ವ್ಯಾಪಾರ-ವ್ಯವಹಾರ ಜ್ಞಾನಕ್ಕೆ ಮಕ್ಕಳ ಸಂತೆ ಅವಶ್ಯಕ: ರಾಮಕೃಷ್ಣೇಗೌಡ

KannadaprabhaNewsNetwork |  
Published : Nov 24, 2025, 02:00 AM IST
23ಕೆಎಂಎನ್ ಡಿ23 | Kannada Prabha

ಸಾರಾಂಶ

ತಂದೆ ತಾಯಿಗಳು ಮನೆಯಲ್ಲಿ ತಯಾರಿಸಿಕೊಟ್ಟ ತಿಂಡಿಗಳು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿಗಳು ಹಾಗೂ ಹಣ್ಣುಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಸಂತೆಯಂತೆ ಕೂಗಿ ವ್ಯಾಪಾರ ಮಾಡುತ್ತಿರುವುದ ವ್ಯವಹಾರಿಕ ಜ್ಞಾನಕ್ಕೆ ಪೂರಕವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಪಠ್ಯಪುಸ್ತಕ ಶಿಕ್ಷಣದ ಜೊತೆಗೆ ವ್ಯಾಪಾರ-ವ್ಯವಹಾರ ಜ್ಞಾನಕ್ಕೆ ಅವಶ್ಯಕವಾಗಿದೆ ಎಂದು ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದರು.

ತಾಲೂಕಿನ ಹೇಮಗಿರಿ ಶ್ರೀಕ್ಷೇತ್ರದ ಬಿ.ಜಿ.ಎಸ್ ಪಬ್ಲಿಕ್ ಶಾಲೆಯಿಂದ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳಿಂದ ತರಕಾರಿ-ಹಣ್ಣುಗಳನ್ನು ಖರೀದಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಓದಿದವರಿಗೆಲ್ಲಾ ಸರ್ಕಾರಿ ಕೆಲಸ ಸಿಗುವುದಿಲ್ಲ. ಹಾಗಾಗಿ ವ್ಯವಹಾರ ಜ್ಞಾನ ತಿಳಿದಿದ್ದರೆ ಸ್ವಯಂ ಉದ್ಯೋಗ ವ್ಯಾಪಾರ ವ್ಯವಹಾರ ಮಾಡಲು ಈ ಮಕ್ಕಳ ಸಂತೆ ಸಹಕಾರಿ. ತಂದೆ ತಾಯಿಗಳು ಮನೆಯಲ್ಲಿ ತಯಾರಿಸಿಕೊಟ್ಟ ತಿಂಡಿಗಳು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿಗಳು ಹಾಗೂ ಹಣ್ಣುಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಸಂತೆಯಂತೆ ಕೂಗಿ ವ್ಯಾಪಾರ ಮಾಡುತ್ತಿರುವುದ ವ್ಯವಹಾರಿಕ ಜ್ಞಾನಕ್ಕೆ ಪೂರಕವಾಗಿದೆ ಎಂದರು.

ಸಂತೆಯಲ್ಲಿ ಬಗೆ ಬಗೆಯ ತರಕಾರಿಗಳು, ಹಣ್ಣುಗಳು, ತೆಂಗಿನಕಾಯಿ, ಎಳೆನೀರು, ಮಜ್ಜಿಗೆ ಪಾನಕ, ರೊಟ್ಟಿ ಉಚ್ಚೆಳ್ಳುಪುಡಿ ಚಟ್ನಿ, ಸಾವಯವ ಬೆಲ್ಲ, ಸಾವಯವ ಪದಾರ್ಥಗಳನ್ನು ವಿದ್ಯಾರ್ಥಿಗಳು ತಂದು ಮಾರಾಟ ಮಾಡಿದರು. ಪೋಷಕರು ಹಾಗೂ ಸಾರ್ವಜನಿಕರು ತರಕಾರಿ, ಹಣ್ಣುಗಳು ಹಾಗೂ ತಿಂಡಿ ತಿನಿಸುಗಳನ್ನು ಕೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಈ ವೇಳೆ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್‌ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಕಾಯಿ ಮಂಜಣ್ಣ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಅಗ್ರಹಾರಬಾಚಹಳ್ಳಿ ದೀಪಶ್ರೀಮಂಜೇಗೌಡ, ಕಾಂಗ್ರೆಸ್ ಮುಖಂಡ ಚಿನಕುರಳಿ ರಮೇಶ್, ಪತ್ರಕರ್ತ ಪಾಂಡವಪುರ ಜಯರಾಂ ಸೇರಿದಂತೆ ಬಿಜಿಎಸ್ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.

ದೊಡ್ಡರಸಿನಕೆರೆ ಗ್ರಾಮದ ಧನಂಜಯ್‌ ಗೆ ಪಿಎಚ್‌.ಡಿ

ಮಂಡ್ಯ: ಡಾ.ಕೆ.ಶಿವಶಂಕರ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಡಿ.ಎಸ್.ಧನಂಜಯ್‌ ಅವರು ಸಾಧರ ಪಡಿಸಿದ ಮ್ಯಾಥಮೆಟಿಕಲ್‌ ಸ್ಟಡಿ ಆಫ್‌ ಕನ್‌ವೆಕ್ಟಿವ್‌ ಹೀಟ್‌ ಟ್ರಾನ್ಸ್‌ಫರ್ ಫ್ರೋ ಇನ್‌ ಎವಿಸ್‌ಕಸ್‌ ಪ್ಲೂಯಿಡ್‌ ಇನ್‌ ಚಾನಲ್ಸ್‌ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಗಣಿತ ಶಾಸ್ತ್ರ ವಿಷಯದಲ್ಲಿ ಪಿಎಚ್‌.ಡಿ ಪದವಿ ನೀಡಿದರು.

ಧನಂಜಯ್‌ಕೆ.ಆರ್‌.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಿತ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದ ಅರವಿಂದಮ್ಮ ಲೇಟ್‌ ಶ್ರೀನಿವಾಸಯ್ಯರ ಪುತ್ರರಾಗಿದ್ದಾರೆ.

PREV

Recommended Stories

ಕಾಡಾನೆಗಳ ದಾಳಿಗೆ ನೆಲಸಮವಾದ ಜೋಳದ ಫಸಲು
ವಿಸಿ ನಾಲಾ ರಸ್ತೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ..!