ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹಾಗೂ ನೈತಿಕ ಮೌಲ್ಯಗಳ ಶಿಕ್ಷಣ ಸಿಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ, ವಿನಯತೆ, ಶಿಸ್ತು, ಕಲಿಸಬೇಕು. ಪೋಷಕರು ಮೊಬೈಲ್‌ಅನ್ನು ಮಕ್ಕಳಿಗೆ ನೀಡಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ.
ಮಾಲೂರು: ವಿದ್ಯಾರ್ಥಿಗಳು ಓದುವಾಗ ಮೊಬೈಲ್, ಇಂಟರ್‌ನೆಟ್, ಟಿವಿಗಳಿಂದ ಅಂತರ ಕಾಯ್ದುಕೊಂಡು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ವಕೀಲರಾದ ಆರ್.ಸಿ. ಅಪ್ಪಾಜಿಗೌಡ ತಿಳಿಸಿದರು. ನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹಾಗೂ ನೈತಿಕ ಮೌಲ್ಯಗಳ ಶಿಕ್ಷಣ ಸಿಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ, ವಿನಯತೆ, ಶಿಸ್ತು, ಕಲಿಸಬೇಕು. ಪೋಷಕರು ಮೊಬೈಲ್‌ಅನ್ನು ಮಕ್ಕಳಿಗೆ ನೀಡಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ. ಮೊಬೈಲ್ ಫೋನ್ ಹೆಚ್ಚಾಗಿ ಉಪಯೋಗಿಸುವುದರಿಂದ ಮಕ್ಕಳ ಜ್ಙಾನದ ಮೇಲೆ ದುಷ್ಪರಿಣಾಮ ಬೀರಿ ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ ಎಂದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಂ.ವಿಜಯಕುಮಾರ್, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜನಾಕಾರಿ ಎಸ್.ಎಚ್. ಮಹೇಶ್ವರಪ್ಪ, ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರಮ್ಯಾ, ಗಾಯತ್ರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಹಾನಾ ಬೇಗಂ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ರಾಜಪ್ಪ ಶಿಕ್ಷಕರಾದ ಮೈನಾ, ಕಬೀರ್, ಜೆ.ಇ.ಬಸವರಾಜಪ್ಪ, ಹೇಮಲತ, ಜೀವನ್, ಮಂಜುನಾಥ್, ಉಮೇಶ್, ರಾಗಿಣಿ ವಿನೋದ, ನೇತ್ರಾವತಿ, ಎಚ್.ಎನ್.ಮಹಾದೇವಸ್ವಾಮಿ, ಮಧು, ತೇಜಸ್ವಿನಿ, ಸುಮಾ, ನಾರಾಯಣಸ್ವಾಮಿ ಹಾಜರಿದ್ದರು.