ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ

KannadaprabhaNewsNetwork |  
Published : Dec 20, 2025, 02:45 AM IST
18ಕೆಪಿಎಲ್23 ನಗರದ ಕಿನ್ನಾಳ ರಸ್ತೆಯ ಚನ್ನಬಸವ ನಗರದಲ್ಲಿರುವ ಎಜ್ಯುಕೇರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ  ಹಮ್ಮಕೊಂಡಿದ್ದ ಯಂಗ್ ಮೈಂಡ್ ಎಕ್ಸ್ಪೋ ಕಾರ‍್ಯಕ್ರಮ | Kannada Prabha

ಸಾರಾಂಶ

ಮಕ್ಕಳ ಶೈಕ್ಷಣಿಕ ಬೆಳವಣಿಗೆ ಅವರ ಕಲಿಕೆ ಮತ್ತು ಸ್ವ ಇಚ್ಚಾಶಕ್ತಿಯಿಂದ ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ

ಕೊಪ್ಪಳ: ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಳವಾಗುತ್ತದೆ. ಶಾಲಾ ವಾರ್ಷಿಕೋತ್ಸವಕ್ಕಿಂತ ವಸ್ತು ಪ್ರದರ್ಶನ ಮಾಡುವುದು ಮಕ್ಕಳ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಬಿ. ಹೇಳಿದರು.

ನಗರದ ಕಿನ್ನಾಳ ರಸ್ತೆಯ ಚನ್ನಬಸವ ನಗರದಲ್ಲಿರುವ ಎಜ್ಯುಕೇರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯಂಗ್ ಮೈಂಡ್ ಎಕ್ಸ್ಪೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆ ಅವರ ಕಲಿಕೆ ಮತ್ತು ಸ್ವ ಇಚ್ಚಾಶಕ್ತಿಯಿಂದ ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ, ವಿಶ್ವಮಟ್ಟದಲ್ಲಿ ವಿಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮಕ್ಕಳಿಗೆ ಬಾಲ್ಯದಲ್ಲೆ ಅದರ ಅರಿವು ಹಾಗೂ ಜ್ಞಾನ ನೀಡುವುದು ಅಗತ್ಯ ಎಂದರು.

ಎಜ್ಯುಕೇರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು, ಉತ್ತಮ ಆಟದ ಮೈದಾನ ಹಾಗೂ ಉತ್ತಮ ಕಟ್ಟಡದೊಂದಿಗೆ ಮಕ್ಕಳ ಕಲಿಕೆಗೆ ಒಳ್ಳೆಯ ವಾತಾವರಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಾಲೆಯಲ್ಲಿ ಕೇವಲ ಪಾಠದ ಶಿಕ್ಷಣಕ್ಕೆ ಮಕ್ಕಳನ್ನು ಸಿಮಿತಗೋಳಿಸದೆ, ಆಟ,ಸಂಗೀತ,ಕರಾಟೆ,ನೃತ್ಯ,ಚಿತ್ರಕಲೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ನಿಯಮಾನುಸಾರ ಶಿಕ್ಷಣ ನೀಡುತ್ತಿರುವುದು ಇತರರಿಗೆ ಮಾದರಿ ಎಂದರು.

ಈ ಸಂದರ್ಭದಲ್ಲಿ ಮಕ್ಕಳು ತಯಾರಿಸಿದ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದ ಸೊಗಡಿನ ಛದ್ಮಭೂಷಣ, ಬಂಡಿ ವಸ್ತುಪ್ರದರ್ಶನ, ಹಸು,ಕೋಳಿ ಸಾಕಾಣಿಕೆ, ಬಾವಿ ನೀರು ಸೇದುವುದು, ಕುಟ್ಟುವುದು, ಬೀಸುವ ಕಲೆ ಪ್ರದರ್ಶನ ಅಲ್ಲದೇ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ಮಾರುಕಟ್ಟೆ,ರಾಜ್ಯದ ಅದ್ಭುತಗಳ ಚಿತ್ರದ ವಿವರಣ ವಿಧಾನ, ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳ ಚಿತ್ರದೊಂದಿಗೆ ವಿವರಣಾ ವಿಧಾನ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀನಿವಾಸ ಹ್ಯಾಟಿ, ಕನ್ನಡಪ್ರಭ ಪತ್ರಿಕೆಯ ಹಿರಿಯ ವರದಿಗಾರ ಸೋಮರೆಡ್ಡಿ ಅಳವಂಡಿ, ನಿವೃತ್ತ ಉಪನ್ಯಾಸಕ ಬಸವರಾಜ ಸವಡಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಧು ಪಾವಲಿಶೆಟ್ಟರ್, ಹಿರಿಯ ಉಪನ್ಯಾಸಕ ಗಿರಿಜಾಪತಿಸ್ವಾಮಿ, ಶಿಕ್ಷಕ ಆಬಿದ್ ಹುಸೇನ್ ಸೇರಿದಂತೆ ಅನೇಕ ಗಣ್ಯರು, ಶಾಲಾ ಶಿಕ್ಷಕರು, ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ
ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದ ಅನ್ನದಾತರು