ಕಾಟಾಚಾರಕ್ಕೆ ವಾರ್ಡ್ 1 ಅಭಿಯಾನ: ಶಾಸಕ

KannadaprabhaNewsNetwork |  
Published : Nov 02, 2026, 02:45 AM IST
ವೆಜ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಬಂದಿರುವ ಫೋಟೋವನ್ನು ಪಿಯೂಷ್ ಹಂಚಿಕೊಂಡಿದ್ದಾರೆ. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವಾರ್ಡ್ ಒನ್ ಅಭಿಯಾನ ಕೇವಲ ಕಾಟಾಚಾರಕ್ಕೆ ನಡೆಯುವ ರೀತಿ ಕಾಣುತ್ತಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಇರಬೇಕೆಂದು ಸರ್ಕಾರ ಸುತ್ತೋಲೆ ಇದ್ದರೂ ಅಧಿಕಾರಿಗಳು ಗೈರಾದರೆ ಕಾರ್ಯಕ್ರಮ ಹೇಗೆ ಯಶಸ್ವಿಯಾಗುತ್ತದೆ ಎಂದು ಶಾಸಕ ಎಸ್.ಮುನಿರಾಜು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ರಾಜ್ಯ ಸರ್ಕಾರದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವಾರ್ಡ್ ಒನ್ ಅಭಿಯಾನ ಕೇವಲ ಕಾಟಾಚಾರಕ್ಕೆ ನಡೆಯುವ ರೀತಿ ಕಾಣುತ್ತಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಇರಬೇಕೆಂದು ಸರ್ಕಾರ ಸುತ್ತೋಲೆ ಇದ್ದರೂ ಅಧಿಕಾರಿಗಳು ಗೈರಾದರೆ ಕಾರ್ಯಕ್ರಮ ಹೇಗೆ ಯಶಸ್ವಿಯಾಗುತ್ತದೆ ಎಂದು ಶಾಸಕ ಎಸ್.ಮುನಿರಾಜು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ಹಾಗೂ ನಾಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚೆಗೆ ನಮ್ಮ ಕ್ಷೇತ್ರದಲ್ಲಿ ಫುಟ್ಪಾತ್ ವ್ಯಾಪಾರಿಗಳ ತೆರವು ಕಾರ್ಯ ಸರಿಯಾಗಿ ನಡೆಸುತ್ತಿಲ್ಲ, ಚರಂಡಿ, ಮೋರಿ ದುರಸ್ತಿ ಆಗಲಿಲ್ಲ, ಅದರಲ್ಲಿರುವ ತ್ಯಾಜ್ಯದ ಬ್ಲಾಕ್ ಸ್ಪಾಟ್ ತೆರವು ಗೊಳಿಸಿಲ್ಲ, ಅಲ್ಲಲ್ಲಿ ರಸ್ತೆ ಗುಂಡಿಗಳು ಇವೆ, ಹೀಗೆ ಯಾವುದೇ ಕೆಲಸ ಹೇಳಿದರೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದರು.

ಸರ್ಕಾರ ಆಯ್ಕೆ ಮಾಡಿದ ವಾರ್ಡಿನಲ್ಲಿ ಕನಿಷ್ಠ ಎಲ್ಲಾ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿರಬೇಕಿತ್ತು. ಆದರೆ ಇಲ್ಲಿ ಬೆರಳಣಿಕೆ ಅಧಿಕಾರಿಗಳು ಮಾತ್ರ ಹಾಜರಿದ್ದಾರೆ. ಜಂಟಿ ಆಯುಕ್ತರು ಇಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳು ಇಲ್ಲ. ಅದೇ ರೀತಿ ವಿವಿಧ ಇಲಾಖೆಯ ಯಾವ ಅಧಿಕಾರಿಗಳೂ ಹಾಜರಿಲ್ಲ. ಈ ಬಗ್ಗೆ ಸಂಪೂರ್ಣ ವರದಿ ಪಡೆದು ಸಚಿವ ಕಷ್ಟ ಬೈರೇಗೌಡರವರಿಗೆ ಪತ್ರ ಬರೆಯುವೆ.ಅಂತಹವರ ಮೇಲೆ ಕಠಿಣ ಕ್ರಮ ಕೂಡಲೇ ಆಗಬೇಕು ಎಂದು ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಆಗ್ರಹಿಸಿದ್ದಾರೆ.

ಈ ಬಗ್ಗೆ ಅನೇಕ ಸಲ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದೇನೆ ಏನೂ ಪ್ರಯೋಜನ ಆಗಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನರ ಎದುರು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲವೇ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗೆ ಸ್ಥಳೀಯ ಜನರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳೇ ಎಚ್ಚರ, ಕರ್ತವ್ಯ ಲೋಪ ಕಂಡರೆ ಲೋಕಾಯುಕ್ತ ಕೇಸ್‌
ಎಲ್ಲ ಕ್ಷೇತ್ರದಲ್ಲಿ ಎಐ ಮಹತ್ವದ ಬದಲಾವಣೆ