ಆರೋಹಣ ಸೆಂಟ್ರಲ್ ಶಾಲೆ ವತಿಯಿಂದ ಪರಿಸರ ಜಾಥಾ

KannadaprabhaNewsNetwork |  
Published : Jun 09, 2025, 04:51 AM IST
53 | Kannada Prabha

ಸಾರಾಂಶ

ವಿವಿಧ ವೇಷಭೂಷಣಗಳಿಂದ ಅಲಂಕೃತರಾದ ಮಕ್ಕಳು, ಪ್ಲಾಸ್ಟಿಕ್ ಬಾಟಲ್‌ ಗಳಿಂದ ಮಾಡಿದ ವಸ್ತ್ರ ಧರಿಸಿ, ಪ್ಲಾಸ್ಟಿಕ್ ತ್ಯಜಿಸಿ ಎನ್ನುವಂತ ಸಂದೇಶ

ಕನ್ನಡಪ್ರಭ ವಾರ್ತೆ ಬನ್ನೂರುಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆರೋಹಣ ಸೆಂಟ್ರಲ್ ಶಾಲೆ ವತಿಯಿಂದ ಜಾಥ ಆಯೋಜಿಸಲಾಗಿತ್ತು.ಪಟ್ಟಣದಿಂದ ಸುಮಾರು 5 ಕಿ.ಮೀ. ದೂರದ ಆರೋಹಣ ಶಾಲಾ ಮಕ್ಕಳು ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು, ಜಾಥಕ್ಕೆ ಚಾಲನೆ ನೀಡಿದರು. ಆರೋಹಣ ಶಾಲಾ ಕಾರ್ಯದರ್ಶಿ ಎನ್.ಎಂ. ರಾಮಚಂದ್ರ ನೇತೃತ್ವದಲ್ಲಿ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಎನ್ನುವಂತ ಘೋಷಣೆಯೊಂದಿಗೆ ಜಾಥಾ ಪ್ರಾರಂಭವಾಯಿತು.ವಿವಿಧ ವೇಷಭೂಷಣಗಳಿಂದ ಅಲಂಕೃತರಾದ ಮಕ್ಕಳು, ಪ್ಲಾಸ್ಟಿಕ್ ಬಾಟಲ್‌ ಗಳಿಂದ ಮಾಡಿದ ವಸ್ತ್ರ ಧರಿಸಿ, ಪ್ಲಾಸ್ಟಿಕ್ ತ್ಯಜಿಸಿ ಎನ್ನುವಂತ ಸಂದೇಶ ಸಾರಿದರೆ, ಮತ್ತೋಂದು ಹಸಿರು ಗಿಡ ಮತ್ತು ಹೂವಿನ ಚಿತ್ರಣವನ್ನು ತೊಟ್ಟಂತ ಮಕ್ಕಳು ಪರಿಸರ ಉಳಿಸಿ ಎನ್ನುವ ಸಂದೇಶ ಸಾರಿ, ಸಾರ್ವಜನಿಕರ ಗಮನ ಸೆಳೆದರು.ದಾರಿ ಉದ್ದಕ್ಕೂ ಪರಿಸರ ರಕ್ಷಣೆ ಬಗ್ಗೆ ಘೋಷಣೆ ಕೂಗಿ ಎಂಎಂ ರಸ್ತೆಯಲ್ಲಿ ಸಾಗಿ ಕಾವೇರಿ ವೃತ್ತವನ್ನು ತಲುಪಿ ಜಾಥವನ್ನು ಕೊನೆಗೊಳಿಸಿದರು. ಆರೋಹಣ ಶಾಲಾ ಕಾರ್ಯದರ್ಶಿ ಎನ್.ಎಂ. ರಾಮಚಂದ್ರ, ಪ್ರಾಂಶುಪಾಲೆ ವಿಮಲಾ, ಮುಖ್ಯಶಿಕ್ಷಕಿ ಲಕ್ಷ್ಮೀ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ