ಛತ್ರಪತಿ ಶಿವಾಜಿ ಜಯಂತಿ ಆಚರಣೆ ಇಂದು: ರಮೇಶ ಹೂಗಾರ

KannadaprabhaNewsNetwork |  
Published : Feb 27, 2024, 01:30 AM IST
ಗುರುಮಠಕಲ್ ಪಟ್ಟಣದ ನಗರೇಶ್ವರ ಗುಡಿಯಲ್ಲಿ ಹಿಂದೂ ಯುವ ಘರ್ಜನೆ ವೇದಿಕೆ ವತಿಯಿಂದ ಸುದ್ದಿಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ಗುರುಮಠಕಲ್ ಪಟ್ಟಣದ ನಗರೇಶ್ವರ ಗುಡಿಯಲ್ಲಿ ಹಿಂದೂ ಯುವ ಘರ್ಜನೆ ವೇದಿಕೆ ವತಿಯಿಂದಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕುರಿತು ಸುದ್ದಿಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಪಟ್ಟಣದಲ್ಲಿ ಮಂಗಳವಾರ ತಾಲೂಕು ಹಿಂದೂ ಯುವ ಘರ್ಜನೆ ವೇದಿಕೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುವುದು ಎಂದು ವೇದಿಕೆಯ ವ್ಯವಸ್ಥಾಪಕ ರಮೇಶ ಹೂಗಾರ ತಿಳಿಸಿದರು.

ಪಟ್ಟಣದ ನಗರೇಶ್ವರ ಗುಡಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಗರೇಶ್ವರ ಗುಡಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುವರೆಗೆ ಶೋಭಾ ಯಾತ್ರೆ ನಡೆಯಲಿದೆ. ನಂತರ 7 ಗಂಟೆಗೆ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖಾಸಾಮಠ ಪೂಜ್ಯಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಶರಣಗೌಡ ಕಂದಕೂರು ಉದ್ಘಾಟಿಸಲಿದ್ದಾರೆ. ಧರ್ಮ ಜಾಗರಣ ಪ್ರಾಂತ ಪರಿಯೋಜನ ಪ್ರಮುಖ ಸ್ವತಂತ್ರ ಸಿಂಧೆ ಉಪನ್ಯಾಸ ನೀಡುವರು.

ಮಾಜಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಅಧ್ಯಕ್ಷತೆ ವಹಿಸುವರು. ನಿವೃತ್ತ ಆರೋಗ್ಯ ವೈದ್ಯಾಧಿಕಾರಿ ವಿ.ಸಿ. ಮೈತಿ ಅಥಿತಿಗಳಾಗಿ ಆಗಮಿಸಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಆಶಿರೆಡ್ಡಿ ಕೋಸಗಿ, ಮಲ್ಲೇಶ ಕಾಕಲವಾರ, ವೆಂಕಟೇಶ ದಾಸರಿ, ಶಂಕರ ನಾಗವೋಳ, ರಾಜುರೆಡ್ಡಿ ಬುರುಗಪಲ್ಲಿ, ಸಂಜು ಪಸಾರ, ಬನ್ನು, ಭೀಮು ಕಂದೂರ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌