ಕನ್ನಡಪ್ರಭ ವಾರ್ತೆ ವಿಜಯಪುರ
ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮೋಳಗಿರುವ ಪ್ರತಿಭೆಯನ್ನು ಹೊರ ಹಾಕದೆ ತಮ್ಮ ಅಮೂಲ್ಯ ಸಮಯವನ್ನು ಫೆಸ್ಬುಕ್, ವಾಟ್ಸಪ್ ನಂತಹ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿರುವುದು ನೋವಿನ ಸಂಗತಿ ಎಂದರು.
ಪಾಲಕರು ತಮ್ಮ ಮಕ್ಕಳನ್ನು ಇಂತಹ ಭರತನಾಟ್ಯದಂತಹ ಕಲೆಗಳಲ್ಲಿ ತೊಡಗಿಸುವ ಕಾರ್ಯ ಮಾಡಬೇಕಿದೆ. ಮಕ್ಕಳು ಕೂಡಾ ತಂದೆ ತಾಯಿಗಳ ಅಮೂಲ್ಯ ಸಮಯದ ಜೊತೆಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಬತ್ತಿಗೊತ್ತಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಕ್ಕೆ ಮಕ್ಕಳು ಸಹ ಗಮನದಲ್ಲಿ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದರು.ಸಮಾಜ ಸೇವಕಿ ಮದುಮತಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಾಧನೆ ಎಂಬುವುದು ತಪಸ್ಸಿದ್ದಂತೆ. ಹೀಗಾಗಿ ಮಕ್ಕಳು ಸಾಧನೆಯ ಲಕ್ಷ್ಯದಿಂದ ವಿಮುಖವಾಗಬಾರದು. ನಿಮ್ಮ ಗುರಿ ಸಾಧನೆಯತ್ತ ಇರಬೇಕು. ಸಾಧನೆ ಮಾಡಿ ಪ್ರತಿಯೊಬ್ಬರು ಹೆಮ್ಮೆಪಡುವಂತೆ ಮಾಡಿ ಸಾರ್ಥಕತೆಯ ಸಂತಸವನ್ನು ಅನುಭವಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಮಕ್ಕಳು ಸಹ ಭರತನಾಟ್ಯ ಕಲೆ ಪ್ರದರ್ಶನ ಮಾಡಿ ಗಮನ ಸೆಳೆದರು.
ಈ ವೇಳೆ ಮಂಜುಳಾ ಹಿಪ್ಪರಗಿ, ದತ್ತಾತ್ರೇಯ ಹಿಪ್ಪರಗಿ, ನಾಟ್ಯಕಲಾ ಅಕಾಡೆಮಿ ಅಧ್ಯಕ್ಷೆ ಲಕ್ಷ್ಮೀ ತೇರದಾಳಮಠ, ರಾಹುಲ್ ಕಾಖಂಡಕಿ, ಕರುಣಾ ಬಂಬುರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.