ಮಕ್ಕಳ ದಂತ ಆರೋಗ್ಯ ಅತ್ಯಂತ ಅಗತ್ಯ: ಡಾ.ಜಿ.ಸಿ.ಶರತ್

KannadaprabhaNewsNetwork |  
Published : Feb 16, 2026, 02:00 AM IST
ರೋಟರಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಮಕ್ಕಳ ದಂತ ಆರೋಗ್ಯ ಕಾಪಾಡುವುದು ಅವರ ಒಟ್ಟಾರೆ ಬೆಳವಣಿಗೆಗೆ ಅತ್ಯಂತ ಅಗತ್ಯ ಎಂದು ರೋಟರಿ ಸದಸ್ಯ ಡಾ.ಜಿ.ಸಿ.ಶರತ್ ಹೇಳಿದ್ದಾರೆ.

ರೋಟರಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳ ದಂತ ಆರೋಗ್ಯ ಕಾಪಾಡುವುದು ಅವರ ಒಟ್ಟಾರೆ ಬೆಳವಣಿಗೆಗೆ ಅತ್ಯಂತ ಅಗತ್ಯ ಎಂದು ರೋಟರಿ ಸದಸ್ಯ ಡಾ.ಜಿ.ಸಿ.ಶರತ್ ಹೇಳಿದ್ದಾರೆ.

ರೋಟರಿ ವಿದ್ಯಾಸಂಸ್ಥೆ , ಜಿ. ಸಿ. ಡೆಂಟಲ್ ಕ್ಲಿನಿಕ್, ರೋಟರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ ಸರಿಯಾದ ಮೌಖಿಕ ನೈರ್ಮಲ್ಯ ಅಭ್ಯಾಸಗಳು ಬಾಲ್ಯದಿಂದಲೇ ಆರಂಭ ವಾಗಬೇಕು, ಮಕ್ಕಳ ದಂತ ಆರೋಗ್ಯ ಕಾಪಾಡಲು ನಿಯಮಿತವಾಗಿ ಬ್ರಷ್ ಮಾಡುವುದು, ಸಕ್ಕರೆ ಅಂಶವಿರುವ ತಿಂಡಿ ಗಳನ್ನು ಕಡಿಮೆ ಮಾಡುವುದು ಮತ್ತು ಹಲ್ಲುಕುಳಿ ತಡೆಗಟ್ಟಲು ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ ಮಾಡುವುದು ಮುಖ್ಯ ಎಂದು ತಿಳಿಸಿದರು.

ಮಗುವಿಗೆ ಹಲ್ಲು ಹುಟ್ಟುವ ಮೊದಲು, ಪ್ರತಿ ಬಾರಿ ಹಾಲುಣಿಸಿದ ನಂತರ ಮೃದುವಾದ ಹತ್ತಿ ಬಟ್ಟೆ ಯನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ ಒಸಡುಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಬೇಕು. ಮೊದಲ ಹಲ್ಲು ಬಂದ ತಕ್ಷಣ ಹಲ್ಲುಜ್ಜುವ ಅಭ್ಯಾಸ ಮಾಡಿಸಿ ಎಂದು ಹೇಳಿದರು.ಚಾಕೊಲೇಟ್, ಸಿಹಿ ತಿಂಡಿ ಮತ್ತು ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ. ಇವು ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಮತ್ತು ಹುಳುಕಾಗಲು ಮುಖ್ಯ ಕಾರಣ. ಮಗುವಿನ ಬಾಯಲ್ಲಿ ಹಾಲಿನ ಬಾಟಲಿ ಇಟ್ಟುಕೊಂಡು ಮಲಗುವ ಅಭ್ಯಾಸ ದಿಂದ ''''''''ನರ್ಸಿಂಗ್ ಬಾಟಲ್ ಕ್ಯಾರೀಸ್'''''''' ಎಂಬ ಗಂಭೀರ ಹಲ್ಲು ಹುಳುಕಿಗೆ ಕಾರಣವಾಗಬಹುದು ಎಂದು ಹೇಳಿದರು.ಆಹಾರದ ನಂತರ ಮುಕ್ಕಳಿಸುವುದು, ಪ್ರತಿ ಬಾರಿ ಊಟ ಅಥವಾ ತಿಂಡಿ ತಿಂದ ನಂತರ ನೀರು ಕುಡಿಸುವ ಅಥವಾ ಬಾಯಿ ಮುಕ್ಕಳಿಸುವ ಅಭ್ಯಾಸ ರೂಢಿಸಿ ಕೊಳ್ಳಬೇಕು.225 ಮಕ್ಕಳಿಗೂ ಸಹ ಉಚಿತವಾಗಿ ಬ್ರಷ್ ಮತ್ತು ಟೂತ್ ಪೇಸ್ಟ್ ನ್ನು ವಿತರಿಸಲಾಯಿತು. ರೋಟರಿ ಸಂಸ್ಥೆ ಹಿರಿಯ ಸದಸ್ಯ ಮಂಜುನಾಥ್ ಬಿ.ಕೆ.ರೋಟರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಸಿ.ಟಿ., ಮಲ್ಲೇಶಪ್ಪ ವೈ.ಆರ್. ಸಾವಿತ್ರಮ್ಮ ಟಿ.ರೋಟರಿ ಶಾಲೆ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.14ಕೆಟಿಆರ್.ಕೆ.1ಃ

ತರೀಕೆರೆ ರೋಟರಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಜಿ.ಸಿ.ಶರತ್ ಮಕ್ಕಳಿಗೆ ದಂತ ಆರೋಗ್ಯ ಮಾಹಿತಿ ನೀಡಿದರು. ರೋಟರಿ ಸಂಸ್ಥೆ ಹಿರಿಯ ಸದಸ್ಯರು ಮಂಜುನಾಥ್ ಬಿ.ಕೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗುವಿನ ಸಾಮರ್ಥ ಅರಿತು ಬೋಧನೆ ಮಾಡಿ: ಡಾ. ಮಹೇಶ ದೇಸಾಯಿ
ಉತ್ತಮ ಕಾರ್ಯಕ್ಕೆ ಭಗವಂತನ ಕೃಪೆ ಎಲ್ಲರಿಗೂ ಅಗತ್ಯ: ಡಾ.ಜಿ.ಎಸ್.ಶಿವಕುಮಾರ್