ವಿಯಟ್ನಾಂ ದೇಶದಲ್ಲಿ ಜರುಗಿದ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಂಡ್ಯದ ಮಿಮ್ಸ್‌ನ ಮುಖ್ಯ ಗ್ರಂಥಪಾಲಕ ಡಾ.ಕೆ.ಅನಂತನಾಗ್ ಅವರಿಗೆ ಪ್ರತಿಷ್ಠಿತ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಯಟ್ನಾಂ ದೇಶದಲ್ಲಿ ಜರುಗಿದ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಂಡ್ಯದ ಮಿಮ್ಸ್‌ನ ಮುಖ್ಯ ಗ್ರಂಥಪಾಲಕ ಡಾ.ಕೆ.ಅನಂತನಾಗ್ ಅವರಿಗೆ ಪ್ರತಿಷ್ಠಿತ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಗರದ ಕೃಷ್ಣೇಗೌಡ ಹಾಗೂ ನೀಲಮ್ಮ ದಂಪತಿಯ ಸುಪುತ್ರ ಡಾ.ಕೆ.ಅನಂತನಾಗ್‌ರವರು ಸುಮಾರು 20 ವರ್ಷಗಳಿಂದ ಮಿಮ್ಸ್ ಸಂಸ್ಥೆಯಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಚಾರದಲ್ಲಿ ತೊಡಗಿಸಿಕೊಳ್ಳದೆ ಆನೇಕ ವಿದ್ಯಾರ್ಥಿಗಳಿಗೆ ಅವರ ಅಭ್ಯಾಸಕ್ಕೆ ಅವಶ್ಯಕವಾಗಿರುವ ಪುಸ್ತಕ ಸಾಮಗ್ರಿಗಳನ್ನು ಹಾಗೂ ಹಲವಾರು ಬಡ ವಿದ್ಯಾರ್ಥಿಗಳ ವ್ಯಾಸಂಗ ಶುಲ್ಕಗಳನ್ನು ತಮ್ಮ ಕೈಲಾದಷ್ಟು ಸಹಾಯ ಮಾಡುವಲ್ಲಿ ಸಮಾಜಮುಖಿ ಕೆಲಸಗಳ ತೊಡಗಿಕೊಂಡಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಇವರ ಸಾದನೆಗೆ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಇಂಡೋ-ವಿಯಟ್ನಾಂ ದೇಶದಲ್ಲಿ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಹಿಂದೆ ಮಿಮ್ಸ್ ಸಂಸ್ಥೆಯಲ್ಲಿ 2026 ಫೆಬ್ರವರಿ ತಿಂಗಳಿನಲ್ಲಿ ಅತಿ ವಿಜೃಂಭಣೆಯಿಂದ ರಾಷ್ಟ್ರಮಟ್ಟದ ಗ್ರಂಥಪಾಲಕರ ಸಮ್ಮೇಳನವನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂಬುದು ಗಮನಾರ್ಹ.
ಡಾ.ಕೆ.ಅನಂತನಾಗ್ ರವರಿಗೆ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ ಚಿಕ್ಕರಸಿನಕೆರೆ ಅಭಿನಂದಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಯಟ್ನಾಂ ದೇಶದ ರಾಯಭಾರಿ ಹಾಗೂ ಐಪಿಎಸ್ ಅಧಿಕಾರಿ ಪ್ರದೀಪ್ ಕುಮಾರ್. ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ಶ್ರೀ ಶಾಂತವೀರ ಗುರು ಮುರುಗರಾಜೇಂದ್ರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಸಾವಯಂಗ ಮಠ, ಶರಣ ಚಿಂತಕ ವಿಶ್ವರಾಧ್ಯ ಸತ್ಯಂ ಪೇಟೆ, ಉದ್ಯಮಿ ದಿನೇಶ್‌ಕುಮಾರ್ ಜೈನ್, ಸಮಾಜ ಸೇವಕ ಅಜೀತ್ ಅಹಮದ್ ಸೇನಾ, ಟಿ.ಸಿ.ಎಸ್, ಸುರೇಶ್ ಇತರರು ಉಪಸ್ಥಿರರಿದ್ದರು.ಡಾ.ಶಿವಕುಮಾರ ಸ್ವಾಮೀಜಿ ಸಂಘದಿಂದ ನಿವೃತ್ತ ಶಿಕ್ಷಕನಿಗೆ ಸನ್ಮಾನ
ಹಲಗೂರು:ಕರಲಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೆ.ಸಿ.ಮಹೇಶ್ ಅವರಿಗೆ ಭಿಕ್ಷದ ಮಠದಲ್ಲಿ ನಡೆದಾಡುವ ದೇವರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಂಘದಿಂದ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಕುಮಾರ್ ಅವರು ನಿವೃತ್ತಿ ಶಿಕ್ಷಕ ಕೆ.ಸಿ.ಮಹೇಶ್ ಅವರಿಗೆ ಶಾಲುಹೊದಿಸಿ ಮೈಸೂರು ಪೇಟ ತೊಡಿಸಿ ಗಂಧದ ಹಾರ ಹಾಕಿ ಶಿವಕುಮಾರ್ ಶ್ರೀಗಳ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಿದರು.ನಂತರ ಮಾತನಾಡಿ, ಸಂಘ ಪ್ರಾರಂಭವಾಗಿ 7 ವರ್ಷವಾಗಿದೆ. ನಮ್ಮ ಸಂಘದ ಸದಸ್ಯರು ನಿವೃತ್ತ ಶಿಕ್ಷಕರನ್ನು ಅಭಿನಂದಿಸಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತಿ ಶಿಕ್ಷಕ ಕೆ.ಸಿ.ಮಹೇಶ್ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ 28 ವರ್ಷಗಳ ಕಾಲ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ನಂತರ ಕರಲಕಟ್ಟೆ ಗ್ರಾಮದಲ್ಲಿ ನಿವೃತ್ತಿ ಹೊಂದಿರುತ್ತೇನೆ. ಇದುವರೆಗಿನ ಸೇವೆ ನನಗೆ ತೃಪ್ತಿ ತಂದಿದೆ. ಸನ್ಮಾನಿಸಿದ ಸಂಘದ ಸದಸ್ಯರಿಗೆ ಋಣಿಯಾಗಿರುತ್ತೇನೆ ಎಂದರು.ಈ ವೇಳೆ ಕುಮಾರ, ನಂಜುಂಡಸ್ವಾಮಿ, ಅಡ್ಡೆ ಪ್ರಕಾಶ, ಎಚ್.ಎಂ.ಮಹೇಶ, ಶೆಟ್ರು ನಾಗೇಂದ್ರ, ಕೆ.ಎನ್.ನಾಗೇಂದ್ರ, ಮಹೇಶ್ ಪ್ರಭು, ರಾಜೇಂದ್ರ, ಕೆ.ಎಸ್.ಮಂಜುನಾಥ, ಮಹದೇವ ಪ್ರಸಾದ್ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.