ಕಾಂಗ್ರೆಸ್‌ ಆಡಳಿತ ರಾಜ್ಯವನ್ನು ದುಸ್ಥಿತಿಗೆ ದೂಡಿದೆ: ಛಲವಾದಿ

Published : May 26, 2025, 07:23 AM IST
Chalavadi narayanaswamy

ಸಾರಾಂಶ

ಸಾಧನೆ ಸಮಾವೇಶದ ಹೆಸರಲ್ಲಿ ಜನತೆಯ ವೇದನೆ ಸಮಾವೇಶ ಮಾಡಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ

 ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಮಾಡುತ್ತಿದ್ದರೆ ರಾಜಧಾನಿ ಬೆಂಗಳೂರು ನೀರಿನಿಂದ ಮುಳುಗಿ ಜನತೆ ಮಳೆಯ ನೀರಿನಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದರು.

 ಇತ್ತ ಗಮನ ಹರಿಸದ ಸರ್ಕಾರ ಸಂಭ್ರಮದಲ್ಲಿ ಮುಳುಗಿತ್ತು. ಸಾಧನೆ ಸಮಾವೇಶದ ಹೆಸರಲ್ಲಿ ಜನತೆಯ ವೇದನೆ ಸಮಾವೇಶ ಮಾಡಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ, ಕೇವಲ ‘ವಸೂಲಿ ಸರ್ಕಾರ’ವಾಗಿದೆ ಎಂದರು.

ರಾಜ್ಯದ ಸಮಗ್ರ ದುಸ್ಥಿತಿಗಾಗಿ ಹೊಸಪೇಟೆಯಲ್ಲಿ ಸಾಧನ ಸಮಾವೇಶ ಮಾಡಿದೆ. ಹಾಲಿನ ದರ ಮೂರು ಬಾರಿ ಹೆಚ್ಚಿಸಿ ಜನತೆಗೆ ಹೊರೆ ಮಾಡಿದೆ. ಹೆಚ್ಚಿಸಿದ ದರವನ್ನು ರೈತರಿಗೆ ನೀಡುವುದಾಗಿ ಹೇಳಿದೆ ಆದರೆ ಇದುವರೆಗೂ ರೈತರಿಗೆ ನೀಡಿಲ್ಲ. ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದರು.

PREV
Read more Articles on

Recommended Stories

ಚಿತ್ರಾವತಿ ಅಣೆಗೆ ಶ್ರೀರಾಮರೆಡ್ಡಿ ಹೆಸರಿಡಲು ಆಗ್ರಹ
ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ