ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದಾರೆ ಎಂಬುದು ನಂಬಲಾಗದ ಸುದ್ದಿಯಾಗಿದೆ ಎಂದು ಪೊತೇನಹಳ್ಳಿ ಗ್ರಾಮದ ಇಸ್ಲಾಂ ಸಮುದಾಯದ ಗುರುಗಳಾದ ಸೈಯದ್ ಲುಕ್ಮಾನ್ ಹೇಳಿದರು.

ತಾಲೂಕಿನ ಪೊತೇನಹಳ್ಳಿ ಗ್ರಾಮದಲ್ಲಿ ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಹತ್ಯೆ ಹಿನ್ನೆಲೆ ಕಪ್ಪು ಬಟ್ಟೆ ಧರಿಸಿ, ಇರಾನ್‌ ನಾಯಕನ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿದರು.

ಶಿಯಾ ಸಮುದಾಯ ಅಷ್ಟೇ ಅಲ್ಲದೆ ಇಡೀ ಇರಾನ್ ದೇಶವನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ, ಈ ಕೃತ್ಯಕ್ಕೆ ಅರಬ್ ರಾಷ್ಟ್ರಗಳ ಕುಮ್ಮಕ್ಕು ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೋತೇನಹಳ್ಳಿ ಗ್ರಾಮದಲ್ಲಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ 3 ದಿನಗಳ ಶೋಕಾಚರಣೆ ನಡೆಯಲಿದೆ. ಮತ್ತು ಗ್ರಾಮದಲ್ಲಿ ಯಾವುದೇ ವ್ಯಾಪಾರ- ವಹಿವಾಟುಗಳು ನಡೆಯುವುದಿಲ್ಲ ಎಂದು ತಿಳಿಸಿದರು.


ಸಮುದಾಯದ ಗುರುಗಳಾದ ಮೀರ್ ಕರಾರ್ ಹುಸೇನ್, ಮೀರ್ ಶಬೀರ್ ಅಲಿ, ಮೀರ್ ಯೂನಸ್ ರಜಾ, ಮೌಲಾನ ಆಸನ್ ಮೈದಿ, ಕೌನೈನ್ ರಜಾ, ಮಿರ್ಜಾ ಅಕ್ಬರ್ ಅಲಿ, ಮೀರ್ ಜಮೀನ್ ರಜಾ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.