ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ರಮ್ಲ ಸಿ.ಆರ್. ವಹಿಸಿದ್ದರು. ಕೊಳಕೇರಿ ಚೆಪ್ಪೆಂಡಡಿ ಸಾಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಹೇಮಾವತಿ ಎಚ್.ಎ.,ದಿನದ ಮಹತ್ವದ ಬಗ್ಗೆ ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯೆಯಾದ ಅಮೀನಾ ಮಾತನಾಡಿ, ಮಕ್ಕಳನ್ನು ಪೋಷಕರು ಅಂಗನವಾಡಿಗೆ ಕಳುಹಿಸಿದ್ದರಿಂದ ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುತ್ತರೆ ಎಂದರು.
ಆರೋಗ್ಯಾಧಿಕಾರಿ ಛಾಯಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ರೀತಿಯ ಮನೋರಂಜನಾ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ, ಬಹುಮಾನವನ್ನು ವಿತರಿಸಿ ಶುಭಹಾರೈಸಲಾಯಿತು.ಇದೇ ಸಂದರ್ಭ ಚೆಪ್ಪಂಡಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೇಮಾವತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶ್ವೇತಾ, ಸಫ್ರೀನ, ಸಹಾಯಕಿ ಗೀತಾ, ಬಾಲವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕ ವೃಂದ, ಆಶಾ ಕಾರ್ಯಕರ್ತೆ, ಪೋಷಕರೂ ಮಕ್ಕಳು ಹಾಜರಿದ್ದರು.