ಚಳ್ಳಕೆರೆ: ನಗರದ ಬಸವೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೃಷ್ಣ ಮತ್ತು ರಾಧೆಯ ವೇಷಭೂಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ವಿ.ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಎಲ್ಲಾ ಮಕ್ಕಳು ಲವಲವಿಕೆಯಿಂದ ಭಾಗವಹಿಸಿದ್ಧಾರೆ. ಎಲ್ಲರಲ್ಲೂ ಹೆಚ್ಚು ಉತ್ಸಾಹವಿರುವುದು ಕಂಡು ಬಂದಿದೆ ಎಂದರು.
ವೀರಶೈವ ವಿದ್ಯಾನಿಲಯದ ಅಧ್ಯಕ್ಷ ಸತೀಶ್‌ಬಾಬು, ಕಾರ್ಯದರ್ಶಿ ಎನ್.ಟಿ.ಪ್ರಕಾಶ್, ನಿರ್ದೇಶಕಿ ಮಂಜುಳಾ ನಾಗರಾಜ್, ಶಿಲ್ಪಪ್ರಕಾಶ್, ಲೋಕಮಾನ್ಯ, ವನಜಾಕ್ಷಿ, ಸುಲೋಚನಾ, ಮುಖ್ಯಶಿಕ್ಷಕಿ ಮಧುರ, ಬಿ.ಶ್ರೀನಿವಾಸ್, ಶಿಕ್ಷಕರಾದ ಭಾರತಾಂಭೆ, ಸಿಂಧುಜಾ, ಯಶೋಧಮ್ಮ, ಗೀತಾ, ಜ್ಯೋತಿ, ತಿಪ್ಪೇಸ್ವಾಮಿ, ಗಂಡಯ್ಯ, ನಿಖಿಲ್, ವಿಜಯಲಕ್ಷ್ಮಿ ಮುಂತಾದವರು ಹಾಜರಿದ್ದರು.