;Resize=(412,232))
ಚಿಕ್ಕಮಗಳೂರು: ನಗರದ ಸೇಂಟ್ ಜೋಸೆಫರ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ 7 ನೇ ತರಗತಿ ಬಾಲಕನಿಗೆ ಶಾಲಾ ಪ್ರಿನ್ಸಿಪಾಲ್ ಯಾರನ್ನು ಕೇಳಿ ಮಾಲೆ ಹಾಕಿದ್ದಿಯಾ ಎಂದು ಪ್ರಶ್ನಿಸಿ ಥಳಿಸಿರುವ ಘಟನೆ ನಡೆದಿದೆ.
ಅಲ್ಲದೆ ಶರ್ಟ್ ಒಳಗೆ ಬನಿಯನ್ ಏಕೆ ಹಾಕಿಲ್ಲ ಎಂದು ವಿಚಾರಿಸಿದ್ದಾರೆ, ಶಬರಿಮಲೆಗೆ ಹೋಗಲು ರಜೆ ನೀಡುವುದಿಲ್ಲ, ಇರುಮುಡಿಯನ್ನು ನಿಮ್ಮ ತಂದೆಯ ಕೈಯಲ್ಲಿ ಶಬರಿಮಲೆಗೆ ಕಳುಹಿಸಿ ನೀನು ಶಾಲೆಗೆ ಬರಬೇಕೆಂದು ತಾಕೀತು ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಮತ್ತು ಮಾಲಾಧಾರಿಗಳು ಶಾಲೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಶಾಲೆಯ ಪ್ರಿನ್ಸಿಪಾಲ್, ಪ್ರತಿಭಟನಾಕಾರರ ಮುಂದೆ ಬಂದು ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.