ಮಕ್ಕಳು ಇಡೀ ದೇಶಕ್ಕೇ ಆಸ್ತಿಯಾಗುವ ರೀತಿ ಬೆಳೆಸಬೇಕು: ರಾಮು ಗುರೂಜಿ

KannadaprabhaNewsNetwork |  
Published : Sep 22, 2025, 01:00 AM IST
ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಾರ್ಥನಾಲಯದ ಉದ್ಘಾಟನೆ | Kannada Prabha

ಸಾರಾಂಶ

ತರೀಕೆರೆ ಮಕ್ಕಳು ತಮ್ಮ ಮನೆಗಳಿಗೆ ಮಾತ್ರ ಆಸ್ತಿಯಾಗದೇ, ಇಡೀ ದೇಶಕ್ಕೇ ಆಸ್ತಿಯಾಗುವ ರೀತಿ ಬೆಳೆಯಬೇಕು ಎಂದು ಕುರುಬರಹಳ್ಳಿ ಯೋಗಾಶ್ರಮದ ರಾಮು ಗುರೂಜಿ ಹೇಳಿದ್ದಾರೆ.

- ಲಿಂಗೈಕ್ಯ ಶ್ರೀ ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪ್ರಾರ್ಥನಾಲಯದ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ತಮ್ಮ ಮನೆಗಳಿಗೆ ಮಾತ್ರ ಆಸ್ತಿಯಾಗದೇ, ಇಡೀ ದೇಶಕ್ಕೇ ಆಸ್ತಿಯಾಗುವ ರೀತಿ ಬೆಳೆಯಬೇಕು ಎಂದು ಕುರುಬರಹಳ್ಳಿ ಯೋಗಾಶ್ರಮದ ರಾಮು ಗುರೂಜಿ ಹೇಳಿದ್ದಾರೆ.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲಾ ಆವರಣದಲ್ಲಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಾಣವಾಗಿರುವ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪ್ರಾರ್ಥನಾಲಯ ಉದ್ಘಾಟನೆ, ಜಗ ಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣ, ನಿವೃತ್ತ ನೌಕರರು ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮಕ್ಕಳು ಚೆನ್ನಾಗಿ ಓದಿ, ತಮ್ಮ ಭವ್ಯ ಭವಿಷ್ಯ ರೂಪಿಸಿಕೊಂಡು, ತಾವು ಓದಿದ ಶಾಲಾ ಕಾಲೇಜ್‌ಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ತಾವು ಸೇವಿಸುವ ಆಹಾರದ ಕಡೆ ತೀವ್ರ ಗಮನನೀಡಿ, ಉತ್ತಮ ಆಹಾರ ಸೇವಿಸುವ ಮೂಲಕ ಆರೋಗ್ಯವಂತರಾಗಬೇಕು. ಯಾವುದೇ ದುಶ್ಚಟಗಳಿಗೆ ದಾಸರಾಗದಂತೆ ತಿಳಿ ಹೇಳಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ. ಟಿ. ಮಾತನಾಡಿ, ಅವಸಾನದ ಹಾದಿಯಲ್ಲಿದ್ದ ಈ ಶಾಲೆಯನ್ನು ಜೀರ್ಣೋದ್ಧಾರ ಮಾಡಿದ ಎಲ್ಲ ಸಹೃದಯಿ ಮನಸ್ಸುಗಳಿಗೆ ಅಲ್ಲದೇ ಸುಮಾರು ಐದೂವರೆ ಲಕ್ಷ ಗಳನ್ನು ವಿವಿಧ ದಾನಿಗಳು ದೇಣಿಗೆ ನೀಡುವ ಮೂಲಕ ಮಕ್ಕಳಿಗೆ ತೀವ್ರ ಅಗತ್ಯವಾಗಿದ್ದ ಈ ಪ್ರಾರ್ಥನಾಲಯ, ಭೋಜನಾಲಯ ನಿರ್ಮಿಸಲು ಸಹಕರಿಸಿದ ಎಲ್ಲ ಮನಸ್ಸುಗಳಿಗೆ ಆಭಾರಿ ಎಂದರು. ಆಶಾವಾದಿಗಳಾಗಿ ಮುನ್ನುಗ್ಗಿದಲ್ಲಿ ಏನನ್ನಾದರೂ ಅದ್ಭುತವಾದುದನ್ನು ಸಾಧಿಸ ಬಹುದೆಂಬುದಕ್ಕೆ ನೇರಲಕೆರೆ ನಮ್ಮ ಶಾಲಾ ಪ್ರಗತಿಯೇ ಸಾಕ್ಷಿ ಎಂದು ತಿಳಿಸಿದರು. ಸ್ಥಳೀಯ ಸಲಹಾ ಸಮಿತಿ ಸದಸ್ಯ ಪುಟ್ಟಪ್ಪ ಟಿ. ಶ್ರೀ ಬಸವೇಶ್ವರರ ಜೀವನದ ಸಾಧನೆ ಬಗ್ಗೆ ಮಾತನಾಡಿ, ಹಾರುವ ಕುಲದಲ್ಲಿ ಜನಿಸಿದ ಬಸವಣ್ಣ ಹೇಗೆ ಜಾತಿ ಪದ್ಧತಿಯ ಕಬಂಧ ಬಾಹುಗಳನ್ನು ಸಾಮಾಜಿಕ ವ್ಯವಸ್ಥೆಯಿಂದ ಕಿತ್ತೊಗೆಯುವ ಪ್ರಯತ್ನ ಮಾಡಿದರು ಎಂಬುದನ್ನು ವಿವಿಧ ಉದಾಹರಣೆಗಳ ಮೂಲಕ ಸಾಕ್ಷೀಕರಿಸಿದರು. ಬಸವಣ್ಣನವರ ಹಾದಿಯಲ್ಲಿ ನಾವೆಲ್ಲಾ ನಡೆದು, ನಮ್ಮ ಮನಸ್ಸುಗಳಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿಗಳ ನಿರ್ಮೂಲನೆ ಮಾಡಬೇಕು ಎಂದು ತಿಳಿಸಿದರು.ನಿವೃತ್ತ ಶಿಕ್ಷಕ ಮಲ್ಲಪ್ಪ ಎಂ. ಬಿ. ಅವರು ಮಾತನಾಡಿ ಮಕ್ಕಳು ತೀವ್ರ ಶ್ರದ್ಧೆಯಿಂದ ಅಭ್ಯಾಸ ಮಾಡುವ ಮೂಲಕ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು. ಮುಂಬರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆಯುವ ಮಕ್ಕಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು. ಹಾಜರಿದ್ದ ಇತರರು ಉತ್ತಮ ಅಂಕ ಪಡೆಯುವ ಮಕ್ಕಳಿಗೆ ಬಹುಮಾನ ನೀಡುವುದಾಗಿ ತಿಳಿಸಿದರು. ಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ.ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಿಂದ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದು, ಅದರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂದು ಕೋರಿದರು. ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿಗಳಾದ ಷಡಾಕ್ಷರಪ್ಪ, ಬಸವರಾಜಪ್ಪ, ಮಲ್ಲೇಶಪ್ಪ, ಮಹೇಶಪ್ಪ, ನಿಂಗಪ್ಪ, ಮಹೇಶಣ್ಣ, ನಾಗರಾಜಣ್ಣ, ಜಗದೀಶ್, ಪಾರ್ವತಮ್ಮ, ಶಿರಳ್ಳಿ ಓಂಕಾರಣ್ಣ, ಬಸವರಾಜಪ್ಪ ಎನ್ ಎಂ, ದಾನಿಗಳಾದ ಮಿರಳೇ ನಹಳ್ಳಿ ಪರಮೇಶ್ವರಪ್ಪ, ನಾಗೇನಹಳ್ಳಿ ರಾಜಣ್ಣ, ನೇರಲಕೆರೆಯ ಶಂಕರಣ್ಣ, ನಿವೃತ್ತ ಶಿಕ್ಷಕರು, ದಾನಿಗಳು, ಶಾಲಾ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.-

21ಕೆಟಿಆರ್.ಕೆ.02ಃ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಆವರಣದಲ್ಲಿ ನಿರ್ಮಾಣ ವಾಗಿರುವ ಲಿಂಗೈಕ್ಯಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಾರ್ಥನಾಲಯ ಉದ್ಘಾಟನೆ, ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ರಾಮು ಗುರೂಜಿ ಇತರರಿದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ