ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಶ್ರೀರಾಂಪುರದ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಫಲಪ್ರದವಾಗಿ ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಮನಸ್ಸಿನ ಭಾವನೆಗಳು ಶಿಕ್ಷಕರಲ್ಲಿ ಹೊರ ಹೊಮ್ಮಬೇಕು .ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಸ್ ಡಿ ಎಂ ಸಿ ಸೇರಿದಂತೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ. ಬಡವರ ಮಕ್ಕಳು ಆಂಗ್ಲ ಮಾದ್ಯಮದಲ್ಲಿ ಕಲಿಯಲಿ ಎಂದು ಸರ್ಕಾರ ರಾಜ್ಯದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯುತ್ತಿದೆ ಎಂದರು.ಸೂಟು ಬೂಟು ಹಾಕಿ ತಿಂಡಿ ಕೊಟ್ಟು ಕಳಿಸುವ ಕಾನ್ವೆಂಟ್ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ತಾಲೂಕಿನಲ್ಲಿ ಏಳು ಮೊರಾರ್ಜಿ ಶಾಲೆಗಳಿವೆ ಅವುಗಳಲ್ಲಿ ಊಟ ವಸತಿ ಸೇರಿದಂತೆ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ . ಕೆಲ್ಲೋಡು ಬಳಿ 5 ಎಕರೆ ಪ್ರದೇಶದಲ್ಲಿ ಆದರ್ಶ ಶಾಲೆ ತೆರೆಯಲಾಗುತ್ತಿದೆ .8 ಎಕರೆ ಪ್ರದೇಶದಲ್ಲಿ ಮಸಣಿಹಳ್ಳಿ ಗೇಟ್ ಬಳಿ 40 ಕೋಟಿ ರು. ವೆಚ್ಚದಲ್ಲಿ ಕಾರ್ಮಿಕರ ಶಾಲೆ ತೆರೆಯಲಾಗುತ್ತಿದೆ ಎಂದರು.
ಶಾಸಕರ ಶಿಕ್ಷಣದ ಕಾಳಜಿಯಿಂದ ತಾಲೂಕಿನಲ್ಲಿ 10 ಕೆಪಿಎಸ್ ಶಾಲೆಗಳು ಪ್ರಾರಂಭವಾಗಲಿದೆ. ಇದಕ್ಕಾಗಿ ತಲಾ 10 ಕೋಟಿ ರು.ನಂತೆ ಒಟ್ಟು 100 ಕೋಟಿ ರು. ವೆಚ್ಚದಲ್ಲಿ ಶಾಲೆಗಳ ಅಭಿವೃದ್ದಿ ಆಗಲಿದ್ದು ಎಲ್‌ಕೆಜಿಯಿಂದ ಪಿಯುಸಿಯವರೆಗೆ ಶಿಕ್ಷಣ ಒಂದೆ ಕಡೆ ಸಿಗಲಿದೆ. ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 261 ಕೋಟಿ ರು. ಅನುದಾನವನ್ನು ಶಾಸಕರು ನೀಡಿದ್ದಾರೆ ಅಲ್ಲದೆ 146 ಕೋಟಿ ರು. ವೆಚ್ಚದಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತಿದ್ದು ಇದರಿಂದ ಎಸ್‌ಎಸ್‌ಎಲ್‌ಸಿ ಓದಿದವರು ನೇರವಾಗಿ ಎಂಜಿನಿಯರಿಂಗ್ ಪದವಿ ಶಿಕ್ಷಣಕ್ಕೆ ಸೇರಬಹುದಾಗಿದೆ ಎಂದರು