ಎಪಿಎಂಸಿಗೆ ಉಪಲೋಕಾಯುಕ್ತ ಭೇಟಿ

KannadaprabhaNewsNetwork |  
Published : Jun 09, 2025, 04:49 AM IST
೮ಎಸ್.ವಿ.ಪುರ-೧ಶ್ರೀನಿವಾಸಪುರದ ಮಾವಿನ ಮಾರುಕಟ್ಟೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿರುವುದು. | Kannada Prabha

ಸಾರಾಂಶ

ಉಪ ಲೋಕಾಯುಕ್ತ ಬಿ.ವೀರಪ್ಪ, ಮಾವು ಮಂಡಿಗೆ ಭೇಟಿ ನೀಡಿದಾಗ ಟವಲ್ ಕೆಳಗೆ ಮಾವು ವ್ಯಾಪಾರ ಮಾಡುತ್ತಿದ್ದು ಕಂಡು ಬಂತು. ಕೂಡಲೇ ಮಂಡಿ ಮಾಲೀಕನ್ನು ಉಪಲೋಕಾಯುಕ್ತರು ಕರೆಯಿಸಿ ತರಾಟೆಗೆ ತಗೆದುಕೊಂಡರು. ಇದು ರೈತರ ಜೀವನದ ಪ್ರಶ್ನೆ, ವ್ಯಾಪಾರವನ್ನು ದನಗಳ ವ್ಯಾಪಾರದಂತೆ ನಡೆಸುವುದು ಯಾವ ಪದ್ದತಿ ಎಂದು ಪ್ರಸ್ನಿಸಿದರು.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಏನೇನೂ ಸರಿ ಇಲ್ಲ. ಇಲ್ಲಿ ಎಲ್ಲವು ಮೋಸ. ರೈತ ತರುವಂತ ಮಾವಿಗೆ ೧೦೦ ವ್ಯವಹಾರಕ್ಕೆ ಮಂಡಿ ಮಾಲೀಕರು ೧೦ ರುಪಾಯಿ ಕಮಿಷನ್ ತೆಗೆದುಕೊಳ್ಳುತ್ತಾರೆ. ಒಂದು ಕ್ವಿಂಟಾಲ್‌ಗೆ ೫೦ ಕೆ.ಜಿ ತರಗು ತೆಗೆಯುತ್ತಾರೆ. ನಾವು ತಂದಿರುವ ಮಾಲು ಏನು ದರಕ್ಕೆ ಮಾರಾಟವಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಿಲ್ಲ ಎಂದು ಮಾವು ಬೆಳೆಗಾರರು ಪ್ರಸಿದ್ಧ ಶ್ರೀನಿವಾಸಪುರದ ಮಾವಿನ ಮಾರುಕಟ್ಟೆಗೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರ ಮುಂದೆ ನೋವು ತೋಡಿಕೊಂಡರು. ಮಾವು ವಹಿವಾಟು ನಡೆದ ತಕ್ಷಣ ನಮಗೆ ಹಣ ಚುಕ್ತಾ ಮಾಡುವುದಿಲ್ಲ, ಕೆಲ ದಿನಗಳು ಬಿಟ್ಟುಕೊಂಡು ಬಂದ ನಂತರ ಬಿಳಿ ಚೀಟಿಯಲ್ಲಿ ವಹಿವಾಟು ವಿವರಗಳನ್ನು ಬರೆದುಕೊಡುತ್ತಾರೆ, ಪ್ರಶ್ನಿಸಿದರೆ ಯಾವುದೇ ಉತ್ತರ ಹೇಳುವುದಿಲ್ಲ ಎಂದು ರೈತರು ಸಾಲು ಸಾಲು ಸಮಸ್ಯೆಗಳ ಬಗ್ಗೆ ಉಪಲೋಕಾಯುಕ್ತರ ಗಮನಕ್ಕೆ ತಂದರು,

ಇದಕ್ಕೆ ಸ್ಪಂದಿಸಿದ ಅವರು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಹರೀಶ್‌ರನ್ನು ತರಾಟೆಗೆ ತೆಗೆದುಕೊಂಡು ರೈತರು ಹೇಳುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಬಗೆಹರಿಸುವಂತೆ ಸೂಚಿಸಿದರು.ಟವಲ್ ಕೆಳಗೆ ವ್ಯವಹಾರ

ಉಪ ಲೋಕಾಯುಕ್ತ ಬಿ.ವೀರಪ್ಪ, ಮಾವು ಮಂಡಿಗೆ ಭೇಟಿ ನೀಡಿದಾಗ ಟವಲ್ ಕೆಳಗೆ ಮಾವು ವ್ಯಾಪಾರ ಮಾಡುತ್ತಿದ್ದು ಕಂಡು ಆಗ ಕೂಡಲೇ ಮಂಡಿ ಮಾಲೀಕನ್ನು ಕರೆಯಿಸಿ ತರಾಟೆಗೆ ತಗೆದುಕೊಂಡು ಇದು ರೈತರ ಜೀವನದ ಪ್ರಶ್ನೆ, ವರ್ಷ ಪೂರ್ತಿ ಬೆಳೆದು ಮಾರುಕಟ್ಟೆಗೆ ತಂದಾಗ ಮಂಡಿ ಮಾಲೀಕರು ಮಾರಾಟ ಮಾಡಿ ಹಣ ಕೊಡಬೇಕು, ಅದು ಬಿಟ್ಟು ಧನಗಳ ವ್ಯಾಪಾರ ರೀತಿ ಟವಲ್ ಕೆಳಗೆ ದರ ನಿಗಧಿ ಮಾಡುವುದು ಇದು ಯಾವ ವ್ಯಾಪಾರದ ಪದ್ದತಿ ಎಂದು ಕಿಡಿಕಾರಿದರು.ಮಾರುಕಟ್ಟೆ ಆವರಣದಲ್ಲಿರುವ ಶೌಚಾಲಯದಲ್ಲಿ ೧೦ ರು. ವಸೂಲು ಮಾಡುತ್ತಾರೆ ಎಂದು ವ್ಯಕ್ತಿಯೊಬ್ಬರು ದೂರಿದರು, ಅಲ್ಲಿದ್ದ ನಿರ್ವಹಣಾ ಸಿಬ್ಬಂದಿ ಶೌಚಾಲಯ ಸ್ವಚ್ಛತೆಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ, ಅಧಿಕಾರಿಗಳನ್ನು ಕೇಳಿದರೆ ಏನು ಪ್ರಯೋಜನವಾಗುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದರು. ಹಾಗೆಲ್ಲ ವಸೂಲಿ ಮಾಡುವಗಿಲ್ಲ, ಕಾನೂನು ಪ್ರಕಾರ ೫ ರೂ. ಹಣ ತೆಗೆದುಕೊಳ್ಳಬೇಕು ಎಂದು ಬಿ.ವೀರಪ್ಪ ಸೂಚಿಸಿದರು.

ಕಾರ್ಮಿಕರಿಗೆ ಸೌಲಭ್ಯ

ಮಂಡಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಂದ ಮಾಹಿತಿ ಪಡೆದ ಉಪ ಲೋಕಾಯುಕ್ತರು ಕಾರ್ಮಿಕ ಕಾಯ್ದೆಯಡಿ ಸೌಲಭ್ಯಗಳನ್ನ ದೊರಕಿಸದೆ ಇರುವುದು ಅಪರಾಧ ಈ ತಕ್ಷಣದಿಂದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಲು ಹೇಳಿದರು.ತಹಸೀಲ್ದಾರ್ ಸುಧೀಂದ್ರ, ಲೋಕಾಯುಕ್ತ ಪಿಎಸ್‌ಐಗಳಾದ ಯಶ್ವಂತ್, ರೇಣುಕಾ, ಆಂಜಿನಪ್ಪ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ