ದಾಂಡೇಲಿ: ರಚನಾತ್ಮಕ ಶಿಸ್ತುಬದ್ಧ ತರಬೇತಿಯು ಮಕ್ಕಳಿಗೆ ಅವಶ್ಯವಾಗಿದ್ದು, ಕ್ರೀಡಾ ಜಗತ್ತಿನಲ್ಲಿ ಉನ್ನತ ಮಟ್ಟದ ಯಶಸ್ಸಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ದೈಹಿಕ ಮಾನಸಿಕ ಬೌಧಿಕ ಬೆಳವಣಿಗೆಗೆ ಕ್ರೀಡೆ ಅವಶ್ಯವಾಗಿದ್ದು, ಮಕ್ಕಳು ಎದ್ದು ಬಿದ್ದು ಕಲೆತಾಗ ಪರಿಪೂರ್ಣತೆ ಸಾಧಿಸಲು ಸಾಧ್ಯ. ಸ್ಪರ್ಧೆ ಇದ್ದಾಗಲೆ ವಿದ್ಯಾರ್ಥಿಗಳಿಗೆ ಕಲಿಯುವ ಹುಮ್ಮಸ್ಸು ಬರುತ್ತದೆ ಎಂದ ಅವರು, ಭಾರತದಲ್ಲಿ ಕ್ರಿಕೆಟ್ ಪ್ರಸಿದ್ಧಿ ಪಡೆದಿದ್ದು, ಈ ಕ್ರಿಕೆಟ್ ತರಬೇತಿಯಲ್ಲಿ ಅರ್ಧದಷ್ಟು ಹೆಣ್ಣು ಮಕ್ಕಳಿಗೆ ಅವಕಾಶ ನೀಡಬೇಕು. ಇಲ್ಲಿ ತರಬೇತಿ ಪಡೆದವರು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು. ಈ ಕ್ರಿಕೆಟ್ ಅಕಾಡೆಮಿ ಬೆಳವಣಿಗೆಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ತಹಸೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ನಗರಸಭೆಯ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ ಪಿ.ಆರ್.ಓ ರಾಘವೇಂದ್ರ ಆರ್,ಜೆ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ರಾಜೇಶ ತಿವಾರಿ ವೇದಿಕೆಯಲ್ಲಿದರು.ಎಸ್.ಸೋಮಕುಮಾರ ನಿರೂಪಿಸಿ ವಂದಿಸಿದರು. ಸಚಿನ ಕಾಮತ ಅಕಾಡಮಿಯ ಬೆಳವಣಿಗೆ ಹಾಗೂ ಕಾರ್ಯವೈಖರಿ ಕುರಿತು ಮಾತನಾಡಿದರು.
ಅನಿಲ ಪಾಟ್ನೇಕರ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಪ್ರಕಾಶ ಜೈನ್, ಪ್ರವೀಣ ಮಿಶ್ರಾ, ಸುಬಾಸ ಪ್ರಧಾನ, ಹೇಮಂತ ವೈಷ್ಣವ, ನಿರ್ಮಲಾ ಶರ್ಮಾ, ಯೋಗಿಶ ಅಂಕನವರ, ಇಮಾಮ ಸರ್ವರ, ಸಮ್ಯುವೆಲ್ ಎಂ., ಹನುಮಾನ ಶರ್ಮಾ ಮತ್ತು ಸದಸ್ಯರು ಶಿಬಿರ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.