ಮಕ್ಕಳಿಗೆ ಗುರಗಳ ಮಾರ್ಗದರ್ಶನ ಅಗತ್ಯ: ಮಮತಾ

KannadaprabhaNewsNetwork |  
Published : Aug 21, 2025, 01:00 AM IST
20ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಬಿಡದಿ ಹೋಬಳಿ ಶ್ರೀ ಮಂಜುನಾಥ ಕನ್ವೆನ್ಸನ್ ಹಾಲ್ ನಲ್ಲಿ ಶ್ರೀ ಬಸವೇಶ್ವರಸ್ವಾಮಿ, ಶ್ರೀ ಭಾಗ್ಯಬೈರವೇಶ್ವರಸ್ವಾಮಿ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 20 ಶಿಕ್ಷಕರುಗಳಿಗೆ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಗುರುಗಳು ನೀಡಿದ ಶಿಕ್ಷಣ ಮತ್ತು ಮಾರ್ಗದರ್ಶನದಿಂದ ಸಮಾಜದಲ್ಲಿ ನಾವು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಬಿಎಂಟಿಸಿ ಘಟಕ ವ್ಯವಸ್ಥಾಪಕಿ ಮಮತಾ ಹೇಳಿದರು.

ರಾಮನಗರ: ಗುರುಗಳು ನೀಡಿದ ಶಿಕ್ಷಣ ಮತ್ತು ಮಾರ್ಗದರ್ಶನದಿಂದ ಸಮಾಜದಲ್ಲಿ ನಾವು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಬಿಎಂಟಿಸಿ ಘಟಕ ವ್ಯವಸ್ಥಾಪಕಿ ಮಮತಾ ಹೇಳಿದರು.

ತಾಲೂಕಿನ ಬಿಡದಿ ಹೋಬಳಿ ಶ್ರೀ ಮಂಜುನಾಥ ಕನ್ವೆನ್ಸನ್ ಹಾಲ್ ನಲ್ಲಿ ಶ್ರೀ ಬಸವೇಶ್ವರಸ್ವಾಮಿ, ಶ್ರೀ ಭಾಗ್ಯಬೈರವೇಶ್ವರಸ್ವಾಮಿ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 20 ಶಿಕ್ಷಕರಿಗೆ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ನಮಗೆ ಶಿಕ್ಷಣವನ್ನು ನೀಡಿ ನಮ್ಮೆಲ್ಲರಿಗೆ ಶಿಕ್ಷಕರು ದಾರಿ ದೀಪವಾಗಿದ್ದಾರೆ, ಅವರ ಮಾರ್ಗದರ್ಶನದಲ್ಲಿ ನಾನು ಸೇರಿದಂತೆ ಹಲವರು ಸರ್ಕಾರಿ ಉದ್ಯೋಗ ಪಡೆದಿದ್ದೇವೆ. ಮತ್ತಷ್ಟು ಸ್ನೇಹಿತರು ರಾಜಕೀಯವಾಗಿ ಸಮಾಜಮುಖಿ ಚಿಂತನೆಯೊಂದಿಗೆ ಮಾದರಿಯಾಗುವ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಗುರುಗಳು ಮತ್ತು ಪೋಷಕರ ಆಶೀರ್ವಾದವೇ ಕಾರಣ ಎಂದು ತಿಳಿಸಿದರು.

ಈ ವೇಳೆ ಎಂ.ಜಿ.ರಾಧಾಕೃಷ್ಣ, ಎನ್.ನಂಜಪ್ಪ, ಸೀತಾರಾಮಯ್ಯ, ಎ.ರಾಜು, ವೆಂಕಟಾಚಲಯ್ಯ, ಕೃಷ್ಣಪ್ಪ, ಶಿವರಾಜು, ಶಾಂತಕುಮಾರ್, ಭಾಗ್ಯಮ್ಮ, ಪರಮಶಿವಯ್ಯ, ವೀರಭದ್ರಯ್ಯ, ಶಾಂತಮ್ಮ, ಸವಿತಾ, ಗುರುಮಲ್ಲೇಶ್, ವೀಟಾಶೈಲಜಾ, ವಿಜಯಾಂಬಿಕೆ, ರಜಿತಾಂಬಿಕೆ ಗುರುವಂದನೆ ಸ್ವೀಕರಿಸಿದರು.

ಸಮಾಜ ಸೇವಕ ಚಿಕ್ಕಣ್ಣಯ್ಯ, 1993-94ನೇ ಸಾಲಿನ ವಿದ್ಯಾರ್ಥಿಗಳಾದ ಕೆ.ಟಿ.ರವಿಕುಮಾರ್, ಮುನಿರಾಜು, ಪರಮೇಶ್, ಪದ್ಮಜಾ, ಜ್ಯೋತಿ, ಮಹೇಶ್, ನಾಗರತ್ನ, ನೇತ್ರಾವತಿ ಸೇರಿದಂತೆ ಹತ್ತನೇ ತರಗತಿ ಸಹಪಾಠಿ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಿದ್ದರು. ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.

20ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಬಿಡದಿ ಹೋಬಳಿ ಶ್ರೀ ಮಂಜುನಾಥ ಕನ್ವೆನ್ಸನ್ ಹಾಲ್ ನಲ್ಲಿ ಶ್ರೀ ಬಸವೇಶ್ವರಸ್ವಾಮಿ, ಶ್ರೀ ಭಾಗ್ಯಬೈರವೇಶ್ವರಸ್ವಾಮಿ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 20 ಶಿಕ್ಷಕರಿಗೆ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ