ಶಾಲಾ ವಾರ್ಷಿಕೋತ್ಸವದಲ್ಲಿ ಗಮನ ಸೆಳೆಯದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

KannadaprabhaNewsNetwork |  
Published : Apr 09, 2026, 02:15 AM IST
6ಕೆಎಂಎನ್ ಡಿ14,15 | Kannada Prabha

ಸಾರಾಂಶ

ಮೇಲುಕೋಟೆ ಪುತಿನ ಕಲಾ ಮಂದಿರದಲ್ಲಿ 150 ವರ್ಷ ಪೂರೈಸಿದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡಿತು.

ಮೇಲುಕೋಟೆ:

ಪುತಿನ ಕಲಾ ಮಂದಿರದಲ್ಲಿ 150 ವರ್ಷ ಪೂರೈಸಿದ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡಿತು.

ಶಾಲಾ ವಾರ್ಷಿಕೋತ್ಸವ ಪುತಿನ ಬರೆದ ಕವನ ಸಂಕಲನದ ಹೆಸರಲ್ಲೇ ನಡೆಸುತ್ತಾ ಬಂದಿರುವ ಹಣತೆ 11 ಸಮಾರಂಭದಲ್ಲಿ ಮಕ್ಕಳು ರಂಗಕಲೆಯನ್ನೂ ಕಲಿತು ಮೈಸೂರು ಚರಿತ್ರೆಯ ಕಿರುನಾಟಕ ವಿಗಡವಿಕ್ರಮರಾಯ ಕನ್ನಡ ಮತ್ತು ಅಕ್ಬರ್-ಬೀರಬಲ್ ಇಂಗ್ಲಿಷ್ ನಾಟಕಗಳು, ಶಾಲಾವರದಿ ಪ್ರಸ್ತುತ ಪಡಿಸುವ ಮೂಲಕ ಕಲಾಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಪೋಷಕರು ಮತ್ತು ನಾಗರೀಕರ ಮುಂದೆ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಜಾನಪದ ಸಮೂಹ ನೃತ್ಯ, ದೇಶಭಕ್ತಿನೃತ್ಯ, ನರಸಿಂಹ ನೃತ್ಯ ಗಜಾನನಸ್ತುತಿ, ಯಕ್ಷಗಾನ ನೃತ್ಯ, ಮಕ್ಕಳಮನೆಯ ಪುಟಾಣಿಗಳ ವಿವಿಧ ವೇಷ ಭೂಷಣಗಳು, ಪ್ಯಾನ್ಸಿ ಡ್ರಸ್ ಸೇರಿದಂತೆ ೨೫ಕ್ಕೂ ಹೆಚ್ಚುಕಾರ್ಯಕ್ರಮಗಳು ಅತ್ಯಾಕರ್ಷಕವಾಗಿ ಮೂಡಿಬಂದವು.

ಇಂಗ್ಲಿಷ್ ನಾಟಕವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವ ಮೂಲಕ ಖಾಸಗಿ ಶಾಲೆಗಳಿಗೆ ಯಾವುದೇ ಕಡಿಮೆಯಿಲ್ಲ ಎಂಬುದನ್ನು ತಮ್ಮ ಪ್ರತಿಭೆ ಮೂಲಕ ಮಕ್ಕಳು ತೆರೆದಿಟ್ಟರು. ವಾರ್ಷಿಕೋತ್ಸವದ ವೇಳೆ ಬೃಹತ್ ಎಲ್.ಇ.ಡಿ ಪರದೆ ಬಳಸಿದ್ದು ಕಲಾಮಂದಿರದ ದ್ವನಿ-ಬೆಳಕಿನ ವ್ಯವಸ್ಥೆ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು. ಶಿಬಿರದಲ್ಲಿ ರಕ್ತದಾನ ಮಾಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಮೇಲುಕೋಟೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್ ಕ್ರಾಸ್ ಘಟಕದ ಜಿಲ್ಲಾ ರೆಡ್ ಕ್ರಾಸ್ ಶಾಖೆ ಮಂಡ್ಯ ಮತ್ತು ಸರ್ಕಾರಿ ರಕ್ತ ನಿಧಿ ಕೇಂದ್ರ ಮಿಮ್ಸ್ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಡಿ.ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ತ ನಿಧಿ ಕೇಂದ್ರ ವೈದ್ಯ ಡಾ.ಸುರಂಜನ್ ಹಾಗೂ ಇತರೆ ಸಿಬ್ಬಂದಿ, ಗ್ರಾಪಂ ಪಿಡಿಒ ರಾಜೇಶ್ವರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಜಗದೀಶ್ ಮತ್ತು ರಾಮು ಹಾಗೂ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಸಂತೋಷ್ ಎನ್.ಅಧ್ಯಾಪಕರಾದ ಸ್ವಾಮಿ.ಎಸ್, ಡಾ.ಸುಮಾ ಇ., ಡಾ ಭವಾನಿ, ಡಾ.ವೆಂಕಟೇಶ್‌ಗೌಡ ಪರಮೇಶ್ವರ್, ಮಹೇಶ್‌ಕುಮಾರ್, ಯೋಗೇಶ್, ಡಾ.ಮಹೇಶ್, ಅರುಣ್‌ಕುಮಾರ್ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವೇಶ್ವರ, ಶಂಕರಾಚಾರ್ಯ ಜಯಂತಿಗೆ ಸಿದ್ಧತೆ
ಶ್ರಮದ ಬೆವರಿನ ಫಲ ಶಾಶ್ವತ, ಸುಖದಾಯಕ: ರಂಭಾಪುರಿ ಶ್ರೀ