''''ತೇಜಸ್ವಿ ವಿಸ್ಮಯ ಲೋಕ'''''''', ''''''''ಭದ್ರಾ ಬಾಲ್ಯ'''''''' ಪ್ರಶಸ್ತಿ ಪಡೆದಿದ್ದ ಸ್ಥಬ್ಧ ಚಿತ್ರಗಳು ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಳೆದ ಎರಡು ವರ್ಷ ಸತತವಾಗಿ ಪ್ರಶಸ್ತಿ ಪಡೆದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಅವಕಾಶ ಕೈತಪ್ಪಿದೆ.
ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಸಲ್ಲಿಸಲಾಗಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ದಸರಾ ಸ್ತಬ್ಧಚಿತ್ರ ಉಪಸಮಿತಿ ತಿರಸ್ಕರಿ ಸಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.2024ರಲ್ಲಿ ಕವಿ, ಕಾದಂಬರಿಕಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಸೃಜನಶೀಲ ಜಗತ್ತನ್ನು ಪರಿಚ ಯಿಸುವ ''''''''ತೇಜಸ್ವಿ ವಿಸ್ಮಯ ಲೋಕ'''''''' ಸ್ತಬ್ಧಚಿತ್ರ ಪ್ರದರ್ಶನಗೊಂಡು ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. ಬಳಿಕ 2025ರಲ್ಲಿ ಭದ್ರಾ ಅಭಯಾರಣ್ಯ ಹಾಗೂ ಪ್ರಕೃತಿಯ ಮಹತ್ವವನ್ನು ಬಿಂಬಿಸುವ ''''''''ಭದ್ರಾ ಬಾಲ್ಯ'''''''' ಸ್ತಬ್ಧಚಿತ್ರ ಮೂರನೇ ಬಹುಮಾನ ಗಳಿಸುವ ಮೂಲಕ ಗಮನ ಸೆಳೆದಿತ್ತು.ಸತತ ಎರಡು ವರ್ಷ ಜಿಲ್ಲೆಗೆ ಪ್ರಶಸ್ತಿ ತಂದುಕೊಟ್ಟಿದ್ದ ಸ್ತಬ್ಧಚಿತ್ರಗಳ ಹಿನ್ನೆಲೆಯಲ್ಲಿ ಈ ಬಾರಿಯೂ ಚಿಕ್ಕಮಗಳೂರು ಜಿಲ್ಲೆಯ ಸಾಂಸ್ಕೃತಿಕ ವೈಭವ ಮತ್ತು ಐತಿಹಾಸಿಕ ಪರಂಪರೆಯನ್ನು ಮೈಸೂರು ದಸರಾ ವೇದಿಕೆಯಲ್ಲಿ ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆ ಈಡೇರಿಲ್ಲ.ಚಿಕ್ಕಮಗಳೂರಿಗೆ ಗಾಂಧೀಜಿ:100 ವರ್ಷ
ಜಿಲ್ಲೆಯ ಇತಿಹಾಸದಲ್ಲಿ ಮಹತ್ವ ಪಡೆದಿರುವ ಗಾಂಧೀಜಿಯವರ ಭೇಟಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸಾರುವ ಉದ್ದೇಶ ಈ ಪರಿಕಲ್ಪನೆಯ ಹಿಂದಿತ್ತು. ಆದರೆ, ಪ್ರಸ್ತಾವನೆಗೆ ಅನುಮೋದನೆ ದೊರೆಯದ ಕಾರಣ ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ಚಿಕ್ಕಮಗಳೂರಿನ ಸ್ತಬ್ಧಚಿತ್ರ ಕಾಣಿಸಿಕೊಳ್ಳುವುದಿಲ್ಲ.15 ಜಿಲ್ಲೆಗಳಲ್ಲಿ ಚಿಕ್ಕಮಗಳೂರಿಗೆ ಇಲ್ಲ ಅವಕಾಶ
ಆಡಂಬರ, ಅದ್ಧೂರಿ ದಸರಾ ಸೀಮಿತವೇ?
ಚಿಕ್ಕಮಗಳೂರು ಜಿಲ್ಲೆ ಕೇವಲ ಪ್ರವಾಸಿ ತಾಣಗಳು ಮತ್ತು ಕಾಫಿ ಬೆಳೆಗಳಿಗೆ ಮಾತ್ರ ಪ್ರಸಿದ್ಧವಾಗಿಲ್ಲ. ಸಾಹಿತ್ಯ, ಪರಿಸರ, ಐತಿಹಾಸಿಕ ಘಟನೆಗಳು, ಸ್ವಾತಂತ್ರ್ಯ ಹೋರಾಟದ ನೆನಪುಗಳು, ಜನಪದ ಸಂಸ್ಕೃತಿ ಹಾಗೂ ಮಲೆನಾಡಿನ ವಿಶಿಷ್ಟ ಜೀವನ ಶೈಲಿಯೂ ಜಿಲ್ಲೆಯ ಗುರುತಿನ ಭಾಗವಾಗಿವೆ. ಇಂತಹ ವೈವಿಧ್ಯಮಯ ವಿಷಯವನ್ನು ರಾಜ್ಯಮಟ್ಟದಲ್ಲಿ ಪರಿಚಯಿ ಸಲು ಮೈಸೂರು ದಸರಾ ಉತ್ತಮ ಅವಕಾಶವಾಗಿದೆ. ಸ್ತಬ್ಧಚಿತ್ರ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿ, ಜಿಲ್ಲೆಗಳ ಇತಿ ಹಾಸ ಮತ್ತು ಸಾಂಸ್ಕೃತಿಕ ಕೊಡುಗೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯ ಮಲೆನಾಡಿಗರಿಂದ ವ್ಯಕ್ತವಾಗಿದೆ.
ಈ ಬಾರಿ ಮೈಸೂರು ದಸರಾ ಮಹೋತ್ಸವದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಿಂದ ಮಹಾತ್ಮ ಗಾಂಧಿಜಿ ಅವರು ಜಿಲ್ಲೆಗೆ ಭೇಟಿ ನೀಡಿ 100 ವರ್ಷ ತುಂಬಿದ ಸವಿನೆನಪಿನ ಭಾಗವಾಗಿ ಸ್ತಬ್ಧ ಚಿತ್ರದ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿತ್ತು. 15 ಜಿಲ್ಲೆಗೆ ಮಾತ್ರ ಅವಕಾಶ ನೀಡುವುದಾಗಿ ಅನುಮೋದನೆ ಸಿಕ್ಕಿಲ್ಲ.
ಫೋಟೋ