ಕನ್ನಡಪ್ರಭ ವಾರ್ತೆ ಪಾಂಡವಪುರ
ಚಿಕ್ಕಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಕಾಮನ್ ಸಾಫ್ಟ್‌ವೇರ್ ಅಳವಡಿಕೆ ಮಾಡಿದ ದೇಶದ ಎರಡನೇ ಸಂಘವಾಗಿರುವುದು ನಮ್ಮಲ್ಲರ ಹೆಗ್ಗಳಿಕೆಯಾಗಿದೆ ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ಗ್ರಾಮದ ಡೇರಿ ಮೇಲಂತಸ್ಥಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾದರಿಯಾಗಿ ಕೆಲಸ ಮಾಡಬೇಕು. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಉತ್ಪಾದಕರಿಗೆ ಒದಗಿಸಿಕೊಡುವ ಜತೆಗೆ ಗುಣಮಟ್ಟದ ಹಾಲು ಉತ್ಪಾದನೆ ಜತೆಗೆ ಆಡಳಿತ ಮಂಡಳಿಯವರು ಪಾರದರ್ಶಕವಾಗಿ ಕೆಲಸ ಮಾಡಿದರೆ ಸಂಘಗಳು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು.
ರೈತರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಒಕ್ಕೂಟವು ದೆಹಲಿ ಮಾರುಕಟ್ಟೆಯಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಮಾರುಕಟ್ಟೆಯ ವಿಸ್ತೀರ್ಣವನ್ನು ಮತ್ತಷ್ಟು ಭಾಗಕ್ಕೆ ವಿಸ್ತರಿಸುವ ಕೆಲಸ ಮಾಡಲಾಗುವುದು ಎಂದರು.ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಗ್ರಾಮದ ಸಂಘವು ಕೆಲವು ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಿಕೊಂಡರೆ ದೇಶದಲ್ಲಿ ಉತ್ತಮ ಮೂರು ಸಂಘಗಳಿಗೆ ನೀಡುವ ರಾಷ್ಟ್ರೀಯ ಬೋಪಾಲ್ ರತ್ನ ಪ್ರಶಸ್ತಿ ಪಡೆಯಲು ಅರ್ಹವಾಗಿದೆ ಎಂದರು.
ರಾಷ್ಟ್ರೀಯ ಬೋಪಾಲ್ ರತ್ನ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಅರಕೆರೆ, ಟಿ.ಎಂ.ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳು ಪಡೆದುಕೊಂಡಿವೆ. ಕಳೆದ ವರ್ಷ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘವು ಸಹ ಪ್ರಯತ್ನಿಸಿ ನಾಲ್ಕನೇ ಸ್ಥಾನಪಡೆದು ಸ್ವಲ್ಪ ದರದಲ್ಲಿ ಪ್ರಶಸ್ತಿ ವಂಚಿತರಾದರು ಎಂದರು.ಡೇರಿ ಅಧ್ಯಕ್ಷ ಸಿ.ಎಸ್.ಚಂದನ್ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರು ಶಾಸಕರು, ಸಚಿವರಾಗಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅಣ್ಣನ ಮಗ ಸಿ.ಶಿವಕುಮಾರ್ ಅವರು ಮನ್ಮುಲ್ ನಿರ್ದೇಶಕರಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸಂಘಗಳ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.
ಈ ವೇಳೆ ಮನ್‌ಮುಲ್ ನಿರ್ದೇಶಕರಾದ ಸಿ.ಶಿವಕುಮಾರ್ ಅವರನ್ನು ಸಂಘದಿಂದ ಅಭಿನಂದಿಸಲಾಯಿತು. ಡೇರಿ ಉಪಾಧ್ಯಕ್ಷೆ ಗೀತಾ, ನಿರ್ದೇಶಕರಾದ ಸಿ.ಕೆ.ಕುಮಾರ್, ಸುರೇಶ್, ಕುಮಾರ್, ರಮೇಶ್, ವೀರೇಂದ್ರ, ನಿಂಗರಾಜಮ್ಮ, ವರಲಕ್ಷ್ಮಿ, ಪದ್ಮ, ಮಾಜಿ ಅಧ್ಯಕ್ಷ ಸಿ.ಎ.ನಿಂಗೇಗೌಡ, ಗ್ರಾಪಂ ಸದಸ್ಯರಾದ ಮಂಗಳಮ್ಮ, ಶಿವಲಿಂಗು, ಭಾರತಿ, ಮುಖಂಡರಾದ ಚಿಕ್ಕಾಡೆ ಚೇತನ್, ಡಿ.ಕೆ.ಕುಳ್ಳೇಗೌಡ, ಜವರಶೆಟ್ಟಿ, ಅಂಗಡಿಚನ್ನೇಗೌಡ, ಆಲೆಮನೆ ತಿಮ್ಮೇಗೌಡ, ಟಿ.ಎನ್.ಧರ್ಮ, ಬೊಮ್ಮೇಗೌಡ, ಶ್ರೀಧರ, ಬಲರಾಮು, ಕುಮಾರಸ್ವಾಮಿ, ಕೆ.ಧರ್ಮಲಿಂಗು, ಚೇತನ್, ಚಿಕ್ಕಣ್ಣ, ಕೆ.ಸಿ.ಶಿವಲಿಂಗು, ಎ.ಸಿ.ಶಿವಲಿಂಗೇಗೌಡ, ಸಿ.ಬೊಮ್ಮೇಗೌಡ, ಸಿ.ಎಂ.ರಾಮಚಂದ್ರ, ದೇವರಾಜು, ಕಾರ್‍ಯದರ್ಶಿ ಎಸ್.ಲೋಕೇಶ್, ಮೋನೋಜ್, ಅಭಿಷೇಕ್ ಸೇರಿದಂತೆ ಹಲವರು ಇದ್ದರು.