ಮಕ್ಕಳು ಮೊಬೈಲ್, ಟಿ.ವಿ.ಗಳಿಂದ ದೂರವಿದ್ದು ಬೇಸಿಗೆ ಬೆಸುಗೆಯಲ್ಲಿ ಭಾಗಿ: ನವೀನ್ ಕುಮಾರ್

KannadaprabhaNewsNetwork |  
Published : Jun 07, 2026, 01:30 AM IST
ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಬೇಸಿಗೆ ಬೆಸುಗೆ ಶಿಬಿರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರಈ ಬೇಸಿಗೆಯಲ್ಲಿ ಹೆಚ್ಚಿನ ಮಕ್ಕಳು ಮೊಬೈಲ್, ಟಿ.ವಿ.ಗಳಿಂದ ದೂರವಿದ್ದು ಬೇಸಿಗೆ ಬೆಸುಗೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಂದು ತಾ.ಪಂ. ಇಓ ಎಚ್.ಡಿ.ನವೀನ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಅಭಿನಂದಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಈ ಬೇಸಿಗೆಯಲ್ಲಿ ಹೆಚ್ಚಿನ ಮಕ್ಕಳು ಮೊಬೈಲ್, ಟಿ.ವಿ.ಗಳಿಂದ ದೂರವಿದ್ದು ಬೇಸಿಗೆ ಬೆಸುಗೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಂದು ತಾ.ಪಂ. ಇಓ ಎಚ್.ಡಿ.ನವೀನ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ಬೇಸಿಗೆ ಬೆಸುಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಗ್ರಾಪಂಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಪನೆಯಂತೆ ಬೇಸಿಗೆ ಬೆಸುಗೆ ಶಿಬಿರ ಅತ್ಯಂತ ಯಶಸ್ಸಿಯಾಗಿದೆ. ಶಿಬಿರ ಗ್ರಾಮೀಣ ಭಾಗದ ಮಕ್ಕಳಿಗೆ ತುಂಬಾ ಅನುಕೂಲ. ಈ ಬಾರಿ ಅತ್ಯಂತ ಯಶಸ್ವಿಯಾಗಿ ಬೇಸಿಗೆ ಬೆಸುಗೆ ಶಿಬಿರ ಆಯೋಜಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಜಿ.ಪಂಚಾಯಿತಿಯ ಮಾನದಂಡಗಳ ಆಧಾರದ ಮೇಲೆ ನೀಡಲಾಗಿದೆ.

ಈ ಬಾರಿ ಮೂರು ಸ್ಥಾನ ಪಡೆದ ಗ್ರಾ.ಪಂಗಳು ಶಿಬಿರದಲ್ಲಿ ಆಯೋಜಿಸಿದ್ದ ವಿಶೇಷ ಚಟುವಟಿಕೆಗಳ ಸಂಪೂರ್ಣ ಛಾಯಾ ಚಿತ್ರ, ವೀಡಿಯೋಗಳನ್ನು ಜಿಲ್ಲಾ ಮಟ್ಟಕ್ಕೆ ಸಲ್ಲಿಸಲಾಗುವುದು. ಗ್ರಾ.ಪಂ. ಪಿಡಿಓ, ಗ್ರಂಥಾಲಯಗಳ ಮೇಲ್ವಿಚಾರಕರ ಸಹಕಾರದಿಂದ ಈ ಬಾರಿ ಶಿಬಿರ ಅತ್ಯಂತ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಶಿಬಿರ ಆಯೋಜಿಸಲಾಗುವುದೆಂದರು. ಇದೇ ಸಂದರ್ಭದಲ್ಲಿ ಬೇಸಿಗೆ ಬೆಸುಗೆ ಶಿಬಿರ ಅತ್ಯುತ್ತಮವಾಗಿ ಆಯೋಜಿಸಿದ್ದ ಕರ್ಕೇಶ್ವರ ಗ್ರಾಪಂ ಪ್ರಥಮ ಸ್ಥಾನ, ಬಿ.ಕಣಬೂರು ತೃತೀಯ ಸ್ಥಾನ ಹಾಗೂ ಆಡುವಳ್ಳಿ ಗ್ರಾ.ಪಂ. ತೃತೀಯ ಸ್ಥಾನ ಪಡೆದವು. ಮೂರು ಗ್ರಾ.ಪಂ.ಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಉಳಿದ ಗ್ರಾ.ಪಂ.ಗಳಿಗೂ ಕೂಡ ಪ್ರಶಂಸನಾ ಪತ್ರ ವಿತರಿಸ ಲಾಯಿತು. ವಿವಿಧ ಗ್ರಾ.ಪಂ.ಗಳ ಪಿಡಿಓ ಹಾಗೂ ಗ್ರಂಥಾಲಯದ ಮೇಲ್ವಿಚಾರಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಾಲೂಕು ಯೋಜನಾ ಅಧಿಕಾರಿ ಯಾಧವರಾಜ್, ಸಹಾಯಕ ನಿರ್ದೇಶಕರಾದ ಎನ್.ಎಲ್.ಮನೀಶ, ಮಂಜುಳ, ತಾಲೂಕಿನ ಎಲ್ಲಾ ಗ್ರಾ.ಪಂಚಾಯ್ತಿ ಪಿಡಿಒ ಹಾಗೂ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ: ಮಹೇಶ್ ಕುಮಾರ್
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು