ತೆರಿಗೆ ಸಂಗ್ರಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ

KannadaprabhaNewsNetwork |  
Published : Jan 25, 2026, 01:15 AM IST
೨೪ಕೆಎಲ್‌ಆರ್-೭ಮಾಲೂರು ತಾಲ್ಲೂಕು ಮಾಸ್ತಿ ಗ್ರಾಮ ಹಸಾಂಡಹಳ್ಳಿ ರಸ್ತೆಯಲ್ಲಿರುವ ಬಾಲಾಜಿ ಬಾರನ್ನು ಜನವಸತಿ ಸ್ಥಳಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದು ಸ್ಥಳೀಯ ನಿವಾಸಿಗಳು ವಿರೋಧಿಸಿ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು. | Kannada Prabha

ಸಾರಾಂಶ

ತಾಲೂಕು ತೆರಿಗೆ ಸಂಗ್ರಹದಲ್ಲಿ ಶೇಕಡಾ 97.82 ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದೆ. ಚಿಂತಾಮಣಿ ತಾಲೂಕು ಶೇಕಡಾ 96.72 , ಗೌರಿಬಿದನೂರು ಶೇ. 93.71 ಪ್ರಗತಿಯೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದ ಸೆಪ್ಟೆಂಬರ್ 2025 ರಿಂದ 22 ಜನವರಿ 2026 ರವರೆಗಿನ ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹದಲ್ಲಿ ಜಿಲ್ಲೆ ರಾಜ್ಯದಲ್ಲಿ ಸತತವಾಗಿ ಪ್ರಥಮ ಸ್ಥಾನದಲ್ಲಿದ್ದು, ಶೇಕಡಾ 95.25 ಪ್ರಗತಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ರಾಯಚೂರು ಜಿಲ್ಲೆ ಶೇಕಡಾ 94.90, ಉತ್ತರ ಕನ್ನಡ ಜಿಲ್ಲೆ ಶೇಕಡಾ 84.80 ಕ್ರಮವಾಗಿ ಇದು ಎರಡನೇ ಮತ್ತು ಮೂರನೇ ಸ್ಥಾನವನ್ನು ಪಡೆದಿದೆ ಹರ್ಷದಾಯಕ ಎಂದು ಜಿಪಂ ಸಿಇಒ ಡಾ.ವೈ.ನವೀನ್ ಭಟ್ ತಿಳಿಸಿದ್ದಾರೆ.ತಾಲೂಕು ತೆರಿಗೆ ಸಂಗ್ರಹದಲ್ಲಿ ಶೇಕಡಾ 97.82 ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದೆ. ಚಿಂತಾಮಣಿ ತಾಲೂಕು ಶೇಕಡಾ 96.72 , ಗೌರಿಬಿದನೂರು ಶೇ. 93.71 ಪ್ರಗತಿಯೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಗುಡಿಬಂಡೆ-93.65 , ಶಿಡ್ಲಘಟ್ಟ-93.39 , ಮಂಚೇನಹಳ್ಳಿ-92.88 , ಚೇಳೂರು-92.68 ಮತ್ತು ಬಾಗೇಪಲ್ಲಿ ತಾಲೂಕುಗಳು-92.40 ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿವೆ. ಜಿಲ್ಲೆಯಲ್ಲಿ 157 ಗ್ರಾಮ ಪಂಚಾಯಿತಿಗಳು ಅದರಲ್ಲಿ 55 ಗ್ರಾಮ ಪಂಚಾಯಿತಿಗಳು ಶೇ. 100 ರಷ್ಟು ತೆರಿಗೆ ಸಂಗ್ರಹ ಮಾಡಿದ್ದು, ಉಳಿದಂತೆ 55 ಗ್ರಾಮಗಳು ಪಂಚಾಯಿತಿಗಳು ಶೇಕಡಾ 90 , 47 ಗ್ರಾಮ ಪಂಚಾಯಿತಿಗಳು ಶೇ. 80ರಷ್ಟು ತೆರಿಗೆ ಸಂಗ್ರಹಣೆ ಮಾಡಿರುವುದು ಸಂತಸ ತಂದಿದೆ.ಜಿಲ್ಲೆಯಲ್ಲಿ ಜ. 9ರಿಂದ 23 ರವರೆಗೆ ತೆರಿಗೆ ಸಂಗ್ರಹಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ತೆರಿಗೆ ಸಂಗ್ರಹಣೆಯನ್ನು ಕೈಗೊಳ್ಳಲಾಗಿದೆ, ಪ್ರತಿಯೊಬ್ಬರು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಪಾವತಿ ಮಾಡಿ ಅಭಿವೃದ್ಧಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!