ಭೂತ ಬಿಡಿಸುವ ನೆಪದಲ್ಲಿ ರಕ್ತ ಕುಡಿಸಲು ಯತ್ನ!

Published : Aug 24, 2026, 11:09 AM IST
Koppa

ಸಾರಾಂಶ

ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ತೀಶ್ ಪಾತ್ರಿ ಎಂಬುವರು ನಿರ್ಮಿಸಿರುವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ

ಕೊಪ್ಪ (ಚಿಕ್ಕಮಗಳೂರು) : ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಸತೀಶ್ ಪಾತ್ರಿ ಎಂಬುವರು ನಿರ್ಮಿಸಿರುವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಲಾಗಿದೆ

ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಲಾಗಿದೆ, ರಕ್ತಾಹಾರ ಸ್ವೀಕರಿಸದಿದ್ದರೆ, ಬಾಯಿಯಲ್ಲಿ ಕರ್ಪೂರ ಇಡುವ ಬೆದರಿಕೆ ಹಾಕಲಾಗಿದೆ. ಜೊತೆಗೆ ಇನ್ನಿತರ ಹಿಂಸೆಯನ್ನು ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎನ್‌ಆರ್‌ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯ ವಿಡಿಯೋ-ಪಾತ್ರಿ:

ವಿಡಿಯೋ ವೈರಲ್ ಆದ ಬೆನ್ನಲ್ಲೇ ಸತೀಶ್‌ ಪಾತ್ರಿ ಪ್ರತಿಕ್ರಿಯಿಸಿದ್ದು, ನಾನು ದರ್ಶನ ಮಾಡಿ ಒಂದೂವರೆ ವರ್ಷಗಳು ಕಳೆದಿವೆ. ಈ ವಿಡಿಯೋ 3 ವರ್ಷಗಳ ಹಳೆಯದ್ದಾಗಿದ್ದು, ದೇಗುಲದ ಹಳೆಯ ಧರ್ಮದರ್ಶಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

PREV
Stay informed with the latest news from Chikkamagaluru district (ಚಿಕ್ಕಮಗಳೂರು ಸುದ್ದಿ) — covering local politics, coffee‑region updates, civic issues, environment, tourism, culture, crime and community affairs on Kannada Prabha News..
Read more Articles on

Recommended Stories

ಸೋರುತಿಹುದು ಇಂದಿರಾ ಕ್ಯಾಂಟೀನ್ ಮಾಳಿಗೆ
ವಿದ್ಯಾರ್ಥಿಗಳು ಸಮಾಜಕ್ಕೆ ಮಾರಕವಾಗಬಾರದು