ಮಾದಕ ವಸ್ತುಗಳಿಂದ ಮಕ್ಕಳು, ಯುವಕರು ದೂರವಿರಿ: ಎಸ್ಪಿ ಶಿವಾಂಶು ರಜಪೂತ್

KannadaprabhaNewsNetwork |  
Published : Mar 02, 2026, 02:00 AM IST
1ಕೆಜಿಎಫ್‌1 | Kannada Prabha

ಸಾರಾಂಶ

ನಮ್ಮ ಪೊಲೀಸ್, ನಮ್ಮ ಹೆಮ್ಮೆ. ಎಲ್ಲರಿಗೂ ಫಿಟ್ನೆಸ್ ಫ್ರೀ, ಮಾದಕ ವಸ್ತುಗಳ ಜಾಗೃತಿ ಹಾಗೂ ಕರ್ನಾಟಕ ಸೈಬರ್ ಜಾಗೃತಿಗಾಗಿ ಕೆಜಿಎಫ್ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ೫ ಕಿಮೀ ಮ್ಯಾರಥಾನ್ ಗೆ ನಗರಸಭೆ ಮೈದಾನದಲ್ಲಿ ಎಸ್ಪಿ ಶಿವಾಂಶು ರಜಪೂತ್ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೇವಲ ಕೆಜಿಎಫ್‌ನಲ್ಲಿ ಮಾತ್ರವಲ್ಲದೇ ಎಲ್ಲಾ ಕಡೆಗಳಲ್ಲೂ ಮಾದಕ ವಸ್ತುಗಳ ಕುರಿತಾಗಿ ಜಾಗೃತಿ ಕಡಿಮೆಯಿದ್ದು, ಎಲ್ಲರಿಗೂ ಈ ಕುರಿತು ಜಾಗೃತಿ ಮೂಡಿಸುವುದು ಮ್ಯಾರಥಾನ್ ಪ್ರಮುಖ ಉದ್ದೇಶವಾಗಿದೆ ಎಂದು ಎಸ್ಪಿ ಶಿವಾಂಶು ರಜಪೂತ್ ತಿಳಿಸಿದರು.

ನಮ್ಮ ಪೊಲೀಸ್, ನಮ್ಮ ಹೆಮ್ಮೆ. ಎಲ್ಲರಿಗೂ ಫಿಟ್ನೆಸ್ ಫ್ರೀ, ಮಾದಕ ವಸ್ತುಗಳ ಜಾಗೃತಿ ಹಾಗೂ ಕರ್ನಾಟಕ ಸೈಬರ್ ಜಾಗೃತಿಗಾಗಿ ಕೆಜಿಎಫ್ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ೫ ಕಿಮೀ ಮ್ಯಾರಥಾನ್ ಗೆ ನಗರಸಭೆ ಮೈದಾನದಲ್ಲಿ ಎಸ್ಪಿ ಶಿವಾಂಶು ರಜಪೂತ್ ಚಾಲನೆ ನೀಡಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಯುವಕರು, ಮಕ್ಕಳು ದೂರ ಇರಬೇಕು. ಯುವಕರು, ಮಕ್ಕಳು, ಯಾರೇ ಆಗಲಿ, ೧೧೨ ಸಂಖ್ಯೆಗೆ ಕರೆ ಮಾಡಿ ಮಾದಕ ವಸ್ತುಗಳ ಕುರಿತು ಮಾರಾಟ ಮಾಡುತ್ತಿರುವವರ ಕುರಿತು ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಕೂಡಲೇ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಒಮ್ಮೆ ಮಾದಕ ವಸ್ತುಗಳ ಚಟಕ್ಕೆ ದಾಸರಾದಲ್ಲಿ ಮತ್ತೆ ಆ ಕೂಪದಿಂದ ಹೊರಬರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಯಾರೂ ಸಹ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಬಾರದು. ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತು ಸೇವನೆಗೆ ದಾಸರಾದಲ್ಲಿ ಓದಲು, ಬರೆಯಲು ಸಾಧ್ಯವಾಗುವುದಿಲ್ಲ. ಮತ್ತು ಬೇರೆ ಯಾವುದೇ ಕೆಲಸವನ್ನು ಮಾಡಲು ಮನಸ್ಸಾಗದಂತಹ ಹಂತಕ್ಕೆ ಇದು ಮನುಷ್ಯನನ್ನು ತೆಗೆದುಕೊಂಡು ಹೋಗುತ್ತದೆ. ಆಗ ಮಾದಕ ವಸ್ತುಗಳನ್ನು ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಅಪರಾಧಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಕಿವಿಮಾತು ಹೇಳಿದರು.

ಡಿವೈಎಸ್ಪಿ ಲಕ್ಷ್ಮಯ್ಯ ಮಾತನಾಡಿ, ಮಾದಕ ವಸ್ತುಗಳನ್ನು ಸೇವಿಸಲೇಬೇಕೆಂಬ ಬಯಕೆಯಿಂದ ಮನೆಯಲ್ಲಿ ತಂದೆ, ತಾಯಂದಿರು ಇಟ್ಟಿರುವಂತಹ ಹಣವನ್ನು ಕದಿಯುವುದರಿಂದ ಪ್ರಾರಂಭವಾಗುವ ಅಪರಾಧ ಚಟುವಟಿಕೆಗಳು ದೊಡ್ಡ ಮಟ್ಟದ ದರೋಡೆಗಳನ್ನು ಮಾಡುವವರೆಗೆ ಕೊಂಡೊಯ್ಯುವುದು ದೇಶಕ್ಕೆ ಮಾರಕವಾಗುತ್ತದೆ. ಇಷ್ಟೆಲ್ಲ ಮಾಡುವುದರಿಂದ ಅಂತಿಮವಾಗಿ ಲಾಭವನ್ನು ಪಡೆದುಕೊಳ್ಳುವವರು ಉಗ್ರವಾದಿಗಳಾಗಿರುತ್ತಾರೆ. ಆದ್ದರಿಂದ ಪ್ರಾರಂಭದಲ್ಲಿಯೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಮೋಜಿಗಾಗಿ ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದ ವ್ಯಕ್ತಿ ಅವನಿಗೆ ಅರಿವಿಲ್ಲದಂತೆ ಪದೇ ಪದೇ ಅದನ್ನು ಬಳಸಲು ಪ್ರಾರಂಭಿಸುತ್ತಾನೆ. ಏಕೆಂದರೆ ಅದು ಅವನಿಗೆ ಸಂತೋಷವನ್ನುಂಟುಮಾಡುತ್ತದೆ. ಅಲ್ಲದೇ ಅಹಿತಕರ ಅನುಭವಗಳನ್ನುಂಟು ಮಾಡುತ್ತದೆ. ಇದು ಕೇವಲ ತಾತ್ಕಾಲಿಕ ಅನುಭವ ಮಾತ್ರವಾಗಿದ್ದು, ಸಮಯ ಕಳೆದಂತೆ ಇವುಗಳ ಉಪಯೋಗ ಚಟಕ್ಕೆ ತಿರುಗಿಬಿಡುತ್ತದೆ. ಆದರೆ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿರುವ ವ್ಯಕ್ತಿಗೆ ಇದರ ಅರಿವಿರುವುದಿಲ್ಲ. ಆದ್ದರಿಂದ ಈ ಪರಿವರ್ತನೆಯ ಕೆಲವು ಸೂಚನೆಗಳನ್ನು ಮೊದಲೇ ಅರಿತುಕೊಂಡಲ್ಲಿ ಯಾವುದೇ ಒಬ್ಬ ವ್ಯಕ್ತಿ ಮಾದಕ ವಸ್ತುಗಳ ದಾಸನಾಗುವುದನ್ನು ತಡೆಗಟ್ಟಬಹುದಾಗಿದೆ ಎಂದರು.

ನಗರಸಭಾ ಮೈದಾನದಿಂದ ಬೆಳಗ್ಗೆ ೬ ಗಂಟೆಗೆ ಪ್ರಾರಂಭವಾದ ಮ್ಯಾರಥಾನ್‌ನಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕೆಜಿಎಫ್ ರೋಟರಿ ಕ್ಲಬ್ ಅಧ್ಯಕ್ಷ ಡಾ.ಕೆ.ಬಾಬು ನೇತೃತ್ವದಲ್ಲಿ ಮ್ಯಾರಥಾನ್ ಕಾರ‍್ಯಕ್ರಮ ಯಶಸ್ವಿಯಾಗಿ ನಡೆಯಿತು. ಖ್ಯಾತ ಹೃದಯತಜ್ಞ ಡಾ.ರಾಜೇಂದ್ರ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ, ಚಲನಚಿತ್ರ ನಟಿ, ರಾಧಿಕ, ದಿವ್ಯಾ, ಎಸ್‌ಬಿಐ ವ್ಯವಸ್ಥಾಪಕ ಮೋಹನ್‌ಸಿಂಗ್, ವೃತ್ತ ನಿರೀಕ್ಷಕರಾದ ಸೋಮಶೇಖರ್, ಮಾರ್ಕಂಡಯ್ಯ, ರಂಗಶಾಮಯ್ಯ, ನವೀನ್‌ರೆಡ್ಡಿ ಡಾ.ವಿಕ್ರಮ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ಅನುಷ್ಠಾನ ತಡೆಯಲು ಹೊರಟಿರುವ ಸರಕಾರದ ನಡೆ ಸರಿಯಲ್ಲ
ಇಂದು ಸರ್ವಧರ್ಮ ಸಮ್ಮೇಳನ-ತೆಪ್ಪೋತ್ಸವ, ನಾಳೆ ಮಹಾರಥೋತ್ಸವ