ರಾತ್ರಿ ಸುರಿದ ಭಾರೀ ಮಳೆ : ಕೊಚ್ಚಿ ಹೋಗುತ್ತಿದ್ದ ನಾಯಿ ಮರಿಗಳನ್ನು ರಕ್ಷಿಸಿದ ಚಿಣ್ಣರು

KannadaprabhaNewsNetwork |  
Published : Feb 25, 2026, 03:15 AM IST
Dog

ಸಾರಾಂಶ

ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕಾಮತ್ ಹೋಟೆಲ್‌ನ ಹಿಂಭಾಗದಲ್ಲಿನ ಒಳಚರಂಡಿ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ಐದು ನವಜಾತ ನಾಯಿ ಮರಿಗಳನ್ನು ಇಲ್ಲಿನ ಮಕ್ಕಳಾದ ಪ್ರಸಾದ.ಬಿ, ಶ್ಲೋಕ, ವೈಶು, ನಕ್ಷ, ದೀಪಾಲಿ, ಸೀಮಾಜಿ, ಕೀರ್ತಿ ರಕ್ಷಿಸಿದ್ದಾರೆ.

 ವಿಜಯಪುರ :  ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕಾಮತ್ ಹೋಟೆಲ್‌ನ ಹಿಂಭಾಗದಲ್ಲಿನ ಒಳಚರಂಡಿ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ಐದು ನವಜಾತ ನಾಯಿ ಮರಿಗಳನ್ನು ಇಲ್ಲಿನ ಮಕ್ಕಳಾದ ಪ್ರಸಾದ.ಬಿ, ಶ್ಲೋಕ, ವೈಶು, ನಕ್ಷ, ದೀಪಾಲಿ, ಸೀಮಾಜಿ, ಕೀರ್ತಿ ರಕ್ಷಿಸಿದ್ದಾರೆ.

ನಾಯಿ ಮರಿಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ  ಮಕ್ಕಳ ಧೈರ್ಯ

ತಮ್ಮ ಜೀವವನ್ನೂ ಲೆಕ್ಕಿಸದೆ ಮಳೆಯಲ್ಲಿಯೇ ಧಾವಿಸಿ ನಾಯಿ ಮರಿಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಈ ಮಕ್ಕಳ ಧೈರ್ಯವನ್ನು ಎಲ್ಲರೂ ಮೆಚ್ಚಿದ್ದಾರೆ. ಜತೆಗೆ ಮಕ್ಕಳ ಕರುಣೆಯಿಂದಾಗಿ ಐದು ಮುಗ್ಧ ಜೀವಗಳು ಬದುಕುಳಿದಿವೆ. ಮಕ್ಕಳ ಈ ಸಾಹಸ ಕಾರ್ಯದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ.ಈ ಭೂಮಿ ಮೇಲೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಕಷ್ಟದಲ್ಲಿರುವ ಪ್ರತಿ ಜೀವಿಯನ್ನು ರಕ್ಷಿಸಿ, ಬದುಕು ಕಲ್ಪಿಸುವುದೇ ನಿಜವಾದ ಮಾನವೀಯತೆ. ಅಂತ ಮಾನವೀಯತೆಯನ್ನು ಮೆರೆದ ಈ ಪುಟ್ಟ ಪುಟಾಣಿಗಳ ಕಾರ್ಯ ಶ್ಲಾಘನೀಯ. ರಾಜ್ಯ ಸಾರಿಗೆ ಬಸ್‌ಗಳ ಹಿಂಭಾಗದ ಗಾಜುಗಳ ಮೇಲೆ ಪ್ರಾಣಿಗಳ ಮೇಲೆ ಕರುಣೆ ಇರಲಿ ಎನ್ನುವ ಘೋಷವಾಕ್ಯ ಅಕ್ಷರಶಃ ಸತ್ಯವಾಗಿಸಿದವರು ಈ ನಮ್ಮ ಹೆಮ್ಮೆಯ ಪುಟಾಣಿಗಳು.

-ಡಾ.ಅಶ್ವಿನಿ ಹಿರೇಮಠ, ಮೆದುಳು ಆ್ಯಂಡ್ ನರರೋಗ ತಜ್ಞರು, ಜೀವನಜ್ಯೋತಿ ಹೃದಯ ಮತ್ತು ಮೆದುಳಿನ ಕ್ಲಿನಿಕ್‌ ವಿಜಯಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇನ್ನೂ 1 ವರ್ಷ ಸಲೀಂ ರಾಜ್ಯ ಪೊಲೀಸ್ ಬಾಸ್‌
ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ