ರೈತನ ಮೇಲೆ ಗುಂಡು: ಆರೋಪಿ ಗಡಿಪಾರಿಗೆ ಆಗ್ರಹಸರ್ಕಾರ ನಿರ್ಮಿಸಬೇಕಾದ ರಸ್ತೆಯನ್ನು ಗಣಿ ಮಾಲೀಕರು ಮಾಡುತ್ತಿದ್ದಾರೆ, ಇದನ್ನು ತಡೆಯಲು ಹೋದಾಗ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ, ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಗಡಿ ಪಾರು ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರೈತ ಸಂಘಟನೆ ಮತ್ತು ಕನ್ನಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿವೆ.