ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿದರೆ ಆರೋಗ್ಯವಾಗಿರಲು ಸಾಧ್ಯ

KannadaprabhaNewsNetwork | Published : Jan 18, 2025 12:46 AM

ಸಾರಾಂಶ

ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ. ಪೌಷ್ಟಿಕ ಆಹಾರ ತಯಾರಿಸಿ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಸಮಾಜದಲ್ಲಿ ಸತ್ಪ್ರಜೆಯಾಗಿ ದೇಶದ ಆಸ್ತಿಯಾಗುತ್ತಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಪಾಲಾಕ್ಷ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ ಅಭಿಮತ

ಕನ್ನಡಪ್ರಭ ವಾರ್ತೆ ಹಳೇಬೀಡು

ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ. ಪೌಷ್ಟಿಕ ಆಹಾರ ತಯಾರಿಸಿ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಸಮಾಜದಲ್ಲಿ ಸತ್ಪ್ರಜೆಯಾಗಿ ದೇಶದ ಆಸ್ತಿಯಾಗುತ್ತಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಪಾಲಾಕ್ಷ ತಿಳಿಸಿದರು.

ಇಲ್ಲಿನ ಕೆಪಿಎಸ್ ಶಾಲೆಯ ಆವರಣದಲ್ಲಿ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿಯ ಅಡುಗೆ ಸಿಬ್ಬಂದಿಗಳ ಒಂದು ದಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹಳೇಬೀಡು ಹೋಬಳಿಯಲ್ಲಿ ನರಸೀಪುರ ಮಾಯಗೊಂಡಹಳ್ಳಿ ಹಾಗೂ ಇನ್ನು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಅಡುಗೆಯ ಸಿಬ್ಬಂದಿಗಳು ದೊರೆಯದೆ ಕಷ್ಟಕರವಾಗಿದ್ದ ಸಂದರ್ಭದಲ್ಲಿ ನಾವು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಸ್ಥಳೀಯ ಮಹಿಳೆಯರನ್ನು ಮನವೊಲಿಸಿ ಅಡುಗೆಯ ಸಿಬ್ಬಂದಿ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಅವರಿಗೆ ಒಳ್ಳೆಯ ವೇತನವನ್ನು ನೀಡಬೇಕು ಎಂದರು. ಸರ್ಕಾರಿ ಶಾಲೆಯಲ್ಲಿ ಹೆಚ್ಚು ಮಕ್ಕಳು ಬರುತ್ತಿರುವುದು ಹಾಗೂ ಪೌಷ್ಟಿಕಾಂಶ ಜೊತೆಗೆ ಮೊಟ್ಟೆ ಸಿಪ್ಪೆ ಸುಲಿಯುವ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ ಹೆಚ್ಚಿನ ವೇತನ ನೀಡಬೇಕು ಎಂದರು.

ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಮುಳ್ಳಯ್ಯ ಮಾತನಾಡಿ, ಹಳೇಬೀಡು ಹೈಸ್ಕೂಲು ಮತ್ತು ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೧೫೦೦ ಮಕ್ಕಳು ಇದ್ದಾರೆ. ಅವರು ಸಹ ನಿಮ್ಮ ವೇತನಕ್ಕೆ ಸಹ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವೊಂದು ಶಾಲೆಯಲ್ಲಿ ೧೦ ಮಕ್ಕಳು ಸಹ ಅದೇ ವೇತನ ಇದೆ. ಇಲ್ಲಿ ಸಾವಿರ ಮಕ್ಕಳು ಅದೇ ವೇತನವಿದೆ ಇದರ ಬಗ್ಗೆ ಸರ್ಕಾರಗಳು ತಕ್ಷಣವೇ ಗಮನವಹಿಸಿ ಸಿಬ್ಬಂದಿಗಳಿಗೆ ಹೆಚ್ಚಿನ ವೇತನ ನೀಡಬೇಕು ಎಂದರು.

ದಾಸೋಹ ಅಧಿಕಾರಿ ಧನಂಜಯ ಮಾತನಾಡಿ, ಇಲ್ಲಿಯವರೆಗೂ ಕೆಲಸ ಮಾಡಿದ ಮಹಿಳ ಸಿಬ್ಬಂದಿಗಳಿಗೆ ೬೦ ವರ್ಷಕ್ಕೆ ನಿವೃತ್ತಿ ಸಮಯದಲ್ಲಿ ₹೩೦ ಸಾವಿರದಿಂದ ₹೪೦ಸಾವಿರ ನೀಡುತ್ತೇವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಪಿಡಿಒ ವಿರೂಪಾಕ್ಷ, ಬಿ.ಆರ್.ಪಿ. ಜಗದೀಶ್, ಕ್ರೀಡಾಧಿಕಾರಿ ಜಗದೀಶ್, ಮುಖ್ಯ ಶಿಕಕ್ಷ ನಾಗರಾಜು ಹಾಗೂ ಸಿ.ಆರ್.ಪಿ ಸೋಮಶೇಖರ್ ಹಾಜರಿದ್ದರು.

Share this article