ದಾಬಸ್‍ಪೇಟೆ: ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚೇತನಾ ನಾಗೇಶ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಶ್ ಘೋಷಿಸಿದರು.
ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚೇತನಾ ನಾಗೇಶ್ ಹಾಗೂ ಮನುಪ್ರಸಾದ್, ಶ್ರೀನಿವಾಸ್ ಮೂವರು ನಾಮಪತ್ರ ಸಲ್ಲಿಸಿದ್ದರು. ಶ್ರೀನಿವಾಸ್ ನಾಮಪತ್ರ ಹಿಂತೆಗೆದುಕೊಂಡರು. ಅಂತಿಮವಾಗಿ ಚುನಾವಣಾ ಕಣದಲ್ಲಿ ಚೇತನಾ ನಾಗೇಶ್ ಹಾಗೂ ಮನುಪ್ರಸಾದ್ ಉಳಿದಿದ್ದು, 17 ಮತಗಳಲ್ಲಿ ಚೇತನಾ ನಾಗೇಶ್ 11 ಮತ ಪಡೆದು ಗೆಲುವಿನ ನಗೆ ಬೀರಿದರೆ, ಪ್ರತಿಸ್ಫರ್ಧಿ ಮನುಪ್ರಸಾದ್ 5 ಮತ ಪಡೆದು ಪರಾಭವಗೊಂಡರು. ಒಂದು ಮತ ಅಸಿಂಧುಗೊಂಡಿದೆ.ನೂತನ ಅಧ್ಯಕ್ಷೆ ಚೇತನಾ ನಾಗೇಶ್ ಮಾತನಾಡಿ, ಸಾಮಾನ್ಯ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಸ್ಥಾನದ ನನಗೆ ಮತ ಹಾಕಿ ಗೆಲ್ಲಿಸಿದ ಸದಸ್ಯರಿ ಧನ್ಯವಾದ ತಿಳಿಸುತ್ತೇನೆ. ಮುಖಂಡರಾದ ಎಡೇಹಳ್ಳಿ ತೀರ್ಥಪ್ರಸಾದ್, ಜಯಣ್ಣ, ಪ್ರಭುದೇವ್, ಮೋಹನ್ ಕುಮಾರ್, ಜಗದೀಶ್ ಚೌಧರಿ ಸಹಕಾರದಿಂದ ಗೆಲುವು ಸಾಧಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುವ ಜೊತೆಗೆ ಗ್ರಾಪಂ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಭುದೇವ್ ಮಾತನಾಡಿ, ಎಲ್ಲರಿಗೂ ಅಧಿಕಾರ ಸಿಗಬೇಕೆಂಬ ದೃಷ್ಟಿಯಿಂದ ಚುನಾವಣೆ ನಡೆಸಲಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗದಿದ್ದಕ್ಕೆ ಎನ್‌ಡಿಎ ಮೈತ್ರಿಕೂಟದಿಂದ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವ ಭರವಸೆಯಿದೆ ಎಂದರು.ನೂತನ ಅಧ್ಯಕ್ಷೆಯನ್ನು ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಭುದೇವ್, ಸಂತೋಷ್, ಗಾಯತ್ರಮ್ಮ, ಉಪಾಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ಉಮಾ, ರಮೇಶ್, ಶ್ರೀನಿವಾಸ್, ಗಂಗಾಧರ್, ಉಷಾ, ಜಯಮ್ಮ, ಪಿಡಿಒ ಗಿರೀಶ್ ಕುಮಾರ್, ಕಾರ್ಯದರ್ಶಿ ಹರೀಶ್ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಎನ್‌ಡಿಎ ಮಾಜಿ ಅಧ್ಯಕ್ಷ ಮಲ್ಲಯ್ಯ, ಸೋಂಪುರ ವಿಎಸ್‍ಎಸ್‍ಎನ್ ಅಧ್ಯಕ್ಷ ಮೋಹನ್ ಕುಮಾರ್, ಬಿಡಿಸಿಸಿ ಮಾಜಿ ಉಪಾಧ್ಯಕ್ಷ ಮಾಚನಹಳ್ಳಿ ಜಯಣ್ಣ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬಿ.ಎಂ.ಶ್ರೀನಿವಾಸ್, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಮುಖಂಡರಾದ ಹೊನ್ನಗಂಗಶೆಟ್ಟಿ, ಪುಟ್ಟಗಂಗಯ್ಯ, ಪರಮೇಶ್, ಮರಿಯಪ್ಪ, ಬೈರೇಶ್, ಶಶಿಧರ್, ವೆಂಕಟಾಚಲಯ್ಯ, ದೇವರಾಜು, ಮಾಚನಹಳ್ಳಿ ಕುಮಾರ್, ವಸಂತ್ ಕುಮಾರ್, ರಾಜಣ್ಣ ಇತರರಿದ್ದರು.ಪೋಟೋ 2 :
ಶಿವಗಂಗೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಚೇತನಾ ನಾಗೇಶ್ ಅವರನ್ನು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಎನ್‌ಡಿಎ ಮಾಜಿ ಅಧ್ಯಕ್ಷ ಮಲ್ಲಯ್ಯ, ಸೋಂಪುರ ವಿಎಸ್‍ಎಸ್‍ಎನ್ ಅಧ್ಯಕ್ಷ ಮೋಹನ್ ಕುಮಾರ್, ಗ್ರಾಪಂ ಸದಸ್ಯರು, ಮುಖಂಡರು ಅಭಿನಂದಿಸಿದರು.