- ಜನರಲ್ಲಿ ಕಲಾಸಕ್ತಿ ಮೂಡಿಸುವ ಉದ್ದೇಶ: ವೈ.ಕುಮಾರ ಹೇಳಿಕೆ - - - ದಾವಣಗೆರೆ: ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದ 60 ವರ್ಷದ ವಜ್ರ ಮಹೋತ್ಸವ ಸಂಭ್ರಮ ಅಂಗವಾಗಿ ಫೆ.28ರಂದು ಯೂನಿವರ್ಸಿಟಿ ಕಾಲೇಜು ಆಫ್ ವಿಜುವಲ್ ಆರ್ಟ್ಸ್ ಅಲುಮ್ನಿ ಅಸೋಸಿಯೇಷನ್‌ನಿಂದ ಚಿಗುರು ಚಿತ್ತಾರ-2025ನ್ನು ಕಾಲೇಜಿನ ಆವರಣದಲ್ಲಿ ಫೆ.28ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ, ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ.ಕುಮಾರ ಹೇಳಿದರು.
ಚಿತ್ರಕಲಾವಿದ ಶ್ರೀನಾಥ ಬಿದರೆ, ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ, ಡಾ.ಸತೀಶ ವಲ್ಲೇಪುರೆ ಇತರರು ಭಾಗವಹಿಸುವರು. ಚಿಗುರು ಚಿತ್ತಾರ ಹೆಸರಿನಲ್ಲಿ ಜಿಲ್ಲೆಯ 6 ಶಾಲೆಗಳಲ್ಲಿ ಚಿತ್ರಕಲೆ ಮತ್ತು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಸುಮಾರು 6500 ಮಕ್ಕಳನ್ನು ತಲುಪಿದ್ದು, ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಅಭಿನಂದನಾ ಪತ್ರ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಈಚಿನ ವರ್ಷಗಳಲ್ಲಿ ಕಲೆಯ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ, ಅಭಿರುಚಿ ಮೂಡಿಸುವ ಸದುದ್ದೇಶದಿಂದ ಶಾಲೆಗಳಲ್ಲೇ ಚಿತ್ರಕಲೆ ಮತ್ತು ಪ್ರಾತ್ಯಕ್ಷಿಕೆ ಜೊತೆಗೆ ಸ್ಪರ್ಧೆ ನಡೆಸಲಾಗಿತ್ತು. ಪ್ರತಿ ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.ಅಸೋಸಿಯೇಷನ್‌ನ ಚಂದ್ರಶೇಖರ ಎಸ್.ಸಂಗಾ, ಎಂ.ರಾಮು, ಎನ್.ಪ್ರಶಾಂತ, ವಿನಯ ಸೊನ್ನದ್, ರಾಘವೇಂದ್ರ ನಾಯಕ, ಅತೀಕ್ ವುಲ್ಲಾ, ಬಿ.ಅಚ್ಯುತಾನಂದ ಇದ್ದರು.
- - - -23ಕೆಡಿವಿಜಿ61.ಜೆಪಿಜಿ:ದಾವಣಗೆರೆಯಲ್ಲಿ ಭಾನುವಾರ ಯೂನಿವರ್ಸಿಟಿ ಕಾಲೇಜು ಆಫ್ ವಿಜುವಲ್ ಆರ್ಟ್ಸ್ ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ, ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ.ಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.