ಬೆಂಗ್ಳೂರು ಸೇರಿ 7 ಏರ್ಪೋರ್ಟಲ್ಲಿ ವಿದೇಶಿ ಯಾತ್ರಿಗೂ ಡಿಜಿ ಯಾತ್ರಾ

KannadaprabhaNewsNetwork |  
Published : Nov 02, 2026, 02:45 AM IST
ವೆಜ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಬಂದಿರುವ ಫೋಟೋವನ್ನು ಪಿಯೂಷ್ ಹಂಚಿಕೊಂಡಿದ್ದಾರೆ. | Kannada Prabha

ಸಾರಾಂಶ

ಇಷ್ಟು ಕಾಲ ದೇಶದ ಒಳಗೆ ಪ್ರಯಾಣಿಸುವವರಿಗಷ್ಟೇ ಲಭ್ಯವಿದ್ದ ಡಿಜಿ ಯಾತ್ರಾ ಸೇವೆಯನ್ನು ಇದೀಗ ಪ್ರಾಯೋಗಿಕವಾಗಿ ಬೆಂಗಳೂರು ಸೇರಿದಂತೆ 7 ನಗರಗಳ ವಿಮಾನ ನಿಲ್ದಾಣಗಳಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೂ ವಿಸ್ತರಿಸಲಾಗಿದೆ. ಇದು 2027ರಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

-ಪ್ರಾಯೋಗಿಕ ಸೇವೆ ಆರಂಭ: ಸಚಿವಾಲಯ-2027ರಲ್ಲಿ ಪೂರ್ಣ ಪ್ರಮಾಣದ ಜಾರಿ ನಿರೀಕ್ಷೆ

-ಏರ್‌ ಇಂಡಿಯಾ, ಇಂಡಿಗೂ ವಿಮಾನಕ್ಕೆ ಸೀಮಿತ

ನವದೆಹಲಿ: ಇಷ್ಟು ಕಾಲ ದೇಶದ ಒಳಗೆ ಪ್ರಯಾಣಿಸುವವರಿಗಷ್ಟೇ ಲಭ್ಯವಿದ್ದ ಡಿಜಿ ಯಾತ್ರಾ ಸೇವೆಯನ್ನು ಇದೀಗ ಪ್ರಾಯೋಗಿಕವಾಗಿ ಬೆಂಗಳೂರು ಸೇರಿದಂತೆ 7 ನಗರಗಳ ವಿಮಾನ ನಿಲ್ದಾಣಗಳಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೂ ವಿಸ್ತರಿಸಲಾಗಿದೆ. ಇದು 2027ರಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

ಮುದ್ರಿತ ಬೋರ್ಡಿಂಗ್‌ ಪಾಸ್‌ ಹೊಂದುವ ಬದಲು, ಏರ್‌ಪೋರ್ಟ್‌ಗೆ ತಲುಪುವ ಮುನ್ನವೇ ಬೋರ್ಡಿಂಗ್‌ ಪಾಸ್‌ ಅನ್ನು ಡಿಜಿಯಾತ್ರಾ ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದು. ಇದರಿಂದ ವಿಮಾನ ನಿಲ್ದಾಣ ಪ್ರವೇಶ, ಭದ್ರತಾ ಪರಿಶೀಲನೆ, ಬೋರ್ಡಿಂಗ್‌ ವೇಳೆ ಪಾಸ್‌ ತೋರಿಸುವ ಬದಲು ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೂಲಕ ಪ್ರವೇಶ ಪಡೆಯಲು ಅನುಕೂಲವಾಗುವಂತೆ ವಿಮಾನಯಾನ ಸಚಿವಾಲಯ ಮತ್ತು ಡಿಜಿಯಾತ್ರಾ ಒಟ್ಟಾಗಿ ಈ ವ್ಯವಸ್ಥೆಯನ್ನು ರೂಪಿಸಿವೆ. ಇದಷ್ಟು ದಿನ ಈ ಸೌಲಭ್ಯ ಭಾರತದ ಒಳಗೆ ಪ್ರಯಾಣಿಸುವವರಿಗಷ್ಟೇ ಇತ್ತು. ಆದರೀಗ ಇ-ಪಾಸ್‌ಪೋರ್ಟ್‌ ಜತೆ ಏರ್‌ ಇಂಡಿಯಾ ಹಾಗೂ ಇಂಡಿಗೋ ವಿಮಾನದಲ್ಲಿ ವಿದೇಶಕ್ಕೆ ಪ್ರಯಾಣಿಸಲಿರುವ ಭಾರತೀಯರು, ಬೆಂಗಳೂರು, ದೆಹಲಿ, ಹೈದರಾಬಾದ್, ಕೊಚ್ಚಿನ್, ಮುಂಬೈ, ಚೆನ್ನೈ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಬಳಸಬಹುದು. ನವೆಂಬರ್‌ನಿಂದ ಡಿಸೆಂಬರ್‌ ವರೆಗೆ ಪ್ರಾಯೋಗಿಕವಾಗಿ ಈ ಅವಕಾಶ ನೀಡಲಾಗಿದ್ದು, ಜನರ ಪ್ರತಿಕ್ರಿಯೆ ಹಾಗೂ ಕಾರ್ಯಸಾಧುತ್ವವನ್ನು ಪರಿಶೀಲಿಸಲಾಗುವುದು. ಆದ್ದರಿಂದ ಡಿಜಿಯಾತ್ರಾದಲ್ಲಿ ಬೋರ್ಡಿಂಗ್‌ ಪಾಸ್‌ ಹೊಂದಿರುವ ಹೊರತಾಗಿಯೂ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ, 2027ರಿಂದ ವಿದೇಶಕ್ಕೆ ಹಾರಲಿರುವ ಎಲ್ಲಾ ಭಾರತೀಯರಿಗೆ ಈ ಸೌಲಭ್ಯ ಲಭ್ಯವಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಪಂ, ತಾಪಂ ಎಲೆಕ್ಷನ್‌ಗೆ ಎಸ್‌ಐಆರ್‌ ಮತಪಟ್ಟಿ ಇಲ್ಲ? - ಹಳೆ ಪಟ್ಟಿ ಬಳಕೆ: ಖಂಡ್ರೆ
ಹಾಲು, ಮೊಸರು ಆಯ್ತು, ಇದೀಗ ಬಸ್‌ ದರ ಏರಿಕೆ - ನ.5ರಿಂದಲೇ ಹೊಸ ದರ