ರಾಜ್ಯದಲ್ಲೂ ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಜಲಪಾತಗಳ ಸಮೀಪಕ್ಕೆ ಜನರು ತೆರಳುವುದನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ.
ಬೆಂಗಳೂರು : ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳಲ್ಲಿ ಜಲಪಾತಗಳ ಬಳಿ ಜನರು ಬೇಜವಾಬ್ದಾರಿಯಿಂದ ವರ್ತಿಸಿ ಜೀವ ಕಳೆದುಕೊಂಡ ವರದಿಗಳು ಬರುತ್ತಿರುವುದರಿಂದ ನಮ್ಮ ರಾಜ್ಯದಲ್ಲೂ ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಜಲಪಾತಗಳ ಸಮೀಪಕ್ಕೆ ಜನರು ತೆರಳುವುದನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ.
ಆದರೂ ಶನಿವಾರ ಮತ್ತು ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ವಿವಿಧ ಜಲಪಾತಗಳ ಬಳಿ ಜನಸಾಗರವೇ ಸೇರುತ್ತಿದೆ. ಮಳೆಗಾಲವಾದ್ದರಿಂದ ಜಲಪಾತದ ಬಳಿ ಜಾರುವಂತ ವಾತಾವರಣವಿರುತ್ತದೆ.
ಆದ್ದರಿಂದ ಹಲವೆಡೆ ಪ್ರವಾಸಿಗರಿಗೆ ಮುನ್ನಚ್ಚೆರಿಕಾ ಕ್ರಮವಾಗಿ ನಿಷೇಧ ಹೇರಲಾಗಿದೆ. ಇಷ್ಟಿದ್ದರೂ ಜಲಪಾತಗಳ ಬಳಿ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಲಪಾತದ ಬಳಿ ತೆರಳುವುದಲ್ಲೇ ಅಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ;.