ಚಿನ್ನ ಮುಡಿಗೇರಿಸಿಕೊಂಡ ಬಡವರ ಮಕ್ಕಳು

KannadaprabhaNewsNetwork |  
Published : Apr 07, 2026, 02:15 AM IST
ಹಾವೇರಿ ವಿವಿ ಮೊದಲ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾಮರ್‌ಚಂದ್ ಗೆಹಲೋತ್ ಅವರು ಸಮಾಜಶಾಸ್ತ್ರದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ನೇತ್ರಾ ಹರಿಜನ ಅವರಿಗೆ ಎರಡು ಚಿನ್ನದ ಪದಕ ಪ್ರದಾನ ಮಾಡಿದರು. | Kannada Prabha

ಸಾರಾಂಶ

ವಿದ್ಯೆ, ಜ್ಞಾನ ಯಾರೊಬ್ಬರ ಸೊತ್ತಲ್ಲ ಎಂಬಂತೆ ಇಲ್ಲಿಯ ಹಲವು ಬಡ ರೈತ ಕುಟುಂಬಗಳ ಮಕ್ಕಳು ಉನ್ನತ ಸಾಧನೆ ತೋರಿ ಹಾವೇರಿ ವಿವಿಯ ಮೊದಲ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದರು.

ಹಾವೇರಿ: ವಿದ್ಯೆ, ಜ್ಞಾನ ಯಾರೊಬ್ಬರ ಸೊತ್ತಲ್ಲ ಎಂಬಂತೆ ಇಲ್ಲಿಯ ಹಲವು ಬಡ ರೈತ ಕುಟುಂಬಗಳ ಮಕ್ಕಳು ಉನ್ನತ ಸಾಧನೆ ತೋರಿ ಹಾವೇರಿ ವಿವಿಯ ಮೊದಲ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದರು.

ಹಾನಗಲ್ ತಾಲೂಕಿನ ಬಾಳಂಬೀಡದ ವಿದ್ಯಾರ್ಥಿನಿ ನೇತ್ರಾ ಹರಿಜನ ಎಂಎ ಸಮಾಜಶಾಸ್ತ್ರದಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ.

ಬಾಲ್ಯದಲ್ಲಿಯೇ ತಂದೆ, ತಾಯಿಯರನ್ನು ಕಳೆದುಕೊಂಡಿರುವ ಇವರು ಸಹೋದರನ ಆಸರೆಯಲ್ಲೇ ಓದಿ ಈ ಸಾಧನೆ ಮಾಡಿದ್ದಾಳೆ. ಇತ್ತೀಚೆಗೆ ವಿವಾಹವಾಗಿರುವ ನೇತ್ರಾ ಅವರಿಗೆ ಪತಿ ಅಭಿಷೇಕ ಓಲೇಕಾರ ಅವರು ಸಹ ಬೆಂಬಲ ನೀಡುತ್ತಿದ್ದಾರೆ. ಮುಂದೆ ಪಿಎಚ್‌ಡಿ ಮಾಡುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ನೇತ್ರಾ.

ಸವಣೂರು ತಾಲೂಕಿನ ಹುರಳಿಕುಪ್ಪಿಯವರಾದ ಉಸ್ಮಾನ್‌ಸಾಬ್ ಮುಲ್ಲಾ ಎಂಎ ಅರ್ಥ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ತಂದೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಬಡ ಕುಟುಂಬದಿಂದ ಬಂದಿರುವ ಉಸ್ಮಾನ್ ಅವರು ಪ್ರತಿ ದಿನ ಗಾಂಧಿಪುರದ ಸ್ನಾತಕೋತ್ತರ ಕೇಂದ್ರಕ್ಕೆ ಬಸ್‌ನಲ್ಲಿ ಓಡಾಡುತ್ತ ಶ್ರಮ ವಹಿಸಿ ಓದಿದ್ದರ ಫಲ ಈಗ ಲಭಿಸಿದೆ. ಓರ್ವ ಸಹೋದರ ಮತ್ತು ನಾಲ್ವರು ಸಹೋದರಿಯರನ್ನು ಹೊಂದಿರುವ ಉಸ್ಮಾನ್ ಅವರ ಓದಿಗೆ ಬಡತನ ಅಡ್ಡಿಯಾಗಿಲ್ಲ.ಎಂಎ ಅರ್ಥಶಾಸ್ತ್ರ ವಿಷಯದಲ್ಲಿ ಮೂರನೇ ಸ್ಥಾನ ಪಡೆದು ಸಾಧನೆ ಮಾಡಿರುವ ಸವಣೂರು ತಾಲೂಕು ಕಳಸೂರಿನ ಧಾನೇಶ್ವರಿ ಅವರ ತಂದೆ, ತಾಯಿ ಇಬ್ಬರೂ ಕೂಲಿ ಮಾಡುತ್ತಾರೆ. ಕಡು ಬಡತನದ ಕುಟುಂಬದಿಂದ ಬಂದಿರುವ ಇವರ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮುಂದೆ ಪ್ರಾಧ್ಯಾಪಕಿಯಾಗುವ ಕನಸನ್ನು ಇವರು ಹೊಂದಿದ್ದಾರೆ. ಪದಕ ವಿಜೇತರು: ಉಳಿದಂತೆ ಕಾವ್ಯಾ ಪ್ರಸಾದಿಮಠ, ಪ್ರಿಯಾಂಕಾ ಈಳಗೇರ, ಐಶ್ವರ್ಯ ಮುದಿಗೌಡರ, ಧನಲಕ್ಷ್ಮೀ ಗಂಗಾಧರ ಪಾಟೀಲ ಹಾಗೂ ನಾಗಲಕ್ಷ್ಮೀ ಬೇವಿನಮರದ ಅವರು ಸಹ ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐದು ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ
ನಿರ್ಮಾಣ ಕಾಮಗಾರಿಗೆ ಮರಳಿಲ್ಲದೆ ಪರದಾಟ