ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯ ಅತಿಥಿಗಳಾಗಿ ಇಸ್ಕಾನ್ ಪುಣೆಯ ಉಪಾಧ್ಯಕ್ಷ ಸರ್ವ ಲಕ್ಷಣ ದಾಸ ಮಾತನಾಡಿ, ಇಸ್ಕಾನ್ ಪುಣೆ ವತಿಯಿಂದ ಭಗವತ್ ಗೀತಾ ಆಧರಿಸಿ ನಿಜವಾದ ವಿಶ್ವ ಶಾಂತಿಗಾಗಿ ಎಂಬ ವಿಷಯದ ಮೇಲೆ ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಬಸವನ ಬಾಗೇವಾಡಿ, ಆಲಮೇಲ, ತಾಲೂಕುಗಳಿಂದ 100 ಶಾಲೆಗಳಿಂದ 5 ಸಾವಿರ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದರು.
ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನೀಲ್ ಜೈನಾಪುರ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಅಳವಡಿಸಲು ಭಗವದ್ಗೀತೆಯಲ್ಲಿರುವ ಮೌಲ್ಯಗಳು ಮತ್ತು ತತ್ವಗಳನ್ನು ಮಕ್ಕಳಿಗೆ ತಿಳಿವಳಿಕೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.ಟಾಪ್ 109 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಪ್ರಶಸ್ತಿ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು. ಫಸ್ಟ್ ಟಾಪರ್ ನಿಧಿ ರುಣವಾಲ, ಸೆಕೆಂಡ್ ಅನುಶ್ರೀ ಶಶಿಧರ, ಟಾಪರ್ ಸಿನಿಯರ್ ಕೆಟಗೆರಿ, 8 ರಿಂದ 10 ಕ್ಲಾಸ್ ಜ್ಯೂನಿಯರ್ ಕೆಟಗೆರಿ ( 4 ರಿಂದ 7 ಕ್ಲಾಸ್) ಋತ್ವೀಕ ಬ್ಯಾಕೋಡ, 7ನೇ ಕ್ಲಾಸ್ (ಸಿಂದಗಿ) ಪ್ರಿಯಾಂಕಾ ಗರಗೆ, 5ನೆ ಕ್ಲಾಸ್ ಮೊದಲ ಬಹುಮಾನ ಎಲೆಕ್ಟ್ರಿಕಲ್ ಸೈಕಲ್, ನಂತರದ 4 ಸ್ಥಾನಕ್ಕೆ ೪ ಹೀರೋ ಸೈಕಲ್, ನಂತರದ 6 ಸ್ಥಾನಕ್ಕೆ 6 ಸ್ಮಾರ್ಟ್ ವಾಚ್, ನಂತರದ 38 ಸ್ಥಾನಕ್ಕೆ 38 ಸ್ಟೀಲ್ ಥರ್ಮಲ್ ಬಾಟಲ್, ಜೊತೆಗೆ ಪೆನ್ ಡ್ರೈವ್ಸ್, ಟಿ ಶರ್ಟ್ಸ್, ಟ್ರೆವೆಲ್ಲಿಂಗ್ ಬ್ಯಾಗ್ಸ್ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮನೋಹರ ಐನಾಪೂರ, ವಸುಂಧರಾ ಐನಾಪೂರ, ಶರದ ಬಿರಾದಾರ, ಶಾಂತಿನಿಕೇತನ ಪ್ರಾಚಾರ್ಯ ಶ್ರೀಧರ, ವಕೀಲ ಶ್ರವಣಕುಮಾರ ಭಾಗವಹಿಸಿದ್ದರು. ಇಸ್ಕಾನ್ ಪುಣೆಯ ಪ್ರತಿನಿಧಿಗಳಾದ ಬೆಂಗಳೂರಿನ ಕೇಶವದಾಸ, ಅರ್ಜುನೇಶ್ವರ ದಾಸ, ಶ್ಯಾಮ ಜಗನ್ನಾಥ ದಾಸ, ಇಸ್ಕಾನ್ ವಿಜಯಪುರ ಪ್ರತಿನಿಧಿಗಳಾದ ಹರಿಧಾಮ ದಾಸ, ನಚಿಕೇತ್, ಅಭಿಷೇಕ, ಕಪಿಲ, ಅನಿಲ, ಸಂಕೇತ ರಾಠೋಡ, ರೇಣುಕಾ, ರಾಜು ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.