ಮತದಾರರ ಪಟ್ಟಿ ಪರಿಶೀಲಿಸಿ, ಚುನಾವಣೆಗೆ ಸಿದ್ಧರಾಗಿ

KannadaprabhaNewsNetwork |  
Published : Oct 25, 2025, 01:03 AM IST
ಶಾಸಕ ಜೆ.ಟಿ ಪಾಟೀಲ  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಲ್ಲಿವೆ, ಮುಂದೆಯೂ ಜಾರಿಯಲ್ಲಿ ಇರಲಿವೆ

ಕನ್ನಡಪ್ರಭ ವಾರ್ತೆ ಬೀಳಗಿ

ಬರುವ ದಿನಮಾನಗಳಲ್ಲಿ ಗ್ರಾಪಂ, ತಾಪಂ, ಜಿಪಂ ಚುನಾವಣೆ ಬರಲಿವೆ. ಅದಕ್ಕಾಗಿ ಪಕ್ಷದ ಮಂಚೂಣಿ ಮುಖಂಡರು ಮತ್ತು ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಶೀಲಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗಳನ್ನು ಜನರಿಗೆ ತಿಳಿಸಿ ಇಂದಿನಿಂದಲೇ ಈ ಚುನಾವಣೆಗೆ ಸಿದ್ಧರಾಗಿ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ ಪಾಟೀಲ ಹೇಳಿದರು.

ತಾಲೂಕಿನ ಕೊರ್ತಿ ಪುಕೆದಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಮತಗಳ್ಳತನ ನಿಲ್ಲಿಸಿ, ಮತದಾರರ ಹಕ್ಕುಗಳ ಜಾಗೃತಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಹಾಗೂ ರೈತಾಪಿ ಜನರ ಅಭಿವೃದ್ಧಿಗೆ ಪಿಕೆಪಿಎಸ್ ಸಂಸ್ಥೆಗಳು ಬಹಳ ಮುಖ್ಯವಾಗಿವೆ. ಇವುಗಳಿಂದ ಎಲ್ಲ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗಲಿದೆ. ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಮತಚೂರಿ ಬಗ್ಗೆ ಬಹಳ ಜವಾಬ್ದಾರಿ ವಹಿಸಬೇಕು. ಪ್ರತಿಯೊಂದ ಒಂದು ಬ್ಲಾಕಿಗೆ ಕನಿಷ್ಟ ೧೫ ಸಾವಿರ ಜನರ ಸಹಿ ಮಾಡಿಸಿ ಕೊಡಬೇಕು. ಇದನ್ನು ಕೋರ್ಟಿಗೆ ಕಳಿಸಲು ನಮ್ಮ ಎಐಸಿಸಿಯವರಿಗೆ ಕಳಿಸಬೇಕಾಗಿದೆ. ಈ ಕೆಲಸ ತ್ವರಿತ ಮಾಡಬೇಕು. ಇದರ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಿ ಸಹಿ ಪಡೆಯಬೇಕು. ಬಿಜೆಪಿಯವರು ಧರ್ಮ ಧರ್ಮದಲ್ಲಿ ಹಾಗೂ ಜಾತಿ ಜಾತಿಯಲ್ಲಿ ಜಗಳ ಹಚ್ಚುವ ಹಾಗೂ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಲ್ಲಿವೆ, ಮುಂದೆಯೂ ಜಾರಿಯಲ್ಲಿ ಇರಲಿವೆ. ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯವರೇ ಬಿಹಾರ ಚುನಾವಣೆಯಲ್ಲಿ ಯಾವ ರೀತಿ ಲೆಕ್ಕಕ್ಕೆ ನಿಲುಕದ ರೀತಿ ಗ್ಯಾರಂಟಿ ಘೋಷಣೆ ಮಾಡುತ್ತಿವೆ, ಜನರಿಗೆ ಬಿಜೆಪಿಯವರ ಸುಳ್ಳು ತಿಳಿದಿದೆ, ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ,ಸಮಾಜಗಳ ಸಮುದಾಯ ಭವನ ಅಭಿವೃದ್ಧಿ,ಮುಳುಗಡೆ ಸಂತ್ರಸ್ತರ ಹಲವಾರು ವರ್ಷಗಳ ಬೇಡಿಕೆ ಈಡೇರಿದ್ದು ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಬರಲಿರುವ ಗ್ರಾಪಂ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು ಆಗಬೇಕು, ತಾಪಂ ಜಿಪಂ ಚುನಾವಣೆಯಲ್ಲಿ ಕಳೆದ ಭಾರಿಗಿಂತಲು ಹೆಚ್ಚು ಸ್ಥಾನಗಳಲ್ಲಿ ಗೆಲುವು ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕಳೆದ ಎಂಎಲ್‌ಎ ಚುನಾವಣೆ ಮಾಡಿದ ಕೆಲಸದಂತೆ ಇಲ್ಲಿಯೂ ಆಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಣಮಂತ ಕಾಖಂಡಕಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನವೀರಯ್ಯ ಪ್ಯಾಟಿಮಠ, ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಅದ್ರಶ್ಯಪ್ಪ ದೇಸಾಯಿ, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಆಶಾ ಬೀಳಗಿ, ಮಹಾದೇವ ಹಾದಿಮನಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮುಂಚೂಣಿ ಘಟಕಗಳು ಪದಾಧಿಕಾರಿಗಳು ಇದ್ದರು.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ