ಕನ್ನಡಪ್ರಭ ವಾರ್ತೆ ಸುತ್ತೂರು
ನಂಜನಗೂಡು ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿಯ ಹದಿನಾರು ಗ್ರಾಮದಲ್ಲಿ ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು. ಜೆಎಸ್‌ಎಸ್ ಸಂಸ್ಥೆ ಈ ರೀತಿಯ ಶಿಬಿರಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುತ್ತಿರುವುದು ಅತ್ಯಂತ ಸಂತಸಕರ ವಿಚಾರವಾಗಿದೆ. ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲಾ ಶಿಬಿರಾರ್ಥಿಗಳು ಶಿಸ್ತು, ಸಲಹೆ- ಸೂಚನೆಯನ್ನು ಶ್ರದ್ದಾಭಕ್ತರಾಗಿ ಪಾಲಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಎಚ್.ಎನ್. ನಂಜಪ್ಪ, ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ವಿ.ಬಿ. ಲೋಕೇಶ್, ಉಪನ್ಯಾಸಕಾರಾದ ಜಿ. ಅನುಷಾ, ಮನೋಹರ್, ಎಸ್. ಮಧುಸೂಧನ್, ಯೋಗೇಶ್ವರಿ, ಗಿರೀಶ್, ಗ್ರಾಪಂ ಸದಸ್ಯ ನಾಗರಾಜು, ಸಿದ್ದಪ್ಪ, ಹದಿನಾರು ಗ್ರಾಪಂ ಅಧ್ಯಕ್ಷೆ ಸಣ್ಣತಾಯಮ್ಮ, ಮುಖಂಡರಾದ ಮಲ್ಲಿಕಾರ್ಜುನ್, ನಂಜುಂಡಸ್ವಾಮಿ, ಮೋಹನ್, ಆನಂದ್ ಮೊದಲಾದವರು ಇದ್ದರು.