ಮಕ್ಕಳು ದೇಶದ ಭವಿಷ್ಯದ ನಿರ್ಮಾತೃಗಳು

KannadaprabhaNewsNetwork |  
Published : Apr 06, 2026, 02:30 AM IST
ಪೋಟೊ5ಕೆಎಸಟಿ3: ಕುಷ್ಟಗಿ ಪಟ್ಟಣದ ಮಾಸ್ಟರ್ ಮೈಂಡ್ ಕಿಡ್ಸ್ ಶಾಲೆಯಲ್ಲಿ ನಡೆದ ನನ್ನ ಕನ್ನಡ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಚಾಲನೆ ನೀಡಿ ಮಾತನಾಡಿದರು | Kannada Prabha

ಸಾರಾಂಶ

ನನ್ನ ಕನ್ನಡ ಪುಸ್ತಕ ಮಕ್ಕಳಿಗಾಗಿ ರಚನೆ ಮಾಡಲಾಗಿದ್ದು, ಕನ್ನಡ ಭಾಷೆ ಸರಳವಾಗಿ ಕಲಿಯಲು ಸಹಕಾರಿಯಾಗಲಿದೆ

ಕುಷ್ಟಗಿ: ಇಂದಿನ ಮಕ್ಕಳು ನಾಳಿನ ಪ್ರಜೆ ಹಾಗೂ ದೇಶದ ಭವಿಷ್ಯದ ನಿರ್ಮಾತೃಗಳು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.

ಪಟ್ಟಣದ ಮಾಸ್ಟರ್ ಮೈಂಡ್ ಕಿಡ್ಸ್ ಶಾಲೆಯಲ್ಲಿ ನಡೆದ ಅಕ್ಷರಯಾಗ ಹಾಗೂ ನನ್ನ ಕನ್ನಡ ಪುಸ್ತಕ ಬಿಡುಗಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನನ್ನ ಕನ್ನಡ ಪುಸ್ತಕ ಮಕ್ಕಳಿಗಾಗಿ ರಚನೆ ಮಾಡಲಾಗಿದ್ದು, ಕನ್ನಡ ಭಾಷೆ ಸರಳವಾಗಿ ಕಲಿಯಲು ಸಹಕಾರಿಯಾಗಲಿದೆ ಎಲ್ಲರು ಈ ನನ್ನ ಕನ್ನಡ ಪುಸ್ತಕ ಮಕ್ಕಳಿಗಾಗಿ ಮೀಸಲಿಟ್ಟು ಓದುವದನ್ನು ಕಲಿಸಲು ಮುಂದಾಗಬೇಕು ಎಂದರು.

ಸಾಹಿತಿ ಅಮರೇಗೌಡ ಪಾಟೀಲ್ ಜಾಲಿಹಾಳ ಮಾತನಾಡಿ, ಮಕ್ಕಳಿಗೆ ಕಲಿಕೆಯಲ್ಲಿ ಒತ್ತಡ ಹೇರಬಾರದು ಎಂದು ಮಕ್ಕಳು ಜೀವಗಳು ವಸ್ತುಗಳಲ್ಲ ಎಂದರು.

ಮೊಬೈಲ್ ಮಕ್ಕಳ ಓದುಬರಹದ ಕಲೆ ಹಾಳು ಮಾಡುತ್ತಿರುವುದು ಅತ್ಯಂತ ವಿಷಾದಕರವಾಗಿದ್ದು, ತಾಯಂದಿರು ಮಕ್ಕಳು ಹಠ ಮಾಡಿದಾಗ ಲಾಲಿ ಹಾಡು ಹೇಳುವುದನ್ನು ಬಿಟ್ಟು ಮೊಬೈಲ್ ನೀಡುತ್ತಿರುವುದು ದುರಂತವೇ ಸರಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಅಪ್ಪಾಜಿ ಯಲಬುರ್ಗಾ ವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ಶಶಿಧರ ಮುದೇನೂರು, ರಾಜು ಪಾಟೀಲ್, ನಿವೃತ್ತ ಶಿಕ್ಷಕ ಮಲ್ಲಪ್ಪ ಬ್ಯಾಳಿ, ಸಿವಿ ಪಾಟೀಲ್, ಚುಸಾಪ ಅಧ್ಯಕ್ಷ ಮಹೇಶ್ ಜಿ.ಎಚ್, ಸಂಸ್ಥೆಯ ಅಧ್ಯಕ್ಷ ಸಾಗರ್ ಪಾಟೀಲ್, ಸಂಗಮೇಶ್ವರ ಸ್ವಾದಿಮಠ ಸೇರಿದಂತೆ ಶಿಕ್ಷಕರು ಶಿಕ್ಷಕಿಯರು ಹಾಗೂ ಪಾಲಕರು ಮಕ್ಕಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಪನಹಳ್ಳಿ ಹಿರೇಕೆರೆ ಅಭಿವೃದ್ಧಿಗೆ ₹3 ಕೋಟಿ ಅನುದಾನ ಮಂಜೂರು: ಶಾಸಕಿ ಎಂ.ಪಿ.ಲತಾ
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ ರಾಂ: ಶಾಸಕ ಕೃಷ್ಣನಾಯ್ಕ