ಏ.12 ರಿಂದ ಮೇ 10ರವರೆಗೆ ಮಕ್ಕಳ ಹಬ್ಬ ಬೇಸಿಗೆ ಶಿಬಿರ: ಮಧು ಮಳವಳ್ಳಿ

KannadaprabhaNewsNetwork |  
Published : Mar 30, 2025, 03:03 AM IST
29ಕೆಎಂಎನ್ ಡಿ12 | Kannada Prabha

ಸಾರಾಂಶ

ಶಿಬಿರದಲ್ಲಿ ಹೊಸ ಕೌಶಲ್ಯ ಕಲಿಕೆ, ಚಿತ್ರಕಲೆ, ನಾಟಕ, ಸಂಗೀತ, ಜಾನಪದ, ತತ್ವಪದ, ಗೀಗಿಪದ, ಭಾವಗೀತೆ, ಜಾನಪದ ನೃತ್ಯಗಳು, ಹಸ್ತಕಲಾ, ಕರಕುಶಲ ಸೇರಿದಂತೆ ಅಭಿವೃದ್ಧಿ ಕೌಶಲ್ಯ ರಂಗದ ಮೇಲೆ ಒಬ್ಬರ ಮಾತನಾಡುವ ಸಾಮರ್ಥ್ಯ ಮತ್ತು ಸ್ವಾಯತ್ತತೆ ಹೆಚ್ಚಿಸುವುದು ಹೊಸ ಅನುಭವಗಳ ಮೂಲಕ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಂಗಬಂಡಿ ವತಿಯಿಂದ ವಿದ್ಯಾ ವಿಕಾಸ್ ಶಾಲೆ ಆವರಣದಲ್ಲಿ ಏ.12 ರಿಂದ ಮೇ 10ರವರೆಗೆ ಮಕ್ಕಳ ಹಬ್ಬ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ರಂಗ ಬಂಡಿ ಅಧ್ಯಕ್ಷ ಮಧು ಮಳವಳ್ಳಿ ತಿಳಿಸಿದರು.

ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ರಂಗಬಂಡಿ ಮಳವಳ್ಳಿ ತಂಡವು ನಾಡಿನ ತುಂಬ ಹೊಸ ಹೊಸ ಪ್ರಯೋಗ ಪ್ರದರ್ಶನ ನೀಡುತ್ತಾ ಬರುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದರು.

ಶಿಬಿರದಲ್ಲಿ ಹೊಸ ಕೌಶಲ್ಯ ಕಲಿಕೆ, ಚಿತ್ರಕಲೆ, ನಾಟಕ, ಸಂಗೀತ, ಜಾನಪದ, ತತ್ವಪದ, ಗೀಗಿಪದ, ಭಾವಗೀತೆ, ಜಾನಪದ ನೃತ್ಯಗಳು, ಹಸ್ತಕಲಾ, ಕರಕುಶಲ ಸೇರಿದಂತೆ ಅಭಿವೃದ್ಧಿ ಕೌಶಲ್ಯ ರಂಗದ ಮೇಲೆ ಒಬ್ಬರ ಮಾತನಾಡುವ ಸಾಮರ್ಥ್ಯ, ಸ್ನೇಹಿತರೊಡನೆ ಒಡನಾಟ, ಸಂವಹನ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸ್ವಾಯತ್ತತೆ ಹೆಚ್ಚಿಸುವುದು ಹೊಸ ಅನುಭವಗಳ ಮೂಲಕ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲಾಗುವುದು ಎಂದರು.

ಸೋಶಿಯಲ್ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ಕೌಶಲ್ಯ ಪರಿಷ್ಕರಣೆ, ಹೊಸ ವಿಷಯಗಳ ಬಗ್ಗೆ, ಅರಿವು. ಇದು ಮಕ್ಕಳನ್ನು ಬೇಸಿಗೆ ರಜಾದಿನಗಳಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಲು ಒಳ್ಳೆಯ ಅವಕಾಶ ಕಲ್ಪಿಸಲಾಗಿದೆ ಎಂದರು.

ಶಿಬಿರದಲ್ಲಿ ಕಲಿತ ನಾಟಕಗಳು, ರಂಗಗೀತೆಗಳು ಜಾನಪದ ನೃತ್ಯಗಳು, ಮೂಕಾಭಿನಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ, ಶಿಬಿರದಲ್ಲಿ ನಾಡಿನ ಹೆಸರಾಂತ ಚಲನಚಿತ್ರ, ಕಿರುತರೆ ನಟರು, ಕಾಮಿಡಿ ಕಿಲಾಡಿ ಕಲಾವಿದ ಆಗಮಿಸಿ ಮಕ್ಕಳಯೊಂದಿಗೆ ಸಂವಾದ ನಡೆಸಲಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಅರ್ಜಿಯನ್ನು ಏ.1ರಿಂದ 9ರವರೆಗೆ ನೀಡಲಾಗುತ್ತಿದೆ. ಹಚ್ಚಿನ ಮಾಹಿತಿಗಾಗಿ ಮೊ-7022940964, ಮೊ-9880390406, ಮೊ-9980685548 ಸಂಪರ್ಕಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭರತ್‌ರಾಜ್, ದೊಡ್ಡಣ್ಣ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ