ ಮಠಕ್ಕೆ ಭೇಟಿ ನೀಡಿದ್ದರಂತೆ. ಅವರ, ಸ್ಮರಾರ್ಣಾಥವಾಗಿ ಪ್ರತಿ ವರ್ಷ ಕಲಬುರಗಿಯಲ್ಲಿ ನಡೆಯುವ ಶರಣಬಸವೇಶ್ವರ ರಥೋತ್ಸವದಂದೆ ನಗರದಲ್ಲಿಯೂ ಅದ್ಧೂರಿಯ ಜಾತ್ರೆ ಜರುಗುತ್ತಿದೆ- ಶರಣು ಬಿ.ಗದ್ದುಗೆ, ಗದ್ದುಗೆ ಸಂಸ್ಥಾನಿಕರು, ಶಹಾಪುರ.