ಆರ್ಡರ್ ಮಾಡಿದ್ದ ವೆಜ್ ಧಮ್‌ ಬಿರಿಯಾನಿಯಲ್ಲಿ ಚಿಕನ್ ಪೀಸ್!

KannadaprabhaNewsNetwork |  
Published : Nov 02, 2026, 03:00 AM IST
ವೆಜ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಬಂದಿರುವ ಫೋಟೋವನ್ನು ಪಿಯೂಷ್ ಹಂಚಿಕೊಂಡಿದ್ದಾರೆ. | Kannada Prabha

ಸಾರಾಂಶ

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿನ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರ ಸೇವಿಸುವ ಪ್ರಯಾಣಿಕರೊಬ್ಬರಿಗೆ ಆರ್ಡರ್ ಮಾಡಿದ್ದ ವೆಜ್ ಧಮ್ ಬಿರಿಯಾನಿಯಲ್ಲಿ ಚಿಕನ್ ಪೀಸ್‌ಗಳು ನೀಡಲಾಗಿದೆ.

-ಆಘಾತ । ಏರ್ಪೋರ್ಟ್‌ನಲ್ಲಿ ಘಟನೆ । ಎಕ್ಸ್‌ನಲ್ಲಿ ಪಿಯೋಷ್‌ರಿಂದ ಪೋಸ್ಟ್‌ ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿನ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರ ಸೇವಿಸುವ ಪ್ರಯಾಣಿಕರೊಬ್ಬರಿಗೆ ಆರ್ಡರ್ ಮಾಡಿದ್ದ ವೆಜ್ ಧಮ್ ಬಿರಿಯಾನಿಯಲ್ಲಿ ಚಿಕನ್ ಪೀಸ್‌ಗಳು ನೀಡಲಾಗಿದೆ.

ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿರುವ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಈ ಕುರಿತು ಪಿಯೂಷ್ ಅಗರ್ವಾಲ್ ಎಂಬುವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ಕುಟುಂಬ ವೆಜ್ ಬಿರಿಯಾನಿ ಆರ್ಡರ್ ಮಾಡಿತ್ತು. ರೆಸ್ಟೋರೆಂಟ್‌ ನೀಡಿದ್ದ ಬಿಲ್‌ನಲ್ಲೂ ವೆಜ್ ಎಂದು ನಮೂದಾಗಿದೆ. ಆದರೆ, ನಮಗೆ ಮಾಂಸಹಾರ ನೀಡಲಾಗಿದೆ. ಬಿರಿಯಾನಿ ನೀಡಿದ ಬಳಿಕ ಆರಂಭದಲ್ಲೇ ಮಾಂಸಹಾರದ ಪೀಸ್‌ಗಳು ಕಾಣಿಸಿಕೊಂಡಿಲ್ಲ. ನಾವು ಸ್ವಲ್ಪ ಆಹಾರ ಸೇವನೆ ಮಾಡಿದ ಬಳಿಕ ಒಳಭಾಗದಲ್ಲಿ ಚಿಕನ್ ಪೀಸ್‌ಗಳು ಕಾಣಿಸಿಕೊಂಡಿವೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಮಾನಸಿಕ ಆಘಾತವಾಗಿದೆ. ಆದರೆ ರೆಸ್ಟೋರೆಂಟ್‌ನವರು ತಪ್ಪೊಪ್ಪಿಕೊಂಡರು ಎಂದು ಪಿಯೂಷ್ ಹೇಳಿದ್ದಾರೆ.

ನಮ್ಮದು ಶುದ್ಧ ಸಸ್ಯಹಾರ ಕುಟುಂಬ. ನಮ್ಮ ಮಕ್ಕಳು ಕೂಡ ಗೊತ್ತಿಲ್ಲದೇ ಸೇವಿಸಿದ್ದಾರೆ. ಮಾಂಸಹಾರ ಹಾಕಿದ್ದು ಏಕೆ ಎಂದು ಹೊಟೇಲ್‌ನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಆಹಾರದಲ್ಲಿ ಚಿಕನ್ ಇರುವುದನ್ನು ಒಪ್ಪಿಕೊಂಡಿದ್ದಾರೆ. ಈ ಕುರಿತು ಎಫ್‌ಎಸ್‌ಎಸ್‌ಎಐ, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಯೂಷ್ ಆಗ್ರಹಿಸಿದ್ದಾರೆ. ಘಟನೆಯ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಏರ್‌ಪೋರ್ಟ್ ಆಡಳಿತ ಮಂಡಳಿ ಹೇಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌ ಯಾರಿಗೆ ತಿರುಗುಬಾಣ ಅಂತ ಇಂದು ಹೇಳ್ತೀನಿ: ಎಚ್ಡಿಕೆ
ಇದು ಕೇವಲ ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೈ: ಪ್ರಿಯಾಂಕ್‌