ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು

KannadaprabhaNewsNetwork |  
Published : Nov 21, 2026, 01:15 AM IST
9999 | Kannada Prabha

ಸಾರಾಂಶ

ನಗರ ಪ್ರದೇಶಗಳ ಮಕ್ಕಳಿಗೆ ಹೋಲಿಸಿದರೆ, ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು, ಆತ್ಮವಿಶ್ವಾಸ ಉಳ್ಳವರು.ಇಂಗ್ಲೀಷ್ ಬರಲ್ಲ, ಇನ್ನಿತರ ಅಡೆ, ತಡೆಗಳನ್ನು ಮೆಟ್ಟಿ ನಿಂತರೇ, ಸಾಧನೆಯ ಶಿಖರ ನಿಮ್ಮದಾಗಲಿದೆ ಎಂದು ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರುಳೀಧರ ಹಾಲಪ್ಪ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುನಗರ ಪ್ರದೇಶಗಳ ಮಕ್ಕಳಿಗೆ ಹೋಲಿಸಿದರೆ, ಹಳ್ಳಿಗಾಡಿನ ಮಕ್ಕಳು ಅತ್ಯಂತ ಧೈರ್ಯ ಶಾಲಿಗಳು, ಆತ್ಮವಿಶ್ವಾಸ ಉಳ್ಳವರು.ಇಂಗ್ಲೀಷ್ ಬರಲ್ಲ, ಇನ್ನಿತರ ಅಡೆ, ತಡೆಗಳನ್ನು ಮೆಟ್ಟಿ ನಿಂತರೇ, ಸಾಧನೆಯ ಶಿಖರ ನಿಮ್ಮದಾಗಲಿದೆ ಎಂದು ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರುಳೀಧರ ಹಾಲಪ್ಪ ಪ್ರತಿಪಾದಿಸಿದರು. ನಗರದ ತುಮಕೂರು ವಿವಿ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿ ಐಕ್ಯೂಎಸಿ ಘಟಕ,ಎಲ್ಲಾ ಪದವಿ ಕಾಲೇಜುಗಳ ಸಹಕಾರದೊಂದಿಗೆ,ಹಾಲಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಕೈಪಿಡಿ ಬಿಡುಗಡೆ ಮಾಡಿ, ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದು ವೃತ್ತಿ ನಿರತ ಐಎಎಸ್,ಐಪಿಎಸ್, ಕೆ.ಎ.ಎಸ್ ಅಧಿಕಾರಿಗಳಲ್ಲಿ ಬಹುತೇಕರು ಗ್ರಾಮೀಣ ಹಿನ್ನೆಲೆಯಿಂದ, ಕನ್ನಡ ಮಾಧ್ಯಮದಿಂದ ಬಂದವರು.ಇದನ್ನುಅರ್ಥಮಾಡಿಕೊಂಡು, ಅಡೆ, ತಡೆಗಳನ್ನು ಮೆಟ್ಟಿನಿಲ್ಲುವ ಮೂಲಕ ನಿಮ್ಮ ಪೋಷಕರ ಮಹಾದಾಸೆಯನ್ನು ಈಡೇರಿಸಲು ಮುಂದಾಗಿ ಎಂದರು.ನಾನು ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನಡೆದ ಬಹುತೇಕ ಉದ್ಯೋಗ ಮೇಳಗಳಿಗೆ ಸಾವಿರಾರು ಜನ ಪದವಿಧರರು ಬರುತ್ತಿದ್ದರು, ಆದರೆ ಆಯ್ಕೆಯಾಗುತಿದ್ದವರ ಸಂಖ್ಯೆ ತೀರ ಕಡಿಮೆ.ಇದಕ್ಕೆ ಪ್ರಮುಖ ಕಾರಣ. ಕಮ್ಯುನಿಕೇಷನ್ ಸ್ಕಿಲ್, ಪ್ರಜೆಂಟೇಷನ್‌ನ ಕೊರತೆ.ವಿಷಯದ ಬಗ್ಗೆ ತಿಳುವಳಿಕೆಯಿದ್ದರೂ ಅದನ್ನು ನಾಲ್ವರ ಮುಂದೆ ಧೈರ್ಯವಾಗಿ ಹೇಳುವಲ್ಲಿ ಇರುವ ಭಾಷೆಯ ಹಿಂಜರಿಕೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ,ಪರೀಕ್ಷೆ ವಿಧಾನ ಇವುಗಳ ಬಗ್ಗೆ ತಿಳುವಳಿಕೆಯನ್ನು ಈಗಾಗಲೇ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿರುವ ನುರಿತ ಮಾರ್ಗದರ್ಶಕರಿಂದ ಮನದಟ್ಟು ಮಾಡಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದು ಮುರುಳೀಧರ ಹಾಲಪ್ಪ ನುಡಿದರು.ತುಮಕೂರು ವಿವಿ ಐಕ್ಯೂಎಸಿ ನಿರ್ದೇಶಕ, ಕಲಾ ನಿಕಾಯದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಜಿ.ಪರುಶುರಾಮ್ ಪ್ರಸ್ತಾವಿಕ ನುಡಿಗಳನ್ನಾಡಿ,ನಮ್ಮ ವಿವಿಯಲ್ಲಿ 95 ಪದವಿ ಕಾಲೇಜುಗಳಿಂದ ವರ್ಷಕ್ಕೆ 11 ಸಾವಿರಜನ ಪಾಸಾಗಿ ಹೊರಬರುತ್ತಾರೆ. ಇವರಲ್ಲಿ 2 ಸಾವಿರ ಜನರಿಗೆ ಮಾತ್ರ ಸ್ನಾತಕೋತ್ತರ ಕೋರ್ಸುಗಳಿಗೆ ಅವಕಾಶ ದೊರೆಯುತ್ತದೆ.ಹಾಗೆಯೇ ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 4.50 ಕೋಟಿ ಪದವಿಧರರ ಹೊರಬರುತ್ತಾರೆ. ಇವರಲ್ಲಿ ಉದ್ಯೋಗ ಪಡೆಯುವವರ ಸಂಖ್ಯೆ ಶೇ೨೦ಕ್ಕಿಂತಲೂ ಕಡಿಮೆ.ಸರಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಇನ್ನೂಕಡಿಮೆ ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ .ಉಪೇಂದ್ರ ಶೆಟ್ಟಿ, ಕೃಷಿಕ ಸರ್ವೋದಯ ಫೌಂಡೇಷನ್‌ನ ಗೋಪಾಲಕೃಷ್ಣ ಮೂರ್ತಿ, ಇನ್‌ಸೈಟ್‌ನ ತೇಜಸ್, ಭಾರತೀಯಇತಿಹಾಸಕುರಿತು ಶರಣ್ಯ ಬಂಡಾರಿ ಮಠ, ನೆಲ್ನುಡಿ ಪತ್ರಿಕೆಯ ಸಂಪಾದಕ ಪ್ರಸನ್ನ ಅವರು ಯುಪಿಎಸ್‌ಸಿ, ಕೆ.ಎ.ಎಸ್, ಎಫ್.ಡಿ.ಎ, ಎಸ್.ಡಿ.ಎ, ಕೆ.ಇ.ಎ, ಎಸ್.ಎಸ್.ಸಿ ಮತ್ತುಆರ್.ಆರ್.ಬಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವುದು, ಪಠ್ಯಕ್ರಮ, ಪರೀಕ್ಷಾ ವಿಧಾನ,ಸಂದರ್ಶನ ಹೇಗೆ ಎಂಬ ಮಾಹಿತಿ ನೀಡಿದರಲ್ಲದೆ, ಸಂವಾದದಲ್ಲಿ ಪಾಲ್ಗೊಂಡು ಸ್ಪರ್ಧಾಕಾಂಕ್ಷಿಗಳ ಪ್ರಶ್ನೆಗಳಿಗೆ ಉತ್ತರಿಸಿ,ಹುರಿದುಂಬಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ