ಕುಕನೂರು: ಮಕ್ಕಳು ಮುಗ್ಧತೆ ಪ್ರತಿರೂಪ ಎಂದು ಮುಖ್ಯ ಶಿಕ್ಷಕ ಬಾಷುಸಾಬ್ ಬಲ್ಲೂಂಚಿ ಹೇಳಿದರು.
ಶಿಕ್ಷಕ ಕಲ್ಲಪ್ಪ ಗಡಾದ ಮಾತನಾಡಿ, ಪಾಲಕ ಪೋಷಕರ ಕರ್ತವ್ಯಗಳನ್ನು ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಹೇಳಿದರು.
ಶಿಕ್ಷಕ ಬಸವರಾಜ ಮೇಟಿ ಹಾಗೂ ಶರಣಪ್ಪ ವೀರಾಪುರ ಅವರು, ಶಾಲೆಯಲ್ಲಿ ತರಗತಿ ಬೋಧನೆ ಆಟೋಟಗಳು ಪ್ರತಿಭಾ ಕಾರಂಜಿ, ವಿಜ್ಞಾನ ವಸ್ತು ಪ್ರದರ್ಶನ, ಪರಿಸರ ದಿನಾಚರಣೆ, ಸಂವಿಧಾನ ಪೀಠಿಕೆ ಓದುವುದು, ಘಟಕ ಪರೀಕ್ಷೆ, ಎಲ್,ಬಿ,ಎ ಹಾಗೂ ಇತರೆ ಪರೀಕ್ಷೆಗಳ ಬಗ್ಗೆ ತಿಳಿಸಿದರು.ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯ,ಗ್ರಾಪಂ ಸದಸ್ಯರು ಮತ್ತು ಊರಿನ ನಾಗರಿಕರನ್ನು ವಿದ್ಯಾರ್ಥಿಗಳು ಪುಷ್ಪಾರ್ಪಣೆ ಮಾಡುವ ಮೂಲಕ ಕರೆ ತರಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮವ್ವ ಮ್ಯಾಗಳಕೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಹೊನ್ನೂರಲಿ ಸ್ವಾಗತಿಸಿದರು. ಶಿಕ್ಷಕ ರೇವಣಸಿದ್ದಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸಂವಿಧಾನ ಪೀಠಿಕೆ ವಿದ್ಯಾರ್ಥಿನಿ ಯಶೋಧಾ ಬಡಿಗೇರ ಬೋಧಿಸಿದರು ಹಾಗೂ ಶಿಕ್ಷಕರ ವರ್ಗ, ಪಾಲಕರು, ಹಿರಿಯರು ಇದ್ದರು. ಕೆ,ಎಸ್,ಇ,ಎ,ಬಿ ಮಂಡಳಿಯ ನಿರ್ದೇಶಕರ 10 ನೇ ತರಗತಿಗೆ ಸಂಬಂಧಿಸಿದ ವಿಡಿಯೋ ತೋರಿಸಲಾಯಿತು.