ಮಕ್ಕಳು ಅಂಕಗಳ ಜತೆ ಕೌಶಲ್ಯ ಸಂಪಾದಿಸಿ: ಬಸವಕುಮಾರ ಶ್ರೀ

KannadaprabhaNewsNetwork |  
Published : Aug 04, 2025, 11:45 PM IST
ನಗರದ ಬೃಹನ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಸವಕುಮಾರ ಶ್ರೀ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ತಾವು ಗಳಿಸುವ ಅಂಕಗಳ ಜತೆಗೆ ಕೌಶಲ್ಯವನ್ನು ಸಹಾ ಗಳಿಸಬೇಕಿದೆ, ಮುಂದೆ ಇದು ಉಪಯೋಗವಾಗಲಿದೆ ಎಂದು ಎಸ್,ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ ಶ್ರೀಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯಾರ್ಥಿಗಳು ತಾವು ಗಳಿಸುವ ಅಂಕಗಳ ಜತೆಗೆ ಕೌಶಲ್ಯವನ್ನು ಸಹಾ ಗಳಿಸಬೇಕಿದೆ, ಮುಂದೆ ಇದು ಉಪಯೋಗವಾಗಲಿದೆ ಎಂದು ಎಸ್,ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ ಶ್ರೀಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಗಾರೇಹಟ್ಟಿ ರಸ್ತೆಯಲ್ಲಿನ ಎಸ್.ಜೆ.ಎಂ.ವಿದ್ಯಾ ಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಬ್ರಹನ್ಮಠ ಸಂಯುಕ್ತ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ (ಕ್ರೀಡಾ ಹಾಗೂ ಇತರೆ ಚಟುವಟಿಕೆಗಳು) ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಇಂದಿನ ದಿನಮಾನದಲ್ಲಿ ನೀವುಗಳಿಸುವ ಅಂಕಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲ ಇದರೊಂದಿಗೆ ಯಾವುದಾದರಲ್ಲಿ ಕೌಶಲ್ಯವನ್ನುಸಹಾಗಳಿಸಬೇಕಿದೆ. ಇದು ನಿಮ್ಮ ಮುಂದಿನ ಜೀವನಕ್ಕೆ ಉಪಯೋಗವಾಗಲಿದೆ ನಿಮಗೆ ಉತ್ತಮರಾದವರು ಮಾರ್ಗದರ್ಶಕರಾಗಿರಬೇಕು ಯಾವುದೇ ಸಿನಿಮಾದವರು ನಿಮ್ಮ ಜೀವನಕ್ಕೆ ಮಾರ್ಗದರ್ಶಕರಾಗಬಾರದು ಎಂದರು.

ನೀವು ಬೇರೆಯವರಿಗೆ ನಮಸ್ಕಾರ ಮಾಡುವುದಕ್ಕಿಂತ ನಿಮಗೆ ಬೇರೆಯವರು ನಮಸ್ಕಾರ ಮಾಡುವಂತಾಗಬೇಕಿದೆ, ಪ್ರಯತ್ನಶೀಲರಾಗಿ ಕ್ರೀಯಾಶೀಲರಾಗಿ ಸಮಯವನ್ನು ಕಳೆಯ ಬೇಡಿ ಒಂದು ನಿಮಿಷ ಹಾಳಾದರೆ ಒಂದು ದಿನ ಹಾಳಾದಂತೆ ಮುಂದೆ ಸಮಯಕ್ಕೆ ಬೆಲೆಯನ್ನು ನೀಡಲು ಸಾಧ್ಯವಿಲ್ಲ, ಈಗ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಸದುಪಯೋಗವನ್ನು ಪಡಿಸಿಕೊಳ್ಳಬೇಕಿದೆ. ಸರ್ಕಾರದಿಂದ ರಾಜ್ಯದಲ್ಲಿ ನಡೆಸುವ ಅನುದಾನ ಅನುದಾನ ರಹಿತ ಕಾಲೇಜಿನಲ್ಲಿ ಅಭ್ಯಾಸವನ್ನು ಮಾಡಿದ ಒಬ್ಬ ವಿದ್ಯಾರ್ಥಿಯೂ ಮೆಡಿಕಲ್ ಸೀಟನ್ನು ಪಡೆದಿಲ್ಲ. ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಭೋಧನೆಯನ್ನು ಮಾಡಿದರೆ ಮಕ್ಕಳು ಮುಂದೆ ಉತ್ತಮವಾದ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದರು.

ಒಂದು ಕಾಲದಲ್ಲಿ ಕಾಲೇಜಿನ ಲೈಫ್ ಗೋಲ್ಡನ್ ಲೈಫ್ ಎನ್ನುತ್ತಿದ್ದರು. ಅದರೆ ಈಗ ಕಾಲೇಜಿನ ಲೈಫ್ ಕಾಂಪಿಟೇಟಿವ್ ಲೈಫ್ ಆಗಿದೆ ಇಂದಿನ ಸ್ಪಾರ್ಧಾತ್ಮಕ ಯುಗದಲ್ಲಿ ಕಾಲೇಜಿನಲ್ಲಿಯೇ ಎಲ್ಲವನ್ನು ಕಲಿಯ ಬೇಕಿದೆ ಇದಕ್ಕೆ ತಕ್ಕ ತಯಾರಿಯನ್ನು ಸಹಾ ಮಾಡಿಕೊಳ್ಳಬೇಕಿದೆ ಇದಕ್ಕಾಗಿ ನಮ್ಮ ಬೃಹನ್ಮಠದಲ್ಲಿಯೂ ಸಹಾ ಮಕ್ಕಳಿಗೆ ಅಗತ್ಯವಾದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲಾಗುವುದು ಎಂದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಕೆ. ತಿಮ್ಮಯ್ಯ ಮಾತನಾಡಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ಬೇರೆ ಮಕ್ಕಳಿಗೆ ಸ್ಪೂರ್ತಿಯಾಗಲಿ ಮುಂದಿನ ದಿನದಲ್ಲಿ ನಾವು ಸಹಾ ಈ ರೀತಿಯಾದ ಪ್ರತಿಭಾ ಪುರಸ್ಕಾರಕ್ಕೆ ಒಳಗಾಗಬೇಕೆಂಬ ಛಲ ಬರಲಿ ಎಂದು ಮಾಡಲಾಗುತ್ತದೆ. ಕಾಲೇಜಿಗೆ ಹೊಸದಾಗಿ ಬರುವ ವಿದ್ಯಾರ್ಥಿಗಳು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಭಯ ಹಸ್ತವನ್ನು ನೀಡುವ ಕಾರ್ಯಕ್ರಮ ಸ್ವಾಗತವಾದ ಕಾರ್ಯವಾಗಿದೆ. ನಮ್ಮ ಮುಂದಿರುವ ಎರಡು ವರ್ಷವನ್ನು ಸರಿಯಾದ ರೀತಿಯಲ್ಲಿ ಬಳಕೆಯನ್ನು ಮಾಡಿಕೊಂಡರೆ ಅದು ನಿಮ್ಮ ಬದುಕಿನಲ್ಲಿ ದಾರಿ ದೀಪವಾಗಲಿದೆ ಎಂದರು.

2025ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕಲಾ ವಿಭಾಗದ ಕೆ.ರಾಹುಲ್. ಆರ್, ಲೀಲಾವತಿ, ವಿಜ್ಞಾನ ವಿಭಾಗದ ವಿಕಾಸ ಹೆಚ್. ವಾಣೀಜ್ಯ ವಿಭಾಗದ ತಶ್ವಿನಿ ಜಿ.ಎಸ್.ರವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹೆಚ್.ಎಂ ಬಸವರಾಜಪ್ಪ, ಹಾಗೂ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯ ಪಾಲಕರಾದ ಅನಿತ ಡಿ.ಎಸ್. ಅವರನ್ನು ಗೌರವಿಸಲಾಯಿತು.

ಬೃಹನ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಜಿ.ರಾಜೇಶ್ ವಹಿಸಿದ್ದರು. ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಟಿ.ಆರ್., ಎಸ್.ಜೆ.ಎಂ.ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಎನ್.ಬಿ. ಭಾಗವಹಿಸಿದ್ದರು.

ವಿದ್ಯಾರ್ಥಿ ಕೋಟೇಶ್ ಪ್ರಾರ್ಥಿಸಿದರೆ, ಸುರಕ್ಷಾ ಸ್ವಾಗತಿಸಿದರು, ಶಿವಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಮೋನಿಕ ನೃತ್ಯ ಪ್ರದರ್ಶನ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ