ಕ್ರೀಡಾಪಟುಗಳ ಗೆಲುವಿನ ಹಿಂದೆ ದಶಕಗಳ ಕಠಿಣ ಶ್ರಮವಿದೆ: ಸಚಿವ ಸತೀಶ್ ಜಾರಕಿಹೊಳಿ

KannadaprabhaNewsNetwork |  
Published : Nov 02, 2026, 02:45 AM IST
ಕೊಪ್ಪದಲ್ಲಿ ಸ್ನೇಹ ಶಾನುವಳ್ಳಿ, ಎಂ.ಆರ್. ಪೂವಮ್ಮಗೆ ನಾಗರಿಕ ಸನ್ಮಾನ | Kannada Prabha

ಸಾರಾಂಶ

ಕೊಪ್ಪಕ್ರೀಡಾಪಟುಗಳು ಪದಕ ಗೆದ್ದ ನಂತರ ಅವರನ್ನು ಗುರುತಿಸಿ ಸನ್ಮಾನಿಸುವುದಕ್ಕಿಂತ ಮುಂಚಿತವಾಗಿ ಅವರು ಪಡುವ ದಶಕಗಳ ಕಠಿಣ ಪರಿಶ್ರಮದ ಹಂತದಲ್ಲೇ ಸರ್ಕಾರ ಹಾಗೂ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಲೋಕೋಪ ಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.

- ಕೊಪ್ಪದಲ್ಲಿ ಸ್ನೇಹ ಶಾನುವಳ್ಳಿ, ಎಂ.ಆರ್. ಪೂವಮ್ಮಗೆ ನಾಗರಿಕ ಸನ್ಮಾನ; ''''''''ಈಶ-ಸ್ನೇಹ ಕ್ರೀಡಾ ನಿಧಿ'''''''' ಲೋಗೋ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ​ಕೊಪ್ಪ

ಕ್ರೀಡಾಪಟುಗಳು ಪದಕ ಗೆದ್ದ ನಂತರ ಅವರನ್ನು ಗುರುತಿಸಿ ಸನ್ಮಾನಿಸುವುದಕ್ಕಿಂತ ಮುಂಚಿತವಾಗಿ ಅವರು ಪಡುವ ದಶಕಗಳ ಕಠಿಣ ಪರಿಶ್ರಮದ ಹಂತದಲ್ಲೇ ಸರ್ಕಾರ ಹಾಗೂ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಲೋಕೋಪ ಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.

​ಶೃಂಗೇರಿ ಕ್ಷೇತ್ರದ ನಾಗರಿಕ ಅಭಿನಂದನಾ ಸಮಿತಿ ಹಾಗೂ ಈಶ-ಸ್ನೇಹ ಕ್ರೀಡಾ ನಿಧಿ ಸಂಸ್ಥೆ ಪಟ್ಟಣದ ಲಾಲ್‌ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಅಥ್ಲೀಟ್‌ಗಳಾದ ಸ್ನೇಹ ಶಾನುವಳ್ಳಿ ಹಾಗೂ ಎಂ.ಆರ್. ಪೂವಮ್ಮ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ​ಕ್ರೀಡಾಪಟುಗಳಿಗೆ ಹಾಸ್ಟೆಲ್, ಅತ್ಯಾಧುನಿಕ ಸಲ ಕರಣೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಇಂದಿನ ತುರ್ತು ಅಗತ್ಯ. ಗ್ರಾಮೀಣ ಮಟ್ಟದಿಂದಲೇ ಪ್ರತಿಭೆ ಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರ ಸದಾ ಬದ್ಧ. ಮಲೆನಾಡಿನ ಈ ಪುಟ್ಟ ತಾಲೂಕು, ಇಬ್ಬರು ಹೆಮ್ಮೆಯ ಕ್ರೀಡಾ ಸಾಧಕಿಯರನ್ನು ಗುರುತಿಸಿ ಗೌರವಿಸಿರುವುದು ಇಡೀ ರಾಜ್ಯಕ್ಕೇ ಮಾದರಿ ಎಂದು ಶ್ಲಾಘಿಸಿದರು.

​ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ ಕೇವಲ ಶಿಕ್ಷಣದಲ್ಲಷ್ಟೇ ಅಲ್ಲದೆ, ಕ್ರೀಡೆ ಮತ್ತು ಸಾಂಸ್ಕೃತಿಕ ರಂಗಗಳಲ್ಲೂ ಬದುಕು ರೂಪಿಸಿಕೊಳ್ಳಲು ಹತ್ತು ಹಲವು ಅವಕಾಶಗಳಿವೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಸಾಮಾನ್ಯ ಕುಟುಂಬದ ಸ್ನೇಹ ಮತ್ತು ಕೊಡಗಿನ ಹೆಮ್ಮೆಯ ಕುವರಿ ಎಂ.ಆರ್. ಪೂವಮ್ಮ ಅಪಾರ ಪರಿಶ್ರಮ ಹಾಗೂ ಛಲ ಇಂದಿನ ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಇಬ್ಬರೂ ದೇಶಕ್ಕೆ ಪದಕ ತರಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಏಷ್ಯಾಡ್ ಪದಕ ವಿಜೇತೆ ಸ್ನೇಹ ಕೆಲವು ವರ್ಷಗಳ ಹಿಂದೆ ನಾನೂ ಪ್ರೇಕ್ಷಕರ ಜಾಗದಲ್ಲಿ ವಿದ್ಯಾರ್ಥಿನಿಯಾಗಿ ಕುಳಿತು ಗಣ್ಯರ ಮಾತುಗಳನ್ನು ಕೇಳಿ ಸ್ಫೂರ್ತಿ ಪಡೆಯುತ್ತಿದ್ದೆ. ಸಾಧನೆಗೆ ದುಬಾರಿ ಪರಿಕರ, ಫ್ಯಾನ್ಸಿ ಮೈದಾನಗಳೇ ಬೇಕಿಲ್ಲ. ಕನಸುಗಳ ಬೆನ್ನತ್ತಿ, ಸೋತು ಎದ್ದು ನಿಂತು ಈ ಮಟ್ಟಕ್ಕೆ ಬಂದಿದ್ದೇನೆ. ಈಶನ್ ಸರ್ ಪದಕ ಗೆದ್ದ 36 ವರ್ಷಗಳ ನಂತರ ಮತ್ತೆ ಆ ಪದಕ ತರಲು ನನ್ನಿಂದ ಸಾಧ್ಯವಾಗಿದೆ. ನನ್ನ ಹಿಂದೆಯೇ ಸಾಲು ಸಾಲಾಗಿ ಅಂತಾ ರಾಷ್ಟ್ರೀಯ ಪದಕ ಗೆಲ್ಲುವ ಪ್ರತಿಭೆಗಳು ಈ ತಾಲೂಕಿನಿಂದ ಹೊರಹೊಮ್ಮಬೇಕು. ಅದಕ್ಕಾಗಿ ''''''''ಈಶ-ಸ್ನೇಹ ಕ್ರೀಡಾ ನಿಧಿ'''''''' ಉತ್ತಮ ಆಸರೆ ಎಂದರು.

ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಮಾತನಾಡಿ ನಾನು ಮಂಗಳೂರಿನವಳಾದರೂ ಕೊಪ್ಪದ ಜನತೆ ತಮ್ಮ ಸ್ವಂತ ಮಗಳಂತೆ ಪ್ರೀತಿಯಿಂದ ಸ್ವಾಗತಿಸಿ ಸನ್ಮಾನಿಸಿದ್ದು ಭಾವಪರವಶಗೊಳಿಸಿದೆ. ಕ್ರೀಡಾ ಜೀವನ ಆರಂಭಿಸಿ 23 ವರ್ಷ ಗಳಾದವು. ಸೋತು ಗೆದ್ದವಳು ನಾನು. 36ನೇ ವಯಸ್ಸಿನಲ್ಲಿ ಮದುವೆ ನಂತರ ಕ್ರೀಡೆಯಲ್ಲಿ ಸಕ್ರಿಯ ಸಾಧನೆ ಮಾಡ ಬಹುದೆಂದು ತೋರಿಸಿದ್ದೇನೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ತೊಡಗಬೇಕು. 3 ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೇನೆ. ಇನ್ನು ಒಲಿಂಪಿಕ್ ಪದಕವೊಂದೇ ನನ್ನ ಗುರಿ. ಮುಂದಿನ ಬಾರಿ ಒಲಿಂಪಿಕ್ ಪದಕದೊಂದಿಗೆ ಇಲ್ಲಿಗೆ ಬರುತ್ತೇನೆ ಎಂದರು.

1990ರ ಏಷ್ಯಾಡ್ ಶಾಟ್‌ಪುಟ್ ಕಂಚಿನ ಪದಕ ವಿಜೇತ ಕೊಪ್ಪ ತಾಲೂಕಿನ ಶಿವಪುರದ ಎಸ್.ಡಿ. ಈಶನ್ ಮಾತನಾಡಿ, ಸುಮಾರು 30 ವರ್ಷಗಳ ನಂತರ ನಮ್ಮ ಮಣ್ಣಿನ ಹೆಣ್ಣುಮಗಳು ಸ್ನೇಹ ಪದಕ ಗೆದ್ದಾಗ ನನ್ನ ಸ್ವಂತ ಮಗಳೇ ಗೆದ್ದಷ್ಟು ಹರ್ಷವಾಯಿತು. ಗ್ರಾಮೀಣ ಕ್ರೀಡಾಪಟುಗಳಲ್ಲಿರುವ ಅಪಾರ ಸಾಮರ್ಥ್ಯಕ್ಕೆ ಸೂಕ್ತ ತರಬೇತಿ - ಪ್ರೋತ್ಸಾಹ ಸಿಕ್ಕರೆ ಜಾಗತಿಕ ಮಟ್ಟದಲ್ಲಿ ಸಾಧನೆ ಸಾಧ್ಯ ಎಂದರು.

​ವೇದಿಕೆಯಲ್ಲಿ ವಿಪ ಸದಸ್ಯರಾದ ಆರತಿ ಕೃಷ್ಣ, ಗಾಯತ್ರಿ ಶಾಂತೇಗೌಡ, ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ. ಡಿ.ಎಸ್. ಉದಯಕುಮಾರ್, ಕಾರ್ಯಾಧ್ಯಕ್ಷ ಎನ್.ಕೆ. ಸತೀಶ್ ನಿಲುವಾಗಿಲು, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಜಿನೇಶ್, ಮುಖಂಡ ಎಚ್.ಜಿ. ವೆಂಕಟೇಶ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್, ಸೌಮ್ಯಾ ದಿನೇಶ್ ಕುಂದರ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

-- ಬಾಕ್ಸ್--ಬೆಳ್ಳಿಯ ಕಿರೀಟ ಧಾರಣೆ: ಸ್ನೇಹ ಶಾನುವಳ್ಳಿ ಹಾಗೂ ಎಂ.ಆರ್. ಪೂವಮ್ಮರಿಗೆ ನಾಗರಿಕ ಸಮಿತಿಯಿಂದ ಬೆಳ್ಳಿ ಕಿರೀಟ ತೊಡಿಸಿ, ರಾಷ್ಟ್ರಧ್ವಜ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪ ಪಪಂ ವ್ಯಾಪ್ತಿಯಲ್ಲಿ ಸ್ನೇಹ ಶಾನುವಳ್ಳಿಗೆ ನಿವೇಶನ ನೀಡಲು ತೀರ್ಮಾನಿ ಸಲಾಗಿದೆ ಎಂದು ಸಂಘಟಕರು ಪ್ರಕಟಿಸಿದರು. ಮಂಗಳೂರು ಮಹಾನಗರ ಪಾಲಿಕೆ ಪೂವಮ್ಮ ಅವರಿಗೆ ನಿವೇಶನ ನೀಡಬೇಕೆಂದು ಸಮಾರಂಭದಲ್ಲಿ ಆಗ್ರಹಿಸಲಾಯಿತು.

ಈ ಸಾಧಕಿಯರ ತರಬೇತುದಾರರಾದ ಸಿದ್ದರಾಜು, ದಿನೇಶ್ ಕುಂದರ್ ಹಾಗೂ ಪೋಷಕರಾದ ಸತ್ಯನಾರಾಯಣ, ಶಾಲಿನಿ ದಂಪತಿ ಮತ್ತು ರಾಜು ಗಣಪತಿ ಮಾಚಿಟ್ಟಿರ,ಜಾನಕಿ ದಂಪತಿಯನ್ನು ಸನ್ಮಾನಿಸಲಾಯಿತು.

-- ಬಾಕ್ಸ್--​''''ಈಶ-ಸ್ನೇಹ ಕ್ರೀಡಾ ನಿಧಿ'''' ಲೋಗೋ ಅನಾವರಣ:

ಮುಂದಿನ ತಲೆಮಾರಿನ ಗ್ರಾಮೀಣ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮಹತ್ವಾಕಾಂಕ್ಷೆಯೊಂದಿಗೆ ಸ್ಥಾಪಿಸಲಾದ ''''ಈಶ-ಸ್ನೇಹ ಕ್ರೀಡಾ ನಿಧಿ''''ಯ ಲೋಗೋವನ್ನು ಸಚಿವರು ಮತ್ತು ಗಣ್ಯರು ಅನಾವರಣಗೊಳಿಸಿದರು. ಶಾಸಕ ಟಿ.ಡಿ. ರಾಜೇಗೌಡ ಈ ನಿಧಿಗೆ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ಹಸ್ತಾಂತರಿಸಿದರು. ಪ್ರತಿ ವರ್ಷ ಅ.31 ರಂದು ಕ್ರೀಡಾ ಸಾಧಕರನ್ನು ಗೌರವಿ ಸುವ ಈ ಪರಂಪರೆ ನಿರಂತರವಾಗಿ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳೇ ಎಚ್ಚರ, ಕರ್ತವ್ಯ ಲೋಪ ಕಂಡರೆ ಲೋಕಾಯುಕ್ತ ಕೇಸ್‌
ಎಲ್ಲ ಕ್ಷೇತ್ರದಲ್ಲಿ ಎಐ ಮಹತ್ವದ ಬದಲಾವಣೆ